ಇನ್ನು ಮುಂದೆ ಡಾರ್ಲಿಂಗ್ ಎಂದು ಕರೆದರೆ ಜೋಕೆ..! – ಕಂಬಿ ಎಣಿಸಬೇಕಾದಿತು ಹುಷಾರ್!
ನಮ್ಮ ಪ್ರೀತಿಪಾತ್ರರನ್ನು ಡಾರ್ಲಿಂಗ್ ಅಂತಾ ಕರೆಯುವುದು ಕಾಮನ್.. ಕೆಲವರು ಎಲ್ಲೆಂದರಲ್ಲಿ ಡಾರ್ಲಿಂಗ್ ಅಂತಾ ಕರಿತಾ ಇರ್ತಾರೆ.. ಆದ್ರೆ ಇನ್ನು ಮುಂದೆ ನೀವು ಯಾರನ್ನಾದ್ರೂ ಡಾರ್ಲಿಂಗ್ ಅಂತಾ ಕರಿಯೋ ಮುನ್ನ ಎಚ್ಚರ.. ಡಾರ್ಲಿಂಗ್ ಅಂತಾ ಕರೆದ್ರೆ ಜೈಲೂಟ ಗ್ಯಾರಂಟಿ. ಅಚ್ಚರಿಯಾದ್ರೂ ಸತ್ಯ.. ಇಲ್ಲೊಬ್ಬ ಯುವತಿಯನ್ನು ಡಾರ್ಲಿಂಗ್ ಅಂತಾ ಕರೆದು ಜೈಲು ಸೇರಿದ್ದಾನೆ.
ಇದನ್ನೂ ಓದಿ: ಮಹಿಳೆಯ ಕಿಡ್ನಾಪ್ ಪ್ರಕರಣ – ಮಾಜಿ ಸಚಿವ ಹೆಚ್.ಡಿ ರೇವಣ್ಣ ಜೈಲು ಪಾಲು
ಅಷ್ಟಕ್ಕೂ ಆಗಿದ್ದೇನು?
ಅಕ್ಟೋಬರ್ 21, 2015 ರಂದು, ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಅಂಡಮಾನ್‌ನ ಮಾಯಾಬಂದರ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಹೆಡ್ ಕಾನ್‌ಸ್ಟೆಬಲ್‌ಗೆ ‘ಕ್ಯಾ ಡಾರ್ಲಿಂಗ್ ಚಲನ್ ಕರ್ನೆ ಆಯ್ ಹೇ ಕ್ಯಾ’ ಎಂದು ಕಾಮೆಂಟ್ ಮಾಡಿದ್ದರು. ಇದರಿಂದ ಕೋಪಗೊಂಡ ಆಕೆ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಈ ಪ್ರಕರಣವು ಕಲ್ಕತ್ತಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದೆ.
ಡಾರ್ಲಿಂಗ್ ಪದಕ್ಕೆ ವಿಶೇಷ ಅರ್ಥವಿದೆ ಎಂದು ನಿಘಂಟಿನಲ್ಲಿ ಹೇಳಲಾಗಿದ್ದು, ಅದು ಹೇಗೆ ಅವಹೇಳನಕಾರಿ ಎಂದು ಕಲ್ಕತ್ತಾ ಹೈಕೋರ್ಟ್ ಹಿರಿಯ ವಕೀಲ ಸುಬ್ರತೋ ಮುಖರ್ಜಿ ಹೇಳಿದ್ದಾರೆ. “ಸಮವಸ್ತ್ರ ಧರಿಸಿದವರನ್ನು ಗೌರವಿಸಬೇಕು. ಅವರು ಉದ್ದೇಶಪೂರ್ವಕವಾಗಿ ಹೇಳಿಲ್ಲ ಆದ್ದರಿಂದ ದಂಡ ವಿಧಿಸಬಹುದು ಎಂದು ಅವರು ಹೇಳಿದ್ದರು.
ಆದರೆ ಡಾರ್ಲಿಂಗ್ ಎಂಬ ಪದವನ್ನು ಕೆಟ್ಟದಾಗಿ ಬಳಸಲಾಗಿದ್ದು ಅದು ಶಿಕ್ಷಾರ್ಹವಾಗಿದೆ ಎಂದು ಕಲ್ಕತ್ತಾ ಹೈಕೋರ್ಟ್ ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ರವೀಂದ್ರನಾಥ್ ಸಮಂತಾ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಮೂರ್ತಿ ಜೆ ಸೇನ್ ಗುಪ್ತಾ ಅವರ ಪೀಠವು ‘ಡಾರ್ಲಿಂಗ್’ ಪದವು ಅಶ್ಲೀಲ ಅರ್ಥವನ್ನು ಹೊಂದಿದೆ ಮತ್ತು ಸೆಕ್ಷನ್ 354A (1) (4) ಅಡಿಯಲ್ಲಿ ಆಕ್ಷೇಪಾರ್ಹ ಹೇಳಿಕೆಯಾಗಿದೆ ಎಂದು ಹೇಳಿದರು. ಹೀಗಾಗಿ ಅಶ್ಲೀಲಕರ ಹೇಳಿಯನ್ನು ನೀಡಿದ ವ್ಯಕ್ತಿ ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.