ರಾತ್ರಿ‌ ವೇಳೆ ವಾಕಿಂಗ್ ಮಾಡ್ತೀರಾ? – ತೂಕ ಇಳಿಸಲು ಇದಕ್ಕಿಂತ ಬೆಸ್ಟ್ ವ್ಯಾಯಾಮ ಬೇರೆ ಇಲ್ಲ!

ರಾತ್ರಿ‌ ವೇಳೆ ವಾಕಿಂಗ್ ಮಾಡ್ತೀರಾ? – ತೂಕ ಇಳಿಸಲು ಇದಕ್ಕಿಂತ ಬೆಸ್ಟ್ ವ್ಯಾಯಾಮ ಬೇರೆ ಇಲ್ಲ!

ಅನೇಕರು ರಾತ್ರಿ ಊಟ ಮಾಡಿದ ನಂತ್ರ ವಾಕ್ ಮಾಡ್ತಾರೆ. ಇದ್ರಿಂದ ಸಿಗುವ  ಆರೋಗ್ಯ ಪ್ರಯೋಜನಗಳ ಬಗ್ಗೆ ಗೊತ್ತಿರಲ್ಲ. ಬೇಗನೆ ಊಟ ಮುಗಿಸಿ, ರಾತ್ರಿಯ ನಡಿಗೆಯನ್ನು ಇಷ್ಟಪಡುವವರಾಗಿದ್ದರೆ ಜೊತೆಗೆ ತೂಕ ಇಳಿಸಿಕೊಳ್ಳಲು ನೀವು ಸರಳ ಮಾರ್ಗವನ್ನು ಹುಡುಕುತ್ತಿದ್ದರೆ ರಾತ್ರಿಯ ವಾಕ್ ತುಂಬಾ ಒಳ್ಳೆದು.

ವಾಕಿಂಗ್ ಕಡಿಮೆ ಪರಿಣಾಮ ಬೀರುವ ವ್ಯಾಯಾಮವಾಗಿದ್ದು, ಇದನ್ನು ರಾತ್ರಿ ಸೇರಿದಂತೆ ದಿನದ ಯಾವುದೇ ಸಮಯದಲ್ಲಿ ಮಾಡಬಹುದು. ಆದರೆ ರಾತ್ರಿ ನಡಿಗೆಯು ನಿಮಗೆ ಕ್ಯಾಲೊರಿಸ್ ಬರ್ನ್ ಮಾಡಲು ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ಶಕ್ತಿಯುತವಾಗಿ ಇರಿಸಿಕೊಳ್ಳಲು, ಊಟದ ನಂತರದ ನಡಿಗೆಗಿಂತ ಉತ್ತಮವಾದುದು ಯಾವುದೂ ಇಲ್ಲ.

ಇದನ್ನೂ ಓದಿ: ಮನುಷ್ಯನ ದೇಹದ ಈ ಭಾಗ ಎಂದಿಗೂ ಬೆವರೋದಿಲ್ಲ! ನಿಮಗೂ ಕೂಡ ಹಾಗೇನಾ?

ರಾತ್ರಿಯಲ್ಲಿ ನಡೆಯುವುದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ನಿಮ್ಮ ದೇಹವು ಕ್ಯಾಲೊರಿಗಳನ್ನು ಸುಡುಲು ಸಹಕಾರಿಯಾಗಿದೆ. ವೇಗದ ಚಯಾಪಚಯ ಕ್ರಿಯೆಯು ವಾಸ್ತವವಾಗಿ ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ರಾತ್ರಿ ತಂಪಾದ ಗಾಳಿಯಲ್ಲಿ ನಡೆಯುವುದರಿಂದ ನಿಮ್ಮ ಇಡೀ ದಿನವನ್ನು ಮರುಪರಿಶೀಲಿಸುವುದು ಮತ್ತು ಮನಸ್ಸನ್ನು ತಿಳಿಯಾಗಿಸಲು ಉತ್ತಮ ಮಾರ್ಗವಾಗಿದೆ. ಜೊತೆಗೆ ರಾತ್ರಿ ನಡಿಗೆಯು ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ ತೂಕ ಕಡಿಮೆಯಾಗಲು ಸಹ ಸಹಾಯ ಮಾಡುತ್ತದೆ. ಕಳಪೆ ನಿದ್ರೆಯು ತೂಕ ಹೆಚ್ಚಳಕ್ಕೆ ಸಂಬಂಧಿಸಿದೆ, ಆದ್ದರಿಂದ ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಪಡೆಯುವುದು ತುಂಬಾ ಅವಶ್ಯಕ. ಹಾಗಾಗಿ ರಾತ್ರಿ ನಡಿಗೆ ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ತೂಕ ನಷ್ಟಕ್ಕೆ ಮುಖ್ಯವಾಗಿದೆ.

Shwetha M