ಈಕೆ ಸ್ನಾನ ಮಾಡಂಗಿಲ್ಲ.. ನೀರು ಕುಡಿಯಂಗಿಲ್ಲ..! – ಯುವತಿಗೆ ಜೀವಜಲವೇ ಕಂಟಕವಾಗಿದ್ದು ಯಾಕೆ?

ಈಕೆ ಸ್ನಾನ ಮಾಡಂಗಿಲ್ಲ.. ನೀರು ಕುಡಿಯಂಗಿಲ್ಲ..! – ಯುವತಿಗೆ ಜೀವಜಲವೇ ಕಂಟಕವಾಗಿದ್ದು ಯಾಕೆ?

ಕೆಲವರಿಗೆ ಅಲರ್ಜಿ ಸಮಸ್ಯೆ ಬೆಂಬಿಡದಂತೆ ಕಾಡುತ್ತಿದೆ. ಧೂಳಿಗೆ, ಬಿಸಿಲಿಗೆ ಹೋದ್ರು ಆರೋಗ್ಯ ಕೆಡುತ್ತೆ. ಕೆಲವರಿಗೆ ಏನು ತಿಂದರೂ ದೇಹಕ್ಕೆ ಆಗೋದಿಲ್ಲ. ತಿಂದ ಕೂಡಲೇ ಮೈಯಲ್ಲೆಲ್ಲಾ ಬೊಬ್ಬೆಗಳು ಏಳುತ್ತವೆ. ಹೀಗಾಗಿ ಅಲರ್ಜಿಗೆ ತುತ್ತಾದವರು ಏನಾದರೂ ತಿನ್ನಬೇಕೆಂದರೂ ಹತ್ತು ಬಾರಿಯಾದರೂ ಯೋಚಿಸಬೇಕಾಗುತ್ತದೆ. ಇಲ್ಲದಿದ್ದರೆ ವೈದ್ಯರ ಬಳಿ ಹೋಗುವುದು ಖಾಯಂ ಆಗುತ್ತೆ. ಇಲ್ಲೊಬ್ಬಳು ಕೂಡ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆಕೆಗೆ ಜೀವಜಲ ನೀರೇ ಅಲರ್ಜಿ. ಒಂದು ಹನಿ ನೀರು ಮುಟ್ಟಿದ್ರೂ ಆಕೆ ಅನಾರೋಗ್ಯಕ್ಕೆ ತುತ್ತಾಗುತ್ತಾಳೆ.

ನೀರನ್ನು ಜೀವಜಲ ಅಂತಾ ಕರೀತಾರೆ. ನೀರು ಇಲ್ಲ ಅಂದ್ರೆ ಬದುಕೋಕೆ ಸಾಧ್ಯ ಇಲ್ಲ. ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ನೀರು ಬೇಕೇ ಬೇಕು. ಆದ್ರೆ ಅಮೆರಿಕಾದ ಯುವತಿಯೊಬ್ಬಳು ನೀರಿನ ಅಪರೂಪದ ಅಲರ್ಜಿಯಿಂದ ಬಳಲುತ್ತಿದ್ದಾಳೆ. ಆಕೆ ಒಂದು ಹನಿ ನೀರು ಮುಟ್ಟಿದ್ರೆ ಸಾಕು. ಮೈಯಲ್ಲೆಲ್ಲಾ ಗುಳ್ಳೆಗಳು ಏಳುತ್ತವೆ. ಮೈ ಉರಿಯಿಂದ ಒದ್ದಾಡುತ್ತಾಳೆ.

ಇದನ್ನೂ ಓದಿ: ಬೆಟ್ಟಿಂಗ್‌ ಕಟ್ಟಿ 10 ನಿಮಿಷದಲ್ಲಿ ಲೀಟರ್‌ಗಟ್ಟಲೆ ಮದ್ಯ ಸೇವಿಸಿದ..! – ದುಡ್ಡಿನ ಆಸೆಯಿಂದ ಪ್ರಾಣವೇ ಹೊಯ್ತು!

ಮಹಿಳೆಗೆ ಇರುವ ಖಾಯಿಲೆ ಏನು?

ಟೆಸ್ಸಾ ಹ್ಯಾನ್ಸೆನ್ ಸ್ಮಿತ್ ಎಂಬಾಕೆ ಈ ಭಯಂಕರ ಅಲರ್ಜಿಗೆ ಗುರಿಯಾಗಿದ್ದಾಳೆ. “ಅಕ್ವಾಜೆನಿಕ್ ಉರ್ಟಿಕೇರಿಯಾ” ಎಂಬ ಅಪರೂಪದ ಅಲರ್ಜಿಗೆ ತುತ್ತಾಗಿದ್ದಾಳೆ. ಈ ಸಮಸ್ಯೆ ಆಕೆಗೆ ಬೆಂಬಿಡದ ಭೇತಾಳನಂತೆ ಕಾಡುತ್ತಿದೆ. ವಿಶ್ವಾದ್ಯಂತ 100 ರಿಂದ 250 ಜನರು ಅಕ್ವಾಜೆನಿಕ್ ಉರ್ಟೇರಿಯಾ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಸ್ನಾನ ಮಾಡುವಂತಿಲ್ಲ, ನೀರು ಕುಡಿಯುವಂತಿಲ್ಲ!

ಯುವತಿ ನೀರು ಅಲರ್ಜಿಗೆ ತುತ್ತಾಗಿರುವುದರಿಂದಾಗಿ ಆಕೆ ಆಕೆ ಸ್ನಾನ ಮಾಡಬಾರದು, ಮಳೆಯಲ್ಲಿ ನೆನೆಯಬಾರದು ಅಂತಾ ವೈದ್ಯರು ಕಟ್ಟುನಿಟ್ಟಾಗಿ ಹೇಳಿದ್ದಾರೆ.  ಇನ್ನು ದಾಹವಾದರೆ ಹನಿ ನೀರು ಸಹ ಬಾಯಿಗೆ ಬಿಟ್ಟುಕೊಳ್ಳುವಂತಿಲ್ಲ.

ಯುವತಿ ಮನೆಯಿಂದ ಹೊರಗೆ ಹೋಗುವಂತಿಲ್ಲ!

ಟೆಸ್ಸಾ ಹ್ಯಾನ್ಸೆನ್ ಸ್ಮಿತ್ ಪ್ರಸ್ತುತ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಎಂಟನೇ ವಯಸ್ಸಿನವಳಿದ್ದಾಗ ನೀರು ಕುಡಿದರೆ ಮೈಮೇಲೆ ಬೊಬ್ಬೆಗಳು ಬರುತ್ತಿದ್ದವು. ಮೈಮೇಲೆ ನೀರು ತಾಕಿದರೂ ಅದೇ ಸ್ಥಿತಿ. ಆಕೆ ಮನೆಯಲ್ಲಷ್ಟೇ ಅಲ್ಲ, ಕಡೆಗೆ ಮನೆಯಿಂದ ಆಚೆ ಹೋಗೋಣವೆಂದರೆ ನಡೆಯುವಾಗಿ ಬೆವರು ಬಂದರೆ ಅದಕ್ಕೂ ಅಲರ್ಜಿಯಾಗುತ್ತಿತ್ತು. ನಿಜ ಹೇಳಬೇಕೆಂದರೆ ಪ್ರಸ್ತುತ ಆಕೆ ಸ್ನಾನ ಮಾಡದ ಸ್ಥಿತಿಗೆ ಈ ಕಾಯಿಲೆ ದೂಡಿದೆ. ನೀರು ಅಷ್ಟೇ ಅಲ್ಲ, ಮಂಜಿನ ಹನಿಗಳು ದೇಹಕ್ಕೆ ತಾಗಿದರೂ ಇಡೀ ಶರೀರ ಬೊಬ್ಬೆಗಳಾಗಿ ಉರಿಯುತ್ತದೆ. ಗಂಟಲಿಗೆ ನೀರು ಬಿದ್ದರೆ ಗಂಟಲಿನದೂ ಅದೇ ಸ್ಥಿತಿ. ಹೀಗಾಗಿ ಆಕೆ ಮನೆಯಲ್ಲೇ ಬಂಧಿಯಾಗುವಂತೆ ಆಗಿದೆ.

ತಾಯಿ ವೈದ್ಯರಾದರೂ ಮಗಳ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ!

ಯುವತಿಗೆ ಹಲವು ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿದೆ. ಆಕೆಯ ತಾಯಿ ವೈದ್ಯರಾದರೂ ತನ್ನ ಮಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿಲ್ಲ. ಈಕೆಯ ಸಮಸ್ಯೆ ವೈದ್ಯ ಲೋಕಕ್ಕೂ ಸವಾಲಾಗಿದೆ.

ಅವಳು ಸುಮಾರು 8 ವರ್ಷ ವಯಸ್ಸಿನವಳಿದ್ದಾಗ “ನೀರಿನ ಅಲರ್ಜಿ” ಎದುರಾಯಿತು. ಅದು ವರ್ಷಗಳು ಉರುಳುತ್ತಿದ್ದಂತೆ ತೀವ್ರವಾಗಿ ಆರೋಗ್ಯ ಹದಗೆಟ್ಟಿದೆ. ತನ್ನ ದಿನಗಳನ್ನು ಮನೆಯೊಳಗೆ ಕಳೆಯುತ್ತಾಳೆ, ಯಾವುದಾದರೂ ಚಿತ್ರ ಬಿಡಿಸುವುದು, ಬೆಕ್ಕುಗಳೊಂದಿಗೆ ಆಟವಾಡುವುದರಲ್ಲಿ ತಲ್ಲೀನಳಾಗುತ್ತಾಳೆ ಎಂದು ಆಕೆ ತಾಯಿ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ

ಟೆಸ್ಸಾ ಹಲವು ವರ್ಷಗಳಿಂದ ನೀರನ್ನೇ ಕುಡಿಯುತ್ತಿಲ್ಲ. ಹೀಗಾಗಿ ಆಕೆಯ ದೇಹ  ನಿರ್ಜಲೀಕರಣಕ್ಕೆ ಒಳಗಾಗಿದೆ. ಇದರ ಪರಿಣಾಮ ಇತ್ತೀಚೆಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ತಕೊರತೆಯನ್ನು ಸರಿಪಡಿಸಲಾಯಿತಾದರೂ ರಕ್ತದ ಹರಿವು ನಿರ್ಬಂಧಿಸಲ್ಪಟ್ಟಿದ್ದರಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಸತತ ಚಿಕಿತ್ಸೆಯಿಂದ ಈಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.

ಸಹಾಯಕ್ಕಾಗಿ ಮೊರೆ ಹೋದ ಕುಟುಂಬ

ಆಕೆಯ ಇತ್ತೀಚಿನ ಆಸ್ಪತ್ರೆ ವೆಚ್ಚ $100,000 ಆಗಿದೆ. ಇದರಲ್ಲಿ $10,000 ವಿಮೆ ಇದ್ದರೂ, ಕುಟುಂಬಕ್ಕೆ ವೈದ್ಯಕೀಯ ವೆಚ್ಚ ಬರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಆಕೆಯ ಕುಟುಂಬ “ಗೋ ಫಂಡ್​ ಮೀ” ವೆಬ್​ಸೈಟ್​ ಸ್ಥಾಪಿಸಿ ಸಾರ್ವಜನಿಕರಿಂದ ನೆರವಿಗೆ ಕೈ ಚಾಚಿದೆ.

ಆಕೆ ಕುರಿತು “ಕ್ರಾನಿಕ್ಲಿ ಎಂಪವರ್ಡ್” ಎಂಬ ಶೀರ್ಷಿಕೆ ಹೊತ್ತ ಪುಸ್ತಕ ಬಂದಿದೆ. ಡಾ. ಓಜ್ ಶೋನಲ್ಲಿ ಕಾಣಿಸಿಕೊಂಡಿದ್ದಾಳೆ. “ನೀರಿನ ಅಲರ್ಜಿ ನನಗೆ ಸಂಭವಿಸದಿದ್ದರೆ ಜೀವನವು ಎಷ್ಟು ಸುಂದರವಾಗಿರುತ್ತಿತ್ತು ಎಂದು ನಾನು ಯಾವಾಗಲೂ ಯೋಚಿಸುತ್ತೇನೆ, ಆದರೆ ಇದರಿಂದ ಹೊರಬರಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿರುವ ಕಾರಣ, ನಾನು ಇತರರಿಗೆ ಯಾವ ರೀತಿಯ ಸಹಾಯ ಮಾಡಬಹುದು ಎಂಬುದನ್ನು ಯೋಚಿಸುತ್ತಿದ್ದೇನೆ ಎಂದು ಟೆಸ್ಸಾ ಹೇಳಿದ್ದಾಳೆ.

Shwetha M