ಹಣೆ ಮೇಲೆ ನೀರು ತುಂಬಿದ ಗ್ಲಾಸ್‌ ಇಟ್ಟು ಬ್ಯಾಲೆನ್ಸ್‌ ಮಾಡಿಕೊಂಡು ನಡೆದ ಶ್ವಾನ!

ಹಣೆ ಮೇಲೆ ನೀರು ತುಂಬಿದ ಗ್ಲಾಸ್‌ ಇಟ್ಟು ಬ್ಯಾಲೆನ್ಸ್‌ ಮಾಡಿಕೊಂಡು ನಡೆದ ಶ್ವಾನ!

ಪ್ರಾಣಿಗಳಿಗೆ ಮನುಷ್ಯರಂತೆ ಮಾತು ಬಾರದಿರಬಹುದು ಆದರೆ ಅವುಗಳು ತಮ್ಮ ನಡವಳಿಯೆ, ವಾತ್ಸಲ್ಯ, ಮಾನವೀಯ ಗುಣಗಳ  ಮೂಲಕವೇ ಎಲ್ಲರ ಹೃದಯ ಗೆಲ್ಲುತ್ತವೆ.  ಪ್ರಾಣಿಗಳಿಗೆ ಇರುವಷ್ಟು ಕರುಣೆ, ದಯೆ, ಮಾನವೀಯ ಮೌಲ್ಯ ಮನುಷ್ಯರಲ್ಲಿ ಕಾಣಸಿಗುವುದು ಬಲು ಅಪರೂಪ ಎಂದು ಹೆಚ್ಚಿನವರು ಹೇಳುತ್ತಾರೆ. ಇನ್ನೂ ಅನೇಕ ಸಾಕುಪ್ರಾಣಿಗಳು ಮನುಷ್ಯರ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತವೆ. ಸಾಕು ನಾಯಿಗಳು ಮನುಷ್ಯರ ಪ್ರತಿಯೊಂದು ಕೆಲಸಗಳನ್ನು ಗಮನಿಸಿ, ಅವುಗಳನ್ನು ಅನುಕರಣೆ ಮಾಡುವುದನ್ನು ನಾವು ನೋಡಿದ್ದೇವೆ. ಇದೀಗ ಇಲ್ಲೊಂದು ನಾಯಿ ಮನುಷ್ಯರಂತೆ ತನ್ನ ಹಣೆಯ ಮೇಲೆ ನೀರು ತುಂಬಿದ ಲೋಟವನ್ನು ಬ್ಯಾಲೆನ್ಸ್ ಮಾಡುತ್ತಾ ಹೊತ್ತುಕೊಂಡು ಹೋಗಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಆಹಾರ ಹುಡುಕುತ್ತಾ ಬಂದ ಕರಡಿಗೆ ಕಾದಿತ್ತುಒಂದು ಶಾಕ್​! – ವಿಡಿಯೋ ವೈರಲ್…

ಶ್ವಾನಗಳು ನಿಷ್ಠೆ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿವೆ. ಮನುಷ್ಯರು ಏನು ಮಾಡುತ್ತಾರೆ ಅವುಗಳನ್ನೇ ಅನುಕರಣೆ ಮಾಡುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಲೇ ಇರುತ್ತವೆ, ಇದೀಗ ಇಂತಹದ್ದೇ ವಿಡಿಯೋವೊಂದು ಭಾರಿ ವೈರಲ್‌ ಆಗಿದೆ. ಶ್ವಾನವೊಂದು ತನ್ನ ಹಣೆಯ ಮೇಲೆ ನೀರು ತುಂಬಿದ ಲೋಟವನ್ನು ಬ್ಯಾಲೆನ್ಸ್ ಮಾಡುತ್ತಾ ಹೊತ್ತುಕೊಂಡು ಹೋಗಿದೆ. ಅಲ್ಲಾ ಹಣೆಯ ಮೇಲೆ ಲೋಟವಿಟ್ಟು ನಡೆದುಕೊಂಡು ಹೋದ್ರೆ ನೀರು ಚೆಲ್ಲದಿರಲು ಅಥವಾ ಲೋಟ ಕೆಳಗೆ ಬೀಳದಿರಲು ಸಾಧ್ಯನಾ ಅಂತ ನಾವೆಲ್ರೂ ಯೋಚನೆ ಮಾಡ್ತಿದ್ರೆ, ಈ ಶ್ವಾನ ಮಾತ್ರ ನನ್ನಿಂದ ಅಸಾಧ್ಯವೆಂಬ ಮಾತೇ ಇಲ್ಲ ಎನ್ನುತ್ತಾ ನೀರು ಲೋಟವನ್ನು ಹಣೆಯ ಮೇಲೆ ಹೊತ್ತು ನಡೆದುಕೊಂಡು ಹೋಗಿದೆ.

ಈ ವಿಡಿಯೋವನ್ನು @everythingaboutnepal ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದ್ದು, ಶ್ವಾನವೊಂದು ಬ್ಯಾಲೆನ್ಸ್ ಮಾಡುತ್ತಾ, ಹಣೆಯ ಮೇಲೆ ನೀರು ತುಂಬಿದ ಲೋಟವನ್ನು ಹೊತ್ತು ನಡೆಯುವ ದೃಶ್ಯವನ್ನು ಕಾಣಬಹುದು. ವಿಡಿಯೋದಲ್ಲಿ ಒಂದು ಪ್ಲಾಸ್ಟಿಕ್ ಲೋಟದಲ್ಲಿ ನೀರು ತುಂಬಿಸಿ, ಅದನ್ನು ಶ್ವಾನದ ಹಣೆಯ ಮೇಲೆ ಇರಿಸಲಾಗಿದೆ. ಈ ಶ್ವಾನ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು, ಯಾವುದೇ ಕಾರಣಕ್ಕೂ ನೀರಿನ ಲೋಟನ್ನು ಕೆಳಗೆ ಹಾಕದೆ ನಿಧಾನಕ್ಕೆ ಒಂದೊಂದು ಹೆಜ್ಜೆಯನ್ನಿಡುತ್ತಾ ಬ್ಯಾಲೆನ್ಸ್ ಮಾಡುತ್ತಾ ಲೋಟವನ್ನು ಹೊತ್ತು ನಡೆದುಕೊಂಡು ಬರುತ್ತಿರುವುದನ್ನು ಕಾಣಬಹುದು. ನಾಯಿಯ ಬುದ್ಧಿವಂತಿಕೆಗೆ ಈಗ  ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

Shwetha M