ಚೊಚ್ಚಲ ಟ್ರೋಫಿ ಗೆಲ್ಲುತ್ತಾ NZ – ಫೈನಲ್ ನಲ್ಲಿ ಎಷ್ಟು ಡೇಂಜರಸ್?
ಸ್ಯಾಂಟ್ನರ್ ಪಡೆ ಕಿಚ್ಚು ಹೇಗಿದೆ?

ಚೊಚ್ಚಲ ಟ್ರೋಫಿ ಗೆಲ್ಲುತ್ತಾ NZ – ಫೈನಲ್ ನಲ್ಲಿ ಎಷ್ಟು ಡೇಂಜರಸ್?ಸ್ಯಾಂಟ್ನರ್ ಪಡೆ ಕಿಚ್ಚು ಹೇಗಿದೆ?

2024ರ ಟೂರ್ನಿಯ ರನ್ನರ್​​ಅಪ್, ಈ ಸಲ ಒಂದೂ ಸೋಲಿಲ್ಲದೆ ಸೆಮೀಸ್ ತಲುಪಿದ್ದ ಏಕೈಕ ಟೀಂ ಸೌತ್ ಆಫ್ರಿಕಾ. 10ನೇ ಆವೃತ್ತಿಯ ಚಾಂಪಿಯನ್ಸ್ ಆಗೋ ಫೇವರೆಟ್ ಟೀಂ ಅಂತಾನೇ ಕರೆಸಿಕೊಳ್ತಿದ್ರು. ಆದ್ರೆ ನಾಕೌಟ್ ಸುತ್ತಲ್ಲಿ ಸದ್ದೇ ಮಾಡದಂತೆ ಅವ್ರನ್ನ ಸದೆಬಡಿದು ಫೈನಲ್​ಗೆ ಗ್ರ್ಯಾಂಡ್ ಆಗೇ ಎಂಟ್ರಿಕೊಟ್ಟಿರುವ ನ್ಯೂಜಿಲೆಂಡ್ ಈಗ ಫೈನಲ್ ಪಂದ್ಯದಲ್ಲಿ ಡೇಂಜರಸ್ ಆಗಿ ಕಾಣ್ತಿದ್ದಾರೆ.

ಇದನ್ನೂ ಓದಿ : ಆರ್​ಸಿಬಿ ಫ್ಯಾನ್ಸ್​ಗೆ ಗುಡ್‌ನ್ಯೂಸ್ – ಚಿನ್ನಸ್ವಾಮಿಯಲ್ಲೇ ನಡೆಯಲಿದ ಉದ್ಘಾಟನಾ ಪಂದ್ಯ ಸೇರಿ 5 ಪಂದ್ಯ

2026ರ ಟಿ-20 ವಿಶ್ವಕಪ್ ಇನ್ನೇನು ಕ್ಲೈಮ್ಯಾಕ್ಸ್ ಸ್ಟೇಜ್​ನಲ್ಲಿದೆ. ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರೋ ಹೈವೋಲ್ಟೇಜ್ ಮ್ಯಾಚಲ್ಲಿ ಹೊಸ ಚಾಂಪಿಯನ್​ನ ಉದಯ ಆಗುತ್ತೆ. ಌಂಡ್ ಈ ಸಲ ಯಾರೇ ಗೆದ್ರೂ ಅದು ಚರಿತ್ರೆಯೇ. ಅದ್ರಲ್ಲೂ ಮೊದಲ ಕಪ್ ಕನಸಿನಲ್ಲಿರೋ ಕಿವೀಸ್ ಬಳಗ ಈಗ ಡೇಂಜರಸ್ ಆಗಿ ಕಾಣ್ತಿದ್ದಾರೆ. ಎದುರಾಳಿ ಪಡೆಗೆ ಚೋಕ್ ಕೊಟ್ಟು ಟ್ರೋಫಿ ಎತ್ತಿದ್ರೂ ಅಚ್ಚರಿ ಇಲ್ಲ.

ದಾಖಲೆಯ ಗೆಲುವಿನೊಂದಿಗೆ ಫೈನಲ್ ಗೆ ನುಗ್ಗಿರೋ ನ್ಯೂಜಿಲೆಂಡ್!

ಬುಧವಾರ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾವನ್ನ ನ್ಯೂಜಿಲೆಂಡ್ ಬೌಲಿಂಗ್​ನಲ್ಲಿ ಅಕ್ಷರಶಃ ಕಟ್ಟಿ ಹಾಕಿತ್ತು. 8 ವಿಕೆಟ್‌ಗೆ 169 ರನ್‌ ಅಷ್ಟೇ ಕೊಟ್ಟಿದ್ರು. ಈ ಟಾರ್ಗೆಟ್ ಬೆನ್ನಟ್ಟಿದ ಕಿವೀಸ್ ಬಳಗ ಅನಾಯಾಸವಾಗಿ ಗೆದ್ರು.  ಫಿನ್‌ ಆ್ಯಲೆನ್‌ ಮತ್ತು ಟಿಮ್‌ ಸೀಫರ್ಟ್‌ ಸ್ಫೋಟಕ ಬ್ಯಾಟಿಂಗ್ ಮೂಲಕ 9.1 ಓವರ್‌ಗಳಲ್ಲಿ 117 ರನ್‌ ಜೊತೆಯಾಟವಾಡಿದರು. ಸೀಫರ್ಟ್‌ 33 ಎಸೆತಕ್ಕೆ 58 ರನ್‌ ಗಳಿಸಿ ಔಟಾದ್ರು. ಌಂಡ್ ನೆಕ್ಸ್​ಟ್ ರಚಿನ್ ರವೀಂದ್ರ ಜೊತೆಗೂಡಿದ ಫಿನ್ ಅಲೆನ್ ಕೇವಲ 33 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 100 ರನ್‌ ಪೂರ್ಣಗೊಳಿಸಿದ್ರು. ಇದು ಟಿ20 ವಿಶ್ವಕಪ್‌ನಲ್ಲೇ ಅತಿ ವೇಗದ ಶತಕ. ಹಾಗೇ ಕಿವೀಸ್ ಪರ ಟಿ-20ಐ ಫಾರ್ಮೆಟ್​ನ ಅತ್ಯಂತ ವೇಗದ ಸೆಂಚುರಿಯಾಗಿದೆ. ಈ ಮೂಲಕ ಫೈನಲ್​ನಲ್ಲೂ ಇಂಥದ್ದೇ ಪರ್ಫಾಮೆನ್ಸ್ ನೀಡೋ ಕಾನ್ಫಿಡೆನ್ಸ್​ನಲ್ಲಿದ್ದಾರೆ. ಆದ್ರೆ ಈ ಬಾರಿಯ ಟಿ-20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್​ನ ಫೈನಲ್ ಜರ್ನಿ ಅಷ್ಟು ಈಸಿ ಇರ್ಲಿಲ್ಲ.

ನ್ಯೂಜಿಲೆಂಡ್ ಹಾವು-ಏಣಿ ಆಟ!

ಗ್ರೂಪ್ ಸ್ಟೇಜ್ ಸೋಲು.. ಸೂಪರ್-8ನಲ್ಲಿ ಅಗ್ನಿಪರೀಕ್ಷೆ!

ಅಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ ಗಳಿಂದ ಗೆಲುವು

ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ 10 ವಿಕೆಟ್‌ಗಳ ಅಧ್ಭುತ ಜಯ

ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಏಳು ವಿಕೆಟ್‌ ಗಳ ಗೆಲುವು

ಕೆನಡಾ ವಿರುದ್ಧ ಎಂಟು ವಿಕೆಟ್‌ಗಳ ಜಯದೊಂದಿಗೆ ಸೂಪರ್ 8

ಪಾಕಿಸ್ತಾನ ವಿರುದ್ಧದ ಮೊದಲ ಮ್ಯಾಚ್​ ಮಳೆ ಕಾರಣದಿಂದಾಗಿ ರದ್ದು

ಶ್ರೀಲಂಕಾ ವಿರುದ್ಧ 61 ರನ್​ಗಳ ಬೃಹತ್ ಅಂತರದಲ್ಲಿ ಗೆದ್ದು ಬೀಗಿದ್ರು

ಇಂಗ್ಲೆಂಡ್ ವಿರುದ್ಧ 4 ವಿಕೆಟ್​​ಗಳ ಅಂತರದಲ್ಲಿ ಸೋಲನ್ನ ಕಂಡ ಕಿವೀಸ್

ಪಾಕಿಸ್ತಾನ 67 ರನ್​ಗಳ ಅಂತರದಲ್ಲಿ ಲಂಕಾ ವಿರುದ್ಧ ಗೆದ್ದಿದ್ರೆ ಟಿಕೆಟ್

ಸೌತ್ ಆಫ್ರಿಕಾ ವಿರುದ್ಧ ಬೌಲಿಂಗ್ ಎರಡ್ರಲ್ಲೂ ಕಂಪ್ಲೀಟ್ ಡಾಮಿನೇಷನ್

ಇನ್ನು ಟಿ-20 ವಿಶ್ವಕಪ್ ಅಂತಾ ಬಂದಾಗ ಇರುವರೆಗೂ ನ್ಯೂಜಿಲೆಂಡ್ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಕಳೆದ 9 ಸೀಸನ್​ಗಳಲ್ಲಿ ಭಾರತ ಎರಡು ಬಾರಿ ಟ್ರೋಫಿ ಗೆದ್ದಿದೆ. ಇಂಗ್ಲೆಂಡ್ ಹಾಗೇ ವೆಸ್ಟ್ ಇಂಡೀಸ್ ಕೂಡ 2 ಸಲ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಉಳಿದಂತೆ ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ ತಲಾ ಒಂದೊಂದು ಸಲ ಕಪ್ ಗೆದ್ದಿದ್ದಾರೆ.

Shantha Kumari

Leave a Reply

Your email address will not be published. Required fields are marked *