ಕೆನಡಾ ಪ್ರಧಾನಿ ಕಾರ್ನಿ ಇಂಡಿಯಾಕ್ಕೆ ಭೇಟಿ – ಮತ್ತೆ ಟ್ರ್ಯಾಕ್‌ಗೆ ಬರುತ್ತಾ ಹಳಸಿದ ಭಾರತ -ಕೆನಡಾ ಸಂಬಂಧ?

ಶೀಘ್ರದಲ್ಲೇ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಭಾರತದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು ಇದರ ಬೆನ್ನಲ್ಲೇ ಈ ಹಿಂದೆ ಕೆನಡಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತ ನಡುವಿನ ಸಂಬಂಧ ವಿವಿಧ ಕಾರಣಗಳಿಂದಾಗಿ ಹಳ್ಳ ಹಿಡಿದಿತ್ತು. ಈ ಹಿಂದಿನ ಪ್ರಧಾನಿ ಜಸ್ಟಿನ್ ಟ್ರುಡೋ ಅಧಿಕಾರಾವಧಿಯಲ್ಲಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ವಿವಿಧ ಕಾರಣಗಳಿಂದಾಗಿ ಹಳ್ಳ ಹಿಡಿದಿತ್ತು.
ಖಲಿಸ್ತಾನಿ ಉಗ್ರರ ಮತ್ತು ಖಲಿಸ್ತಾನಿ ಹೋರಾಟದ ಬೆನ್ನಿಗೆ ನಿಂತ ಆರೋಪ ಜಸ್ಚಿನ್ ಟ್ರುಡೋ ಮೇಲಿತ್ತು. ಇದು ಭಾರತದ ಕೆಂಗಣ್ಣಿಗೆ ಗುರಿಯಾಗಿತ್ತು. ಮಾತ್ರವಲ್ಲದೇ ಖಲಿಸ್ತಾನಿ ಉಗ್ರನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಜಸ್ಟಿನ್ ಟ್ರುಡೋ ಸರ್ಕಾರದ ಆರೋಪ ಭಾರತವನ್ನು ಮತ್ತಷ್ಟು ಕೆರಳಿಸಿತ್ತು. ಈಗ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಮತ್ತೆ ಹಳಿಗೆ ತರಲು ಕೆನಡಾ ಸರ್ಕಾರ ಸರ್ಕಸ್ ಮಾಡ್ತಿದೆ. ಇದರ ಮೊದಲ ಹಂತವಾಗಿ ಇದೇ ಮಾರ್ಚ್ ನಲ್ಲಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೋಗಿಲು ನಿವಾಸಿಗಳು ಲಕ್ಷ, ಲಕ್ಷ ಕೊಟ್ಟು ಮನೆ ಖರೀದಿಸಿದ್ರಾ? – ಆರೋಪಿಗಳ ಖಾತೆಯಲ್ಲಿ ಕೋಟಿ-ಕೋಟಿ ವ್ಯವಹಾರ!
ಮೂಲಗಳ ಪ್ರಕಾರ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮಾರ್ಚ್ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಬಹುದು ಮತ್ತು ಎರಡೂ ಕಡೆಯವರು ಮುಕ್ತ ವ್ಯಾಪಾರ ಒಪ್ಪಂದದ ಕುರಿತು ತಮ್ಮ ಮಾತುಕತೆಗಳನ್ನು ಔಪಚಾರಿಕವಾಗಿ ಪ್ರಾರಂಭಿಸಲು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.ಭಾರತ ಮತ್ತು ಕೆನಡಾ 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸಲು ಅಂದರೆ ಹಾಲಿ ಇರುವ ವ್ಯಾಪಾರವನ್ನು $50 ಶತಕೋಟಿಗೆ ಏರಿಸಲು ನಿರ್ಧರಿಸಿವೆ. ಕಾರ್ನಿ ಅವರ ಭೇಟಿಯ ಸಮಯದಲ್ಲಿ ಉಭಯ ದೇಶಗಳು AI, ನಿರ್ಣಾಯಕ ಖನಿಜಗಳು, ಇಂಧನ ಮತ್ತು 10 ವರ್ಷಗಳ 2.8 ಬಿಲಿಯನ್ ಡಾಲರ್ ಯುರೇನಿಯಂ ಪೂರೈಕೆ ಒಪ್ಪಂದಕ್ಕೂ ಸಹಿ ಹಾಕಬಹುದು. ಇದು ಭಾರತದ ಪರಮಾಣು ಯೋಜನೆಗೆ ಶಕ್ತಿ ತುಂಬಲಿದೆ ಎಂದು ಹೇಳಲಾಗಿದೆ.

ನೋಡಿರಿ

