ಜೋಫ್ರಾ Vs ಬೂಮ್ರಾ ಫೈಟ್ – ಆಂಗ್ಲರ ಚೆಂಡಾಡುತ್ತಾ ಭಾರತ?
ಮುಂಬೈ ಪಿಚ್ ಯಾರಿಗೆ ಲಾಭ?

ಜೋಫ್ರಾ Vs ಬೂಮ್ರಾ ಫೈಟ್ – ಆಂಗ್ಲರ ಚೆಂಡಾಡುತ್ತಾ ಭಾರತ?ಮುಂಬೈ ಪಿಚ್ ಯಾರಿಗೆ ಲಾಭ?

ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವಿನ ಸೆಮೀಸ್ ಕಾಳಗಕ್ಕಿಂತ ಜಾಸ್ತಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕದನವೇ ಹೈಪ್ ಕ್ರಿಯೇಟ್ ಮಾಡಿದೆ. ಯಾಕಂದ್ರೆ ಕಳೆದ ಎರಡು ಟೂರ್ನಿಗಳಲ್ಲಿ ಚಾಂಪಿಯನ್ಸ್ ಇವ್ರೇ.  ಮೂರನೇ ಬಾರಿಯೂ ಇದೇ ರಿಪೀಟ್ ಆಗುತ್ತಾ ಅನ್ನೋ ಕ್ಯೂರಿಯಾಸಿಟಿಯೂ ಇದೆ. ಟಿ-20 ವಿಶ್ವಕಪ್​ನ ನಾಕೌಟ್ ಸುತ್ತಿಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ನಾಳೆ ಅಂದ್ರೆ ಬುಧವಾರ ಮೊದಲ ಸೆಮಿಫೈನಲ್ ಕಾಳಗದಲ್ಲಿ ಟೂರ್ನಿಯ ಅಜೇಯ ಟೀಂ ಆಗಿರೋ ಸೌತ್ ಆಫ್ರಿಕಾ ಹಾಗೇ ನ್ಯೂಜಿಲೆಂಡ್ ತಂಡಗಳು ಕೊಲ್ಕತ್ತಾದಲ್ಲಿ ಮುಖಾಮುಖಿ ಆಗ್ತಾರೆ. ಌಂಡ್ ನೆಕ್ಸ್​ಟ್ ಡೇ ಅಂದ್ರೆ ಗುರುವಾರ ಭಾರತ ಮತ್ತು ಇಂಗ್ಲೆಂಡ್ ಟೀಂಗಳು ಮುಂಬೈನಲ್ಲಿ ಫೈನಲ್ ಟಿಕೆಟ್​ಗಾಗಿ ಫೈಟ್ ನಡೆಸಲಿವೆ. ಸತತ ಮೂರನೇ ಬಾರಿಗೆ ಸೆಮೀಸ್​ನಲ್ಲಿ ಎದುರಾಳಿಯಾಗ್ತಿರೋ ಆಂಗ್ಲರನ್ನ ಬಗ್ಗುಬಡಿಯೋಕೆ ಭಾರತವೂ ರೆಡಿಯಾಗಿದೆ.

ಇದನ್ನೂ ಓದಿ : ಸಂಜು ಸಾಮರ್ಥ್ಯಕ್ಕೆ ಸಾಕ್ಷಿ 97 ರನ್- ಕೋಚ್ ಗೌತಮ್ ಗಂಭೀರ್ ಯೂಟರ್ನ್

ಇಂಗ್ಲೆಂಡ್ ತಂಡದ ಪಾಲಿನ ಗೇಮ್ ಚೇಂಜರ್ ವಿಲ್ ಜಾಕ್ಸ್!

ಈ ಬಾರಿಯ ಟೂರ್ನಮೆಂಟ್‌ನಲ್ಲಿ ಇಂಗ್ಲೆಂಡ್ ಪರ ಅತ್ಯಂತ ಎಫೆಕ್ಟಿವ್ ಆಗಿ ಪರ್ಫಾಮ್ ಮಾಡ್ತಿರೋ ಪ್ಲೇಯರ್ ಅಂದ್ರೆ ಅದು ವಿಲ್ ಜಾಕ್ಸ್. ನೇಪಾಳ, ಇಟಲಿ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಅಂದ್ರೆ ಆಡಿರೋ 7 ಮ್ಯಾಚಲ್ಲಿ 4 ಸಲ ಇವ್ರೇ ಮ್ಯಾನ್ ಆಫ್ ದಿ ಮ್ಯಾಚ್. ಶೇನ್ ವ್ಯಾಟ್ಸನ್ ಆದ್ಮೇಲೆ ಮೆನ್ಸ್ ಟಿ20 ವಿಶ್ವಕಪ್‌ನಲ್ಲಿ ಒಂದೇ ಆವೃತ್ತಿಯಲ್ಲಿ 4 ಸಲ ಈ ಪ್ರಶಸ್ತಿ ಪಡೆದಿರೋ 2ನೇ ಆಟಗಾರ. 7ನೇ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಬರೋ ಜ್ಯಾಕ್ಸ್ ಕ್ರೂಶಿಯಲ್ ಟೈಮಲ್ಲಿ ಪಂದ್ಯವನ್ನ ಗೆಲ್ಲಿಸಿಕೊಡ್ತಿದ್ದಾರೆ. ಬ್ಯಾಟಿಂಗ್ ಅಷ್ಟೇ ಅಲ್ಲ ಬೌಲಿಂಗ್​ನಲ್ಲೂ ತುಂಬಾನೇ ಎಫೆಕ್ಟಿವ್ ಆಗಿದ್ದಾರೆ. ಒಟ್ಟಾರೆ ಈ ಸೀಸನ್​ನಲ್ಲಿ 191 ರನ್ ಗಳಿಸಿದ್ದು  ಡೆತ್‌ ಓವರ್​ಗಳಲ್ಲೇ 162 ರನ್ ಗಳಿಸಿದ್ದಾರೆ. ಈ ಸ್ಲಾಟಲ್ಲಿ ಈ ಟೂರ್ನಿಯಲ್ಲಿ ಗಳಿಸಿರೋ ಹೈಯೆಸ್ಟ್ ಸ್ಕೋರ್. ಸೋ ಇದೇ ಜಾಕ್ಸ್ ಭಾರತದ ವಿರುದ್ಧದ ಪಂದ್ಯದಲ್ಲೂ ಕ್ರೂಶಿಯಲ್ ಟೈಮಲ್ಲಿ ಇಂಗ್ಲೆಂಡ್ ಪರ ಗೇಮ್ ಚೇಂಜರ್ ಆಗಬಹುದು. ಸೋ ಈತನ ವಿಕೆಟ್ ಪಡೆಯೋ ಬಗ್ಗೆಯೂ ಭಾರತದ ಬೌಲಿಂಗ್ ಸ್ಕ್ವಾಡ್ ಗ್ರೌಂಡ್ ವರ್ಕ್ ಮಾಡ್ಬೇಕಾಗುತ್ತೆ. ಌಂಡ್ ಬೌಲಿಂಗ್​ನಲ್ಲೂ ಡೇಂಜರಸ್ ಆಗಿರೋ ಜಾಕ್ಸ್ 7 ವಿಕೆಟ್ ತಗೊಂಡಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಮುಂಬೈ ಟೀಮ್​ನಲ್ಲಿರೋ ವಿಲ್ಸ್ ಜಾಕ್ಸ್​ಗೆ ಪಂದ್ಯ ನಡೆಯಲಿರೋ ವಾಂಖೆಡೆ ಪಿಚ್​ನ ಆಳ ಅಗಲ ಎಲ್ಲವೂ ತಿಳಿದಿರುತ್ತೆ.

ಪವರ್ ಪ್ಲೇನಲ್ಲಿ ಜೋಫ್ರಾ ಆರ್ಚರ್ ಪವರ್ ಶೋ!

ಇನ್ನು ಇಂಗ್ಲೆಂಡ್ ಟೀಮ್​ನಲ್ಲಿರೋ ಮತ್ತೊಬ್ಬ ಡೇಂಜರಸ್ ಪ್ಲೇಯರ್ ಅಂದ್ರೆ ಅದು ಜೋಫ್ರಾ ಆರ್ಚರ್. ಈ ಬಾರಿಯ ಟೂರ್ನಿಯಲ್ಲಿ ಪವರ್ ಪ್ಲೇನ ಸೂಪರ್ ಹೀರೋ ಆಗಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ 10 ವಿಕೆಟ್​ಗಳನ್ನ ತೆಗೆದಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇದ್ರಲ್ಲಿ 8 ವಿಕೆಟ್​ಗಳನ್ನ ಮೊದಲ 6 ಓವರ್​ಗಳಲ್ಲೇ ತೆಗೆದಿದ್ದಾರೆ. ಌಂಡ್ ಪವರ್ ಪ್ಲೇನಲ್ಲಿ ಅತೀಹೆಚ್ಚು ಡಾಟ್ ಬಾಲ್ ಹಾಕಿದ್ದಾರೆ. ಆರ್ಚರ್ ಮೊದಲ ಆರು ಓವರ್‌ಗಳಲ್ಲಿ 114 ಎಸೆತಗಳಲ್ಲಿ 66 ಡಾಟ್‌ಗಳನ್ನು ಬೌಲ್ ಮಾಡಿದ್ದಾರೆ. ಟೀಂ ಇಂಡಿಯಾ ಪರ ಈ ಟೂರ್ನಿಯಲ್ಲಿ ಆರಂಭಿಕ ಜೋಡಿಯಲ್ಲಿ ಒಬ್ಬರ ವಿಕೆಟ್ ಬೇಗನೇ ಬೀಳ್ತಿದೆ. ಸೋ ಜೋಫ್ರಾ ಆರ್ಚರ್ ಭಾರತದ ವಿರುದ್ಧ ಪವರ್ ಪ್ಲೇನಲ್ಲಿ ವಿಕೆಟ್ಸ್ ತೆಗೆದ್ರೆ ಭಾರತ ತಂಡ ನಿಜಕ್ಕೂ ಪ್ರೆಶರ್​ನಲ್ಲಿ ಸಿಲುಕಬಹುದು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಗಳಿಸಿದ ಸಂಜು ಸ್ಯಾಮ್ಸನ್ ಅವರನ್ನು ಐದು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮೂರು ಬಾರಿ ಜೋಫ್ರಾ ಔಟ್ ಮಾಡಿದ್ದಾರೆ. ಹೀಗಾಗಿ ಸಂಜು ಕೂಡ ಮುಂದಿನ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡ್ಬೇಕಾಗುತ್ತೆ. ಅಟ್ ದಿ ಸೇಮ್ ಟೈಂ ಜೋಫ್ರಾ ಬೌಲಿಂಗ್​ನಲ್ಲಿ ದುಬಾರಿಯಾಗಿದ್ದಾರೆ. ಕಳೆದ 2 ಪಂದ್ಯಗಳಲ್ಲಿ 90 ರನ್ಸ್ ಕೊಟ್ಟಿದ್ದಾರೆ. ಸೋ ಇದು ಭಾರತದ ಟಾಪ್ ಆರ್ಡರ್ ಬ್ಯಾಟರ್​ಗಳಿಗೆ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸೋಕೆ ಸಹಾಯ ಆಗ್ಬೋದು.

ಇಂಗ್ಲೆಂಡ್ ಟಾಪ್ ಆರ್ಡರ್ ನಿಂದ ಬರುತ್ತಾ ಬಿಗ್ ಸ್ಕೋರ್?

ಯೆಸ್. ಇಂಗ್ಲೆಂಡ್ ತಂಡಕ್ಕೆ ಇರೋ ಮೇನ್ ವೀಕ್​ನೆಸ್ ಅಂದ್ರೆ ಇದೇ. ಟಾಪ್ ಆರ್ಡರ್ ಬ್ಯಾಟಿಂಗ್ ಕಂಪ್ಲೀಟ್ ಕೊಲ್ಯಾಪ್ಸ್ ಆಗಿದೆ. ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಇನ್ನಿಂಗ್ಸ್ ಆರಂಭಿಸಿದ್ರೂ ಇಬ್ಬರ ಪಾಟ್ನರ್​ಶಿಪ್ ಜಸ್ಟ್ 12ರ ಆವರೇಜ್​ನಲ್ಲಿದೆ. ಟೂರ್ನಿಗೂ ಮುನ್ನ ಐಸಿಸಿ ರ್ಯಾಂಕಿಂಗ್​ನಲ್ಲಿ ಸಾಲ್ಟ್ 2ನೇ ಸ್ಥಾನ, ಬಟ್ಲರ್ 4ನೇ ಸ್ಥಾನದಲ್ಲಿದ್ರು. ಬಟ್ ಈಗ ಟೂರ್ನಿಯಿಂದ ಅಂದುಕೊಂಡಂತೆ ಪರ್ಫಾಮ್ ಮಾಡಿಲ್ಲ. ಅದ್ರಲ್ಲೂ ಫಿಲ್ ಸಾಲ್ಟ್ ಪವರ್ ಹಿಟ್ಟರ್ ಅಂತಾನೇ ಸದ್ದು ಮಾಡಿದವ್ರು. ಇಂಗ್ಲೆಂಡ್ ಪರ ಪ್ರತಿ 14 ಟಿ20 ಪಂದ್ಯಗಳಲ್ಲಿ ಮಿನಿಮಮ್ ಒಂದು ಶತಕ ಗಳಿಸುತ್ತಾರೆ. ಬಟ್ ಈಗ 13 ಪಂದ್ಯಗಳಲ್ಲಿ ಒಂದೂ ಶತಕವಿಲ್ಲದೆ ಇದ್ದಾರೆ. ಌಂಡ್ ಕಳೆದ 5 ಪಂದ್ಯಗಳ್ಲಲಿ ಸಿಂಗಲ್ ಡಿಜಿಟ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಆದ್ರೆ ಈಗ ಭಾರತದ ವಿರುದ್ಧ ಸಿಡಿಯಬಹುದು ಅನ್ನೋ ಲೆಕ್ಕಾಚಾರ ಇದೆ. ಇನ್ನು ಜೋಸ್ ಬಟ್ಲರ್ ವಾಂಖೆಡೆಯಲ್ಲೇ ಐಪಿಎಲ್ ನಲ್ಲಿ 2022ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 65 ಬಾಲಲ್ಲೇ 116 ರನ್ ಸ್ಕೋರ್ ಮಾಡಿದ್ರು. ಸೋ ಈ ಸಲ ಮತ್ತೊಂದು ಬಿಗ್ ಹಿಟ್ ಲೆಕ್ಕಾಚಾರದಲ್ಲೇ ಕಣಕ್ಕಿಳಿತಾರೆ. ಸೋ ಇಲ್ಲಿ ಸಾಲ್ಟ್ ಮತ್ತು ಬಟ್ಲರ್ ಕ್ಲಿಕ್ ಆದ್ರೆ ಅದು ಇಂಗ್ಲೆಂಡ್​ಗೆ ಖಂಡಿತ ಪ್ಲಸ್ ಆಗುತ್ತೆ. ಹೀಗಾಗಿ ಭಾರತ ಆದಷ್ಟು ಬೇಗ ಇವ್ರಿಬ್ಬರನ್ನ ಔಟ್ ಮಾಡಿದ್ರೆ ಪ್ರೆಶರ್​ನಲ್ಲಿ ಇಡಬಹುದು.

ವಿಶ್ವಕಪ್ ಟೂರ್ನಿಯಲ್ಲಿ ಓಪನರ್ ಜೋಡಿ ಕಂಪ್ಲೀಟ್ ಫ್ಲ್ಯಾಪ್!

ಭಾರತಕ್ಕೆ ಇರೋ ಬಿಗ್ ಅಡ್ವಾಂಟೇಜ್ ಇದೇ. ಇಂಗ್ಲೆಂಡ್ ಪರ ಟಾಪ್ ಸಿಕ್ಸ್ ಬ್ಯಾಟರ್​ಗಳು ಕೇವಲ 21.9 ಸರಾಸರಿ ಹೊಂದಿದ್ದಾರೆ. ಇದು ಟೂರ್ನಮೆಂಟ್​ನಲ್ಲೇ ಅತ್ಯಂತ ಕಳಪೆ ಆವರೇಜ್. ಇವ್ರನ್ನ ಬಿಟ್ರೆ ನಮೀಬಿಯಾ ಮತ್ತು ಓಮನ್ ಮಾತ್ರವೇ ಇದಕ್ಕಿಂತ ಕೆಟ್ಟದಾಗಿ ಪರ್ಫಾಮ್ ಮಾಡಿದ್ದಾರೆ. ಟಾಪ್ ಸಿಕ್ಸ್‌ನಲ್ಲಿ ಒಬ್ಬರು ಪ್ರತಿ 16 ಬಾಲ್​ಗಳಿಗೆ ಔಟ್ ಆಗ್ತಾರೆ. ಹೀಗಾಗಿ ಅವ್ರ ಬ್ಯಾಟಿಂಗ್ ಬಿಗ್ ಸ್ಕೋರ್ ಬರೋದು ಕಷ್ಟ ಆಗ್ತಿದೆ. ಪಾಕಿಸ್ತಾನ ವಿರುದ್ಧ ಹ್ಯಾರಿ ಬ್ರೂಕ್ ಅವರ ಶತಕ ಮತ್ತು ವಿಲ್ ಜ್ಯಾಕ್ಸ್ ಅವ್ರ ಪ್ರೈಸ್​ಲೆಸ್ ರನ್ಸ್ ಬಿಟ್ರೆ ಉಳಿದವ್ರೆಲ್ಲಾ ಸೈಲೆಂಟ್ ಆಗಿದ್ದಾರೆ. ಭಾರತ ಇದನ್ನ ಎನ್​ಕ್ಯಾಶ್ ಮಾಡಿಕೊಳ್ಬೋದು.

ಭಾರತದಲ್ಲಿ ಐವರು ಲೆಫ್ಟ್ ಹ್ಯಾಂಡರ್ಸ್ ಇರೋದು ಪ್ಲಸ್!

ಇನ್ನು ಟೀಂ ಇಂಡಿಯಾ 8ನೇ ಸ್ಲಾಟ್​ವರೆಗೆ ಬ್ಯಾಟಿಂಗ್ ಡೆಪ್ತ್ ಇದೆ. ಌಂಡ್ ಎಂಟು ಬ್ಯಾಟರ್​ಗಳಲ್ಲಿ ಐವರು  ಎಡಗೈ ಬ್ಯಾಟರ್ಸ್ ಇದ್ದಾರೆ. ಸೋ ಇಂಗ್ಲೆಂಡ್‌ನ ಮೇನ್ ಸ್ಪಿನ್ನರ್‌ಗಳಾದ ಆದಿಲ್ ರಶೀದ್ ಮತ್ತು ಲಿಯಾಮ್ ಡಾಸನ್ ವಿರುದ್ಧ ಆಡಿಸಬಹುದು. ಅಭಿಷೇಕ್ ಶರ್ಮಾ ಅವರಂತಹ ಆಟಗಾರರು ಸ್ಪಿನ್ ವಿರುದ್ಧ ವೇಗವಾಗಿ ರನ್ ಗಳಿಸುತ್ತಾರೆ.

ಡೆತ್ ಓವರ್ ಗಳಲ್ಲಿ ಇಂಗ್ಲೆಂಡ್ ಗಿಂತ ಭಾರತ ಬೆಟರ್!

ಟಿ-20ಐ ಫಾರ್ಮೆಟ್​ನಲ್ಲಿ ಭಾರತ ಬಲಿಷ್ಠ ತಂಡ. ಅದ್ರಲ್ಲಿ ಡೌಟೇ ಇಲ್ಲ.  2024 ರ ಟಿ20 ವಿಶ್ವಕಪ್ ನಂತ್ರ ಹಾಗೇ ಈ ಟೂರ್ನಮೆಂಟ್ ಆರಂಭಕ್ಕೂ ನಡುವೆ 41 ಪಂದ್ಯಗಳಲ್ಲಿ 33 ರಲ್ಲಿ ಗೆದ್ದಿದ್ದಾರೆ. ಌಂಡ್ ಜಿಂಬಾಬ್ವೆ ವಿರುದ್ಧ 256 ರನ್ ಗಳಿಸಿದರು. ಆ ಮ್ಯಾಚಲ್ಲಿ ಕೊನೆಯ ನಾಲ್ಕು ಓವರ್‌ಗಳಲ್ಲಿ 69 ರನ್ ಗಳಿಸಿದರು. ಸೋ ಭಾರತ ಡೆತ್‌ನಲ್ಲಿ ಮೋಸ್ಟ್ ಡೇಂಜರಸ್ ಆಗಿದೆ. ಇನ್ನಿಂಗ್ಸ್‌ನ ಕೊನೆಯಲ್ಲಿ ಇಂಗ್ಲೆಂಡ್‌ಗಿಂತ ಹೆಚ್ಚು ಬೌಂಡರಿಗಳನ್ನು ಹೊಡೆದಿದ್ದಾರೆ. 2017 ರಿಂದ ಭಾರತವು ವಾಂಖೆಡೆಯಲ್ಲಿ ಟಿ20 ಮ್ಯಾಚ್ ಸೋತೇ ಇಲ್ಲ ಬಟ್ ಇಂಗ್ಲೆಂಟ್ ಟೀಂ ಈ ಮೈದಾನದಲ್ಲಿ ಸಾಕಷ್ಟು ಪಂದ್ಯಗಳನ್ನ ಸೋತಿದೆ. ಹೀಗಾಗಿ ಇಂಗ್ಲೆಂಡ್​ಗೆ ಮತ್ತೆ ಈ ಮೈದಾನ ಕಂಟಕ ಆಗ್ಬಹುದು.

ಬ್ರಿಟಿಷರ ಸೊಕ್ಕಡಗಿಸಲು ಬೂಮ್ರಾಸ್ತ್ರವೇ ಅತಿದೊಡ್ಡ ಶಸ್ತ್ರ!

ಈ ಪಂದ್ಯಕ್ಕೆ ಭಾರತಕ್ಕೆ ಇರೋ ಅತಿದೊಡ್ಡ ಅಸ್ತ್ರ ಅಂದ್ರೆ ಅದು ಬೂಮ್ರಾಸ್ತ್ರ. ಸೂಪರ್ 8 ಪಂದ್ಯಗಳಲ್ಲಿ ಅತ್ಯಂತ ಕಡಿಮೆ ಎಕಾನಮಿಯ ಬೌಲರ್ ಆಗಿದ್ದಾರೆ. ಌಂಡ್ ಪಂದ್ಯಾವಳಿಯಲ್ಲಿ ಕೇವಲ ಮೂರು ಸಿಕ್ಸರ್‌ಗಳನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ. ಭಾರತವು ಪಂದ್ಯವನ್ನು ಕಂಟ್ರೋಲ್​ಗೆ ತಗೊಳ್ಬೇಕು ಅಂದ್ರೆ ಬುಮ್ರಾ ಇರಲೇಬೇಕು. ಇನ್ನು ಇಂಗ್ಲೆಂಡ್ ವಿರುದ್ಧ 5 ಟಿ-20ಐ ಪಂದ್ಯಗಳನ್ನ ಆಡಿರೋ ಬುಮ್ರಾ 9.11ರ ಸರಾಸರಿಯಲ್ಲಿ 9 ವಿಕೆಟ್​ಗಳನ್ನ ಬೇಟೆಯಾಡಿದ್ದಾರೆ. 5.34 ರ ಎಕಾನಮಿಯಲ್ಲಿ ರನ್ಸ್ ಕೊಟ್ಟಿದ್ದಾರೆ. ಌಂಡ್ ಒಂದು ಮ್ಯಾಚಲ್ಲಿ 3 ವಿಕೆಟ್ಸ್ ಕೂಡ ಇತ್ತು. ಇನ್ನು ಟಿ-20 ವಿಶ್ವಕಪ್ ಅಂತಾ ಬಂದಾಗ ಇಂಗ್ಲೆಂಡ್ ವಿರುದ್ಧ 1 ಮ್ಯಾಚ್ ಅಷ್ಟೇ ಆಡಿದ್ದಾರೆ. ಅದು ಲಾಸ್ಟ್ ಸೀಸನ್ ಸೆಮಿಫೈನಲ್. ಭಾರತ ಫಸ್ಟ್ ಬ್ಯಾಟಿಂಗ್ ಮಾಡಿ 172 ರನ್‌ ಟಾರ್ಗೆಟ್ ನೀಡಿತ್ತು. ಈ ಮ್ಯಾಚಲ್ಲಿ  ಬುಮ್ರಾ 2.4 ಓವರ್‌ಗಳಲ್ಲಿ 12 ರನ್ಸ್ ಅಷ್ಟೇ ನೀಡಿ 2 ವಿಕೆಟ್ ತೆಗೆದಿದ್ರು. ಫಿಲ್ ಸಾಲ್ಟ್ ಮತ್ತು ಜೋಫ್ರಾ ಆರ್ಚರ್ ವಿಕೆಟ್ ತೆಗೆದಿದ್ರು. ಇನ್ನು ಬುಮ್ರಾ ಒಟ್ಟಾರೆ 93 ಟಿ20ಐಗಳಲ್ಲಿ 18.44 ಸರಾಸರಿಯಲ್ಲಿ 116 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಎಕಾನಮಿ ದರ 6.53 ಅದ್ಭುತವಾಗಿದೆ. ಪ್ರಸ್ತುತ ವಿಶ್ವಕಪ್​ನಲ್ಲಿ 6 ಪಂದ್ಯಗಳಿಂದ 9 ವಿಕೆಟ್ ತಗೊಂಡಿದ್ದಾರೆ. ಮೊಸ್ಟ್ ಇಂಪಾರ್ಟೆಂಟ್ಲಿ ಎಕಾನಮಿ ರೇಟ್ ಜಸ್ಟ್ 6.30 ಇದೆ. ಯಾವುದೇ ಬೌಲರ್ ಕೂಡ ಇಷ್ಟು ಕಡಿಮೆ ರನ್ಸ್ ನೀಡಿಲ್ಲ. ಬುಮ್ರಾ ಜೊತೆ ವರುಣ್ ಚಕ್ರವರ್ತಿ ಹಾಗೇ ಅರ್ಶದೀಪ್ ಸಿಂಗ್ ಕೂಡ ಕ್ರೂಶಿಯಲ್ ಟೈಮಲ್ಲಿ ವಿಕೆಟ್ಸ್ ತೆಗೆದು ಬ್ರೇಕ್ ಥ್ರ್ಯೂಗಳನ್ನ ತಂದುಕೊಡ್ತಿದ್ದಾರೆ. ಌಂಡ್ ಪಂದ್ಯ ನಡೆಯಲಿರೋ ವಾಂಖೆಡೆ ಪಿಚ್ ಭಾರತಕ್ಕೆ ಪ್ಲಸ್ ಆಗೋ ಎಲ್ಲಾ ಲಕ್ಷಣಗಳಿವೆ.

ಸೂರ್ಯ, ತಿಲಕ್, ಪಾಂಡ್ಯ, ಬುಮ್ರಾಗೇ ವಾಂಖೆಡೆ ಹೋಂ ಪಿಚ್!

ಇಲ್ಲಿ ಆಟಗಾರರ ಜೊತೆ ವಾಂಖೆಡೆ ಪಿಚ್ ಕೂಡ ಭಾರತಕ್ಕೆ ಪ್ಲಸ್ ಆಗುತ್ತೆ. ಯಾಂದ್ರೆ ವಿಶ್ವಕಪ್​ನಲ್ಲಿ ಭಾರತದ ಪರ ಆಡ್ತಿರೋ ನಾಲ್ವರು ಆಟಗಾರರಿಗೆ ಈ ಮೈದಾನ ಹೋಂ ಪಿಚ್ ಆಗಿದೆ. ಮುಂಬೈ ಪರ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಹಾಗೇ ಜಸ್ಪ್ರೀತ್ ಬುಮ್ರಾ ಇದೇ ಮೈದಾನದಲ್ಲೇ ಹೆಚ್ಚಿನ ಮ್ಯಾಚ್ ಆಡಿ ಇಲ್ಲಿನ ಆಳಅಗಲ ಎಲ್ಲವನ್ನೂ ತಿಳ್ಕೊಂಡಿದ್ದಾರೆ. ಸೋ ಇಂಗ್ಲೆಂಡ್ ವಿರುದ್ಧ ಯಾರ ವಿರುದ್ಧ ಯಾವ ಥರ ಬ್ಯಾಟಿಂಗ್ ಮಾಡ್ಬೇಕು ಬೌಲಿಂಗ್ ಮಾಡ್ಬೇಕು ಅನ್ನೋ ಗ್ರೌಂಡ್​ವರ್ಕ್​ನೂ ಮಾಡಿಕೊಳ್ಬೋದು. ಸೋ ಈ ಸ್ಟಾಟ್ಸ್ ನೋಡ್ದಾಗ ಇಂಗ್ಲೆಂಡ್​ಗಿಂತ ಭಾರತವೇ ಎಲ್ಲದ್ರಲ್ಲೂ ಬೆಟರ್ ಇದೆ. ಯಾಕಂದ್ರೆ ಆಂಗ್ಲರ ಪಡೆಯಲ್ಲಿ ಪ್ಲಸ್​ಗಿಂತ ಮೈನಸ್ ಜಾಸ್ತಿ ಇದೆ. ಹಾಗಂತ ಭಾರತೀಯರು ಯಾಮಾರಬಾರದು ಅಷ್ಟೇ.

Shantha Kumari

Leave a Reply

Your email address will not be published. Required fields are marked *