ಭಾರತ – ಕೆನಡಾ ನಡುವಿನ ಮುಸುಕಿನ ಗುದ್ದಾಟ – 41 ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡ ಕೆನಾಡ
ಭಾರತ ಮತ್ತು ಕೆನಡಾ ನಡುವಿನ ಮುಸುಕಿನ ಗುದ್ದಾಟ ಹೆಚ್ಚಾಗಿದೆ. ಖಲಿಸ್ತಾನ್ ಉಗ್ರನ ಹತ್ಯೆ ವಿಚಾರವಾಗಿ ಉಂಟಾಗಿರುವ ಬಿಕ್ಕಟ್ಟಿನ ನಡುವೆ ಹೆಚ್ಚಿನ ಸಂಖ್ಯೆಯ ರಾಜತಾಂತ್ರಿಕರನ್ನು ಭಾರತದಿಂದ ಕೆನಾಡಗೆ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಕೆನಡಾ ವಿದೇಶಾಂಗ ಸಚಿವೆ ಮೆಲಾನಿಯೆ ಜೊಲಿ ಮಾಹಿತಿ ನೀಡಿದ್ದು, ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜ ಹತ್ಯೆ ವಿಚಾರವಾಗಿ ಉಂಟಾಗಿರುವ ಬಿಕ್ಕಟ್ಟಿನ ನಡುವೆ 62 ರಾಜತಾಂತ್ರಿಕ ಅಧಿಕಾರಿಗಳ ಪೈಕಿ 41 ಮಂದಿಯನ್ನು ಭಾರತದಿಂದ ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಹಾಗೂ ಹಮಾಸ್ ನಡುವೆ ಭೀಕರ ಯುದ್ಧ – ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಪೂರೈಕೆ ಸ್ಥಗಿತಗೊಳಿಸಿದೆ ಕೇರಳ
ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಅದಾದ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ಹಳಸಿದೆ. ಉಭಯ ದೇಶಗಳು ಸಮಾನ ಸಂಖ್ಯೆಯಲ್ಲಿ ರಾಜತಾಂತ್ರಿಕ ಸಿಬ್ಬಂದಿಯನ್ನು ಹೊಂದಿರುವುದು ಅಗತ್ಯ ಎಂದು ಕಳೆದ ತಿಂಗಳು ಪ್ರತಿಪಾದಿಸಿದ್ದ ಭಾರತ, ಹೆಚ್ಚುವರಿ ರಾಜತಾಂತ್ರಿಕರನ್ನು ಅಕ್ಟೋಬರ್ 10ರೊಳಗೆ ವಾಪಸ್ ಕರೆಸಿಕೊಳ್ಳಬೇಕು ಎಂದು ಕೆನಡಾಗೆ ಸೂಚಿಸಿತ್ತು. ಭಾರತದ ಸೂಚನೆ ಬೆನ್ನಲ್ಲೇ ಕೆನಾಡ 41 ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡಿದೆ ಎಂದು ವರದಿಯಾಗಿದೆ.