ಎಟಿಎಂ ಇಲ್ಲದೆ ಹಣ ವಿಥ್‌ಡ್ರಾ ಮಾಡಬಹುದು – ಹೇಗೆ ಗೊತ್ತಾ?

ಎಟಿಎಂ ಇಲ್ಲದೆ ಹಣ ವಿಥ್‌ಡ್ರಾ ಮಾಡಬಹುದು – ಹೇಗೆ ಗೊತ್ತಾ?

ನವದೆಹಲಿ: ಜನಪ್ರಿಯ ಗೂಗಲ್ ಪೇ, ಫೋನ್‌ ಪೇ ಮತ್ತು ಪೇಟಿಎಂ ನಂತಹ ಯುಪಿಐ ಆಧಾರಿತ ಅಪ್ಲಿಕೇಷನ್‌ಗಳ ಮೂಲಕ ಎಟಿಎಂ ನಲ್ಲಿ ಹಣ ವಿಥ್‌ಡ್ರಾ ಮಾಡುವ ಆಯ್ಕೆ ಜಾರಿಯಾಗಿದೆ. ಇದರಿಂದ ದೇಶದ ಜನತೆ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಇಲ್ಲದೆಯೂ ಎಟಿಎಂ ನಲ್ಲಿ ಸುಲಭವಾಗಿ ಹಣವನ್ನು ವಿಥ್‌ಡ್ರಾ ಮಾಡಲು ಸಾಧ್ಯವಾಗಿದೆ. ಜನರು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪಾಸ್‌ವರ್ಡ್ ಮರೆತರೂ ಅಥವಾ ಕಳೆದುಕೊಂಡರೂ, ಗೂಗಲ್ ಪೇ, ಪೇಟಿಎಂ, ಫೋನ್ ಪೇ ನಂತಹ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಿ ಹಣ ಪಡೆಯಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪ್ರಸ್ತಾವನೆಯ ನಂತರ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಹಿಂಪಡೆಯುವಿಕೆ (ಐಸಿಸಿಡಬ್ಲ್ಯು) ಎಂಬ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಜನರು ತಮ್ಮ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಎಟಿಎಂಗಳಿಂದ ಹಣ ಹಿಂಪಡೆಯಲು ಅನುವು ಮಾಡಿಕೊಡಲಾಗಿದ್ದು, ಈ ಸೇವೆ ಇದೀಗ ಲಭ್ಯವಾಗಿದೆ.

ಇದನ್ನೂ ಓದಿ: ಇಟಲಿಯಲ್ಲಿ ಭೂಕುಸಿತ- ನವಜಾತ ಶಿಶು ಸೇರಿ ಏಳು ಮಂದಿ ಸಾವು, ಐವರು ನಾಪತ್ತೆ

ಯುಪಿಐ ಬಳಸಿಕೊಂಡು ಕಾರ್ಡ್‌ರಹಿತ ನಗದು ಹಿಂಪಡೆಯುವ ಸೌಲಭ್ಯವು ಪ್ರಸ್ತುತ ಆಯ್ದ ಬ್ಯಾಂಕ್‌ಗಳಿಗೆ ಮಾತ್ರ ಲಭ್ಯವಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಹೆಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಗ್ರಾಹಕರು ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಹಣ ವಿಥ್‌ಡ್ರಾ ಮಾಡಲು ಅವಕಾಶ ಕಲ್ಪಿಸಿವೆ. ಈ ಮೂರು ಬ್ಯಾಂಕ್‌ಗಳು ಪ್ರಸ್ತುತ ಕೆಲ ಆಯ್ದ ಎಟಿಎಂ ಮಷಿನ್‌ಗಳಲ್ಲಿ ಯುಪಿಐ ಸ್ಕ್ಯಾನ್ ಆಯ್ಕೆಗಯನ್ನು ಪರಿಶೀಲಿಸುತ್ತಿವೆ.

ಗೂಗಲ್ ಪೇ, ಪೇಟಿಎಂ, ಫೋನ್ ಪೇ ನಂತಹ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಿ ಹಣ ಪಡೆಯಲು ಈ ಕೆಳಗೆ ನೀಡಲಾಗಿರುವ ಕ್ರಮಗಳನ್ನು ಅನುಸರಿಸಬೇಕು.

ಯುಪಿಐ ವಿಥ್‌ಡ್ರಾ ಸೇವೆಯನ್ನು ಹೊಂದಿರುವ ಎಟಿಎಂ ಮಷಿನ್ ಡಿಸ್‌ಪ್ಲೇ ಮೇಲೆ ‘ವಿಥ್‌ಡ್ರಾ ಕ್ಯಾಶ್’ ಆಯ್ಕೆ ಇರಲಿದೆ. ಇದನ್ನು ಕ್ಲಿಕ್ ಮಾಡಬೇಕು.

ವಿಥ್‌ಡ್ರಾ ಕ್ಯಾಶ್ ಮೇಲೆ ಕ್ಲಿಕ್ ಮಾಡಿದ ನಂತರ ಯುಪಿಐ ಸ್ಕ್ಯಾನ್ ಮಾಡಿ ಹಣವನ್ನು ವಿಥ್‌ಡ್ರಾ ಮಾಡಲು ಸಾಧ್ಯವಾಗಲಿದೆ. ಇದಕ್ಕಾಗಿ, ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವ ಸ್ಮಾರ್ಟ್‌ಫೋನಿನಲ್ಲಿ ಯುಪಿಐ ಅಪ್ಲಿಕೇಶನ್‌ನಲ್ಲಿ ಸೇರಿಸಲಾಗಿರುವ ಬ್ಯಾಂಕ್ ಖಾತೆಯು ಸಕ್ರಿಯವಾಗಿರಬೇಕು.

ಎಷ್ಟು ಹಣವನ್ನು ಹಿಂಪಡೆಯಲು ಬಯಸುತ್ತೀರಿ ಎಂಬುದನ್ನು ಅನುಕ್ರಮದ ಮೇಲೆ ನಮೂದಿಸಬೇಕು (ಅಂದರೆ ನೀವು ನಮೂದಿಸಿದ ಹಣವು ಎಟಿಎಂ ನಲ್ಲಿ ವಿಥ್‌ ಡ್ರಾ ಆಗುವಂತಿರಬೇಕು) ಎಟಿಎಂ ನಲ್ಲಿ ಹಣವನ್ನು ವಿಥ್‌ಡ್ರಾ ಮಾಡುವ ಕ್ರಮವು ಯಶಸ್ವಿಯಾದ ನಂತರ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ” ಗೌಪ್ಯ ಪಿನ್” ಅನ್ನು ನಮೂದಿಸಬೇಕು. ಈಗ ನಿಮ್ಮ ಬ್ಯಾಂಕ್ ಖಾತೆಯಿಂದ ಯುಪಿಐ ಆಧಾರಿತವಾಗಿ ಹಣ ಪಾವತಿಯಾಗಿರುವ ಸಂದೇಶ ಬರಲಿದೆ ನಂತರ ಎಟಿಎಂ ನಿಂದ ಹಣ ಹೊರಬರುತ್ತದೆ.

ಯುಪಿಐ ಅಪ್ಲಿಕೇಶನ್‌ಗಳ ಸಹಾಯದಿಂದ ಒಂದು ವಹಿವಾಟಿನಲ್ಲಿ ನೀವು 5,000 ರೂ. ವರೆಗೆ ಹಣವನ್ನು ವಿಥ್‌ಡ್ರಾ ಮಾಡಬಹುದು.  ಎಟಿಎಂ ಗಳಲ್ಲಿ ಕಾರ್ಡ್ ರಹಿತ ನಗದು ಹಿಂಪಡೆಯುವ ಸೌಲಭ್ಯಗಳನ್ನು ಪರಿಚಯಿಸಿದ ನಂತರ ಬ್ಯಾಂಕ್‌ಗಳು ಡೆಬಿಟ್ ಕಾರ್ಡ್‌ ನೀಡುವುದನ್ನು ಮುಂದುವರೆಸುತ್ತದೆ. ಯುಪಿಐ ಆಧಾರಿತ ಅಪ್ಲಿಕೇಷನ್‌ಗಳ ಮೂಲಕ ಎಟಿಎಂ ನಲ್ಲಿ ಹಣವನ್ನು ವಿಥ್‌ಡ್ರಾ ಮಾಡುವ ಅವಕಾಶವು, ‘ಸ್ಕಿಮ್ಮಿಂಗ್, ಕಾರ್ಡ್ ಕ್ಲೋನಿಂಗ್ ಸೇರಿದಂತೆ ಇತ್ಯಾದಿ ಹಣಕಾಸು ವಂಚನೆಯ (ಸ್ಕ್ಯಾಮ್) ಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ” ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

suddiyaana