ಮೊಳಕೆ ಬಂದ ಬೀಟ್ರೂಟ್, ಆಲೂಗಡ್ಡೆ ತಿನ್ನಬಹುದಾ? – ಈ ತಪ್ಪು ಮಾಡುತ್ತಿದ್ದರೆ ಇಂದೇ ಬಿಟ್ಟುಬಿಡಿ!

ಮೊಳಕೆ ಬಂದ ಬೀಟ್ರೂಟ್, ಆಲೂಗಡ್ಡೆ ತಿನ್ನಬಹುದಾ? – ಈ ತಪ್ಪು ಮಾಡುತ್ತಿದ್ದರೆ ಇಂದೇ ಬಿಟ್ಟುಬಿಡಿ!

ಹೆಚ್ಚಿನವರ ಮನೆಯಲ್ಲಿ ಬೇರೆ ಯಾವುದೇ ತರಕಾರಿಗಳು ಇಲ್ಲಾಂದ್ರೂ ಕೂಡ, ಮೂರು-ನಾಲ್ಕು ಗಡ್ಡೆ ಆಲೂಗಡ್ಡೆ, ಬಿಟ್ರೂಟ್‌ ಮಾತ್ರ ಇದ್ದೇ ಇರುತ್ತದೆ. ವರ್ಷ ಪೂರ್ತಿ ಸಿಗುವ ಈ ಆಲೂಗಡ್ಡೆ, ಇತರ ತರಕಾರಿಗಳಿಗೆ ಹೋಲಿಸಿದರೆ, ಕೈಗೆಟಕುವ ಬೆಲೆಯಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕೆ ಪ್ರತಿಯೊಬ್ಬರೂ ಕೂಡ  ಆಲೂಗಡ್ಡೆ & ಬಿಟ್ರೂಟ್‌ ಖರೀದಿಸುತ್ತಾರೆ. ಆದ್ರೆ ಕೆಲವೊಮ್ಮೆ ಆಲೂಗಡ್ಡೆ ಹಾಗೂ ಬಿಟ್ರೂಟ್‌ನಲ್ಲಿ ಮೊಳಕೆ ಬರುತ್ತದೆ. ಇದನ್ನ ಸೇವಿಸಬಹುದಾ ಇಲ್ವಾ ಅನ್ನೋ ಗೊಂದಲ ಅನೇಕರಲ್ಲಿದೆ.

ಇದನ್ನೂ ಓದಿ: ಡಯಟ್‌ ಅಂತ ಮಿಕ್ಸ್ಡ್‌ ಫ್ರೂಟ್ಸ್‌ ತಿಂತೀರಾ? – ಎಚ್ಚರ.. ಇದ್ರಿಂದಲೇ ನಿಮ್ಮ ಆರೋಗ್ಯ ಹಾಳಾಗುತ್ತೆ!

ಮನೆಯಲ್ಲಿ ತೇವಾಂಶ ಜಾಸ್ತಿ ಇದ್ರೆ  ಅಥವಾ ತರಕಾರಿಗಳನ್ನ ಸರಿಯಾಗಿ ಸ್ಟೋರ್ ಮಾಡದಿದ್ರೆ ಮೊಳಕೆ ಬಂದು ಕೊಳೆಯುತ್ತವೆ. ಮೊಳಕೆ ಬಂದ ತರಕಾರಿ ತಿನ್ನೋದು ಸೇಫ್ ನಾ ಅನ್ನೋ ಪ್ರಶ್ನೆ ಬರುತ್ತೆ. ಮೊಳಕೆ ಬಂದ ಆಲೂಗಡ್ಡೆ, ಬೀಟ್ರೂಟ್ ಪೌಷ್ಟಿಕ ಅಂತ ತಿಳ್ಕೊಂಡಿರ್ತಾರೆ. ಆದ್ರೆ ತಜ್ಞರು ಇದಕ್ಕೆ ಬೇರೆಯೇ ಉತ್ತರ ನೀಡಿದ್ದಾರೆ.

ತಜ್ಞರ ಪ್ರಕಾರ ಆಲೂಗಡ್ಡೆಯಲ್ಲಿ ಸೊಲನೈನ್ ಅನ್ನೋ ವಿಷ ಇರುತ್ತೆ. ಮೊಳಕೆ ಬಂದಾಗ, ಹಸಿರಾದಾಗ ಇದು ಜಾಸ್ತಿ ಆಗುತ್ತೆ. ಸೊಲನೈನ್ ತಿಂದ್ರೆ ಹೊಟ್ಟೆನೋವು, ವಾಂತಿ, ತಲೆನೋವು, ವಿಷ ಆಗಬಹುದು. ಮಳೆಗಾಲದಲ್ಲಿ ಆಲೂಗಡ್ಡೆ ಬೇಗ ಮೊಳಕೆ ಬರುತ್ತೆ. ಹಸಿರು ಭಾಗ, ಮೊಳಕೆ ತೆಗೆದು ಬಳಸಿ. ಆದ್ರೆ ತುಂಬಾ ಮೊಳಕೆ ಬಂದಿದ್ರೆ ತಿನ್ನಬೇಡಿ.

ಮಳೆಗಾಲದಲ್ಲಿ ಮೊಳಕೆ ಬಂದ ಆಲೂಗಡ್ಡೆ ತಿನ್ನಬೇಡಿ. ಬೀಟ್ರೂಟ್ ಮೊಳಕೆ ಬಂದ್ರೆ ಅಷ್ಟೇನೂ ಅಪಾಯ ಇಲ್ಲ. ಆದ್ರೆ ಪೌಷ್ಟಿಕಾಂಶ ಕಡಿಮೆ ಆಗುತ್ತೆ. ತರಕಾರಿ ಬಳಸೋ ಮುಂಚೆ ಪರಿಶೀಲಿಸಿ. ಒದ್ದೆ ವಾತಾವರಣದಲ್ಲಿ ಆಹಾರ ಸ್ಟೋರೇಜ್‌ಗೆ ಗಮನ ಕೊಡಿ.

ಬೀಟ್ರೂಟ್‌ನಲ್ಲಿ ಸೊಲನೈನ್ ಇರಲ್ಲ. ಮೊಳಕೆ ಬಂದ್ರೂ ಅಪಾಯ ಇಲ್ಲ. ಆದ್ರೆ ಪೌಷ್ಟಿಕಾಂಶ, ರುಚಿ ಕಡಿಮೆ ಆಗುತ್ತೆ. ಸಕ್ಕರೆ, ಆಂಟಿ ಆಕ್ಸಿಡೆಂಟ್‌ಗಳು ಕಡಿಮೆ ಆಗುತ್ತವೆ. ಬೀಟ್ರೂಟ್ ಸ್ವಲ್ಪ ಮೊಳಕೆ ಬಂದು ಫ್ರೆಶ್ ಇದ್ರೆ ತೊಳೆದು ಸಿಪ್ಪೆ ತೆಗೆದು ಬಳಸಬಹುದು. ಮೆತ್ತಗೆ, ವಾಸನೆ ಬರ್ತಿದ್ರೆ, ಕೊಳೆಯುತ್ತಿದ್ರೆ ತಿನ್ನಬೇಡಿ.

Shwetha M

Leave a Reply

Your email address will not be published. Required fields are marked *