ಊಟ ಆದ ಕೂಡ್ಲೇ ನೀರು ಕುಡಿಯಬಹುದಾ? – ಈ ತಪ್ಪು ಮಾಡಿದ್ರೆ ಅನಾರೋಗ್ಯ ಫಿಕ್ಸ್?

ನಮ್ಮ ದೇಹಕ್ಕೆ ನೀರು ತುಂಬಾ ಮುಖ್ಯ. ಬಾಯಾರಿಕೆ ಆದಾಗ ನೀರು ಕುಡಿಯಬೇಕು. ಆದ್ರೆ ಕೆಲವರು ಊಟವಾದ ಕೂಡಲೇ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುತ್ತಿರುತ್ತಾರೆ. ಆದ್ರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಗಿಲ್ಲಿಗಾಗಿ ರಕ್ಷಿತಾ, ರಾಶಿಕಾ ಮಧ್ಯೆ ಫೈಟ್! – ರಕ್ಷುಗೆ ಕಾಮಿಡಿ ಕಿಂಗ್ ಮೇಲೆ ಕ್ರಶ್Or ಲವ್?
ಆರೋಗ್ಯ ತಜ್ಞರ ಪ್ರಕಾರ ಊಟ ಆದ ಕೂಡಲೇ ನೀರು ಕುಡಿಯುವುದು ಒಳ್ಳೆಯ ಅಭ್ಯಾಸವಲ್ಲ. ಇದ್ರಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಪರಿಣಾಮ ಬೀಳಬಹುದು. ನಮ್ಮ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡಲು ಹೊಟ್ಟೆಯಲ್ಲಿ ಜೀರ್ಣಕಾರಿ ರಸವನ್ನು ಉತ್ಪಾದಿಸುತ್ತದೆ. ತಿಂದ ಕೂಡ್ಲೇ ನೀರು ಕುಡಿದ್ರೆ, ಜೀರ್ಣಾಂಗ ವ್ಯವಸ್ಥೆ ದುರ್ಬಲಗೊಳಿಸುತ್ತದೆ. ಇದ್ರಿಂದಾಗಿ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಷ್ಟೇ ಅಲ್ಲ ಇದ್ರಿಂದಾಗಿ ತೂಕ ಹೆಚ್ಚಳ ಆಗುವ ಸಾಧ್ಯತೆ ಇರುತ್ತೆ. ಹಾಗಿದ್ರೆ ಊಟ ಮಾಡಿದ ಎಷ್ಟು ಸಮಯದ ಬಳಿಕ ನೀರನ್ನು ಕುಡಿಯಬೇಕು ಅನ್ನೋ ಪ್ರಶ್ನೆ ನಿಮ್ಮನ್ನ ಕಾಡ್ಬೋದು.
ಆರೋಗ್ಯ ತಜ್ಞರ ಪ್ರಕಾರ, ಆಹಾರ ಜೀರ್ಣವಾಗಲು ಕನಿಷ್ಠ ಎರಡು ಗಂಟೆಗಳು ಬೇಕಾಗುತ್ತದೆ. ಈ ಸಮಯದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರ ಸೇವಿಸಿದ 45 ರಿಂದ 60 ನಿಮಿಷಗಳ ನಂತರ ನೀರು ಕುಡಿದರೆ ಒಳ್ಳೆಯದು. ನೀವು ಊಟಕ್ಕಿಂತ ಮುಂಚೆ ನೀರು ಕುಡಿಯಲು ಬಯಸಿದರೆ, ಊಟಕ್ಕೆ ಅರ್ಧ ಗಂಟೆ ಮೊದಲು ನೀರು ಕುಡಿಯಿರಿ. ಇದು ದೇಹವು ಆಹಾರದ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ.

ನೋಡಿರಿ

