2 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಕ್ಯಾಮೆರಾನ್ ಗ್ರೀನ್ 25.20 ಕೋಟಿಗೆ ಕೆಕೆಆರ್ ಪಾಲಾದ್ರು. ಗ್ರಿನ್‌ಗಾಗಿ ಮೊದಲಿಗೆ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನಡುವೆ ಪೈಪೋಟಿ ನಡೆದು, .ಸುಮಾರು 13.50 ಕೋಟಿ ರೂ.ಗೆ ರಾಜಸ್ತಾನ ಬಿಡ್‌ನಿಂದ ಹಿಂದೆ ಸರಿಯಿತು. ನಂತ್ರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೆಕೆಆರ್ ನಡುವೆ ಪೈಪೋಟಿ ನಡೆದು, 25.20 ಕೋಟಿ ಬಂದ ವೇಳೆ ಸಿಎಸ್‌ಕೆ ಹಿಂದೆ ಸರಿಯಿತು.
ಇದಾಗ್ಯೂ ಅಂತಿಮವಾಗಿ ಬರೋಬ್ಬರಿ 25.20 ಕೋಟಿ ರೂ. ನೀಡುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಕ್ಯಾಮರೋನ್ ಗ್ರೀನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಂತೆ ಗ್ರೀನ್ ಮುಂಬರುವ ಐಪಿಎಲ್ನಲ್ಲಿ ಕೆಕೆಆರ್ ಪರ ಕಣಕ್ಕಿಳಿಯಲಿದ್ದಾರೆ.
ಕ್ಯಾಮರೋನ್ ಗ್ರೀನ್ ಈ ಹಿಂದೆ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. 2023 ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಗ್ರೀನ್, 2024 ರಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿದ್ದರು. ಇದೀಗ ಮೂರನೇ ತಂಡವಾಗಿ ಕೆಕೆಆರ್ ಪರ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. KKR ತಂಡ: ಅಜಿಂಕ್ಯ ರಹಾನೆ, ಅಂಗ್ಕ್ರಿಶ್ ರಘುವಂಶಿ, ಅನ್ಕುಲ್ ರಾಯ್, ಹರ್ಷಿತ್ ರಾಣಾ, ಮನೀಶ್ ಪಾಂಡೆ, ರಮಣ್ದೀಪ್ ಸಿಂಗ್, ರಿಂಕು ಸಿಂಗ್, ರೋವ್ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.