ವಧು, ವರನ ಫೋಟೋ ತೆಗೆಯುತ್ತಿದ್ದ ವೇಳೆ ಭೀಕರ ಅಪಘಾತ! – 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಫೋಟೋಗ್ರಾಫರ್ ಸಾವು!

ಸಾವು ಹೇಗೆ ಬರುತ್ತೆ.. ಯಾವ ರೂಪದಲ್ಲಿ ಬರುತ್ತೆ.. ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ಇಂದು ಇದ್ದವರು ನಾಳೆ ಇರುತ್ತಾರೆ ಅಂತ ಹೇಳೋಕೆ ಸಾಧ್ಯ ಇಲ್ಲ. ಇದೀಗ ಇಲ್ಲೊಂದು ಕಡೆ ಮದುವೆಯಲ್ಲಿ ಕ್ಯಾಮೆರಾ ಮ್ಯಾನ್ ದುರಂತ ಅಂತ್ಯ ಕಂಡಿದ್ದಾರೆ. ಮದುಮಕ್ಕಳ ಪೋಟೋ ತೆಗೆಯುವ ವೇಳೆ ಕಾರೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಸರಣಿ ಅಪಘಾತ! – ಭೀಕರ ದುರಂತಕ್ಕೆ 11 ಮಂದಿ ಬಲಿ!
ಈ ಭೀಕರ ಘಟನೆ ಹರಿಯಾಣದಲ್ಲಿ ನಡೆದಿದೆ. ಮದುವೆಯ ಸಂಭ್ರಮದಲ್ಲಿದ್ದ ಕಲ್ಯಾಣ ಮಂದಿರದಲ್ಲಿ, ಭಾರಿ ಅವಘಡ ನಡೆದಿದ್ದು, ರಸ್ತೆಯ ಮೇಲೆ ಮದುಮಕ್ಕಳ ಶೂಟಿಂಗ್ ಮಾಡುತ್ತಿದ್ದ ಫೋಟೋಗ್ರಾಫರ್ ಮೇಲೆ ವೇಗದಿಂದ ಬಂದ ಕಾರೊಂದು ಹರಿದು, ಆತ 10 ಅಡಿ ಎತ್ತರಕ್ಕೆ ಹಾರಿ ಬಿದ್ದು ಭಯಾನಕವಾಗಿ ಸಾವನ್ನಪ್ಪಿರುವ ಭೀಕರ ದೃಶ್ಯದ ವಿಡಿಯೋ ವೈರಲ್ ಆಗುತ್ತಿದೆ.
ಹರಿಯಾಣದ ಸಿರ್ಸಾದಲ್ಲಿ ಈ ಅಪಘಾತ ಸಂಭವಿಸಿದೆ. ಮದುವೆಯನ್ನು ಚಿತ್ರೀಕರಿಸುತ್ತಿದ್ದ ಯುವ ಛಾಯಾಗ್ರಾಹಕನೊಬ್ಬ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಸಿರ್ಸಾ-ಹಿಸಾರ್ ರಸ್ತೆಯಲ್ಲಿರುವ ಔತಣಕೂಟದ ರೆಸಾರ್ಟ್ನ ಹೊರಗೆ ಬೆಳಿಗ್ಗೆ 6:22 ರಿಂದ 6:28 ರ ನಡುವೆ ಈ ಅಪಘಾತ ಸಂಭವಿಸಿದೆ. ಮದುವೆಯ ನಂತರ ವಧು ಹೊರಡುವ ಸಮಯದಲ್ಲಿ ಕ್ಯಾಮೆರಾಮನ್ ರಸ್ತೆಯಲ್ಲಿ ನಿಂತು ವೀಡಿಯೊಗಳು ಮತ್ತು ಫೋಟೋಗಳನ್ನು ಚಿತ್ರೀಕರಿಸುತ್ತಿದ್ದಾಗ, ವೇಗವಾಗಿ ಬಂದ ಹ್ಯಾಚ್ಬ್ಯಾಕ್ ಕಾರು ಅವನಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಛಾಯಾಗ್ರಾಹಕ ಸುಮಾರು 10 ಅಡಿ ಗಾಳಿಯಲ್ಲಿ ಎಸೆಯಲ್ಪಟ್ಟು 25-30 ಮೀಟರ್ ದೂರದಲ್ಲಿ ಬಿದ್ದ. ಮೃತನನ್ನು ರಾನಿಯಾದ ಅಭೋಲಿ ಗ್ರಾಮದ ನಿವಾಸಿ 22 ವರ್ಷದ ಮಲ್ಕಿತ್ ಅಲಿಯಾಸ್ ಅಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸರು ಅಪರಿಚಿತ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
View this post on Instagram

ನೋಡಿರಿ

