1,000 ಅಡಿ ಮೇಲೆ ಹಾರುವಾಗ ವಿಮಾನದ ಇಂಜಿನ್​ನಲ್ಲಿ ಬೆಂಕಿ – 184 ಪ್ರಯಾಣಿಕರ ಕಥೆ ಏನು!?

1,000 ಅಡಿ ಮೇಲೆ ಹಾರುವಾಗ ವಿಮಾನದ ಇಂಜಿನ್​ನಲ್ಲಿ ಬೆಂಕಿ – 184 ಪ್ರಯಾಣಿಕರ ಕಥೆ ಏನು!?

ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಬುಧಾಬಿಯಿಂದ ಕೇರಳದ ಕ್ಯಾಲಿಕಟ್​ಗೆ ಹೊರಟಿದ್ದ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ. ಏರ್ ಇಂಡಿಯಾ ವಿಮಾನದ ಒಂದು ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸಮುದ್ರ ಮಟ್ಟದಿಂದ ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವಾಗ ಒಂದು ಎಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

ಇದನ್ನೂ ಓದಿ : ಕಾರು, ಬೈಕ್ ಆಯ್ತು ಈಗ ಎಲೆಕ್ಟ್ರಿಕ್ ವಿಮಾನ! – ಯಾವಾಗಿನಿಂದ ಹಾರಾಟ

ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಈ ಬಗ್ಗೆ ಮಾಹಿತಿ ನೀಡಿದೆ. ಏರ್ ಇಂಡಿಯಾ ಎಕ್ಸ್​ಪ್ರೆಸ್ B737-800 ವಿಮಾನದ ನಂಬರ್ 1 ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಮಾನದಲ್ಲಿ 184 ಪ್ರಮಾಣಿಕರಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ. ಒಂದು ವಾರದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಎರಡನೇ ಘಟನೆ ಇದು. ಜನವರಿ 29 ರಂದು ತಾಂತ್ರಿಕ ದೋಷದಿಂದಾಗಿ ಏರ್ ಇಂಡಿಯಾ ವಿಮಾನ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

ಹಾಗೇ ಜನವರಿ 23 ರಂದು, ತಿರುವನಂತಪುರದಿಂದ ಮಸ್ಕತ್​ಗೆ ಹೊರಟಿದ್ದ ಮತ್ತೊಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಬೋರ್ಡಿಂಗ್ ಸಮಯ ತಡವಾಗಿತ್ತು. ಕಂಪ್ಯೂಟರ್ ಸಿಸ್ಟಮ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ 45 ನಿಮಿದ ತಡವಾಗಿ ಹೊರಟಿತ್ತು.

suddiyaana