ಅಬ್ಬಬ್ಬಾ.. ಕಾರಿನಲ್ಲಿ ಒಂಟೆಯ ಜಾಲಿ ರೈಡ್‌ – ಡ್ರೈವರ್‌ ಸಾಹಸಕ್ಕೆ ಭೇಷ್‌ ಎಂದ ಜನ!

ಅಬ್ಬಬ್ಬಾ.. ಕಾರಿನಲ್ಲಿ ಒಂಟೆಯ ಜಾಲಿ ರೈಡ್‌ – ಡ್ರೈವರ್‌ ಸಾಹಸಕ್ಕೆ ಭೇಷ್‌ ಎಂದ ಜನ!

ಒಂಟೆಗಳು ಮರುಭೂಮಿಯಲ್ಲಿ ಕಾಣಸಿಗುತ್ತವೆ. ಮರಳುಗಾಡಿನಲ್ಲಿ ಒಂಟೆಗಳು ಹೆಜ್ಜೆ ಹಾಕುವುದನ್ನು ನೋಡುವುದೇ ಒಂದು ಖುಷಿ. ಇತ್ತೀಚೆಗೆ ಕಡಲತೀರಲ್ಲೂ ಕೂಡ ಒಂಟೆಗಳು ಕಾಣ ಸಿಗುತ್ತವೆ. ಬೀಚ್‌ ಗೆ ಬರುವ ಪ್ರವಾಸಿಗರಿಗೆ ಒಂಟೆಗಳೇ ಪ್ರಮುಖ ಆಕರ್ಷಣೆ. ಮಕ್ಕಳಿಂದ ಹಿರಿಯರವರೆಗೂ ಒಂಟೆ ಸವಾರಿ ಮಾಡುತ್ತಾರೆ. ಆದ್ರೆ ಎಂದಾದರೂ ಒಂಟೆ ಕಾರಿನಲ್ಲಿ ಸವಾರಿ ಮಾಡುವುದನ್ನು ನೋಡಿದ್ದೀರಾ? ಇಲ್ಲೊಂದು ಒಂಟೆ ಕಾರಿನಲ್ಲಿ ಪ್ರಯಾಣಿಸಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಹೆಣ್ಣಿಗಾಗಿ ಇಂಡಿಯಾ ಮೈತ್ರಿಕೂಟದ ನಾಯಕರಿಂದ ಕಿತ್ತಾಟ – ಇವರಲ್ಲಿ ಮದುವೆ ಗಂಡು ಯಾರು?

ಹೌದು, ಅಚ್ಚರಿಯಾದ್ರೂ ಸತ್ಯ. ಒಂಟೆಯೊಂದು ಕಾರಿನಲ್ಲಿ ಪ್ರಯಾಣಿಸಿದೆ. ಕಾರಿನಲ್ಲಿ ಕುಳಿತುಕೊಂಡು ಪ್ರಯಾಣವನ್ನು ಆಸ್ವಾದಿಸುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗುತ್ತಿದೆ. ಈ ವೀಡಿಯೋ ಯಾವುದೋ ಅರಬ್ ದೇಶದ್ದು ಎಂದು ಹೇಳಲಾಗುತ್ತಿದೆ. @everydayreelsday ಎಂಬ ಹೆಸರಿನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಮಾರ್ಚ್​​​​ 25ರಂದು ಒಂಟೆಯ ಕಾರ್​​​ ಸವಾರಿಯ ವಿಡಿಯೋ ಹಂಚಿಕೊಳ್ಳಲಾಗಿದೆ.

ವೈರಲ್‌ ಆದ ವಿಡಿಯೋದಲ್ಲಿ ಕಾರಿನ ಡಿಕ್ಕಿಯಲ್ಲಿ ಒಂಟೆ ಕುಳಿತಿದೆ. ಕಾರಿನಲ್ಲಿ ಕುಳಿತ ಒಂಟೆ ತುಂಬಾ ಶಾಂತವಾಗಿ ತನ್ನ ಕುತ್ತಿಗೆಯನ್ನು ಹೊರಕ್ಕೆ ಚಾಚಿ ಸುತ್ತಮುತ್ತಲಿನ ಪರಿಸರವನ್ನು ಆನಂದಿಸುತ್ತಾ ಕಾರ್​​ ರೈಡ್​​​​ ಎಂಜಾಯ್​​ ಮಾಡುತ್ತಿರುವುದನ್ನು ಕಾಣಬಹುದು. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ.

Shwetha M