ಕ್ಯಾಡ್ಬರಿ ಪ್ರಿಯರೇ ಎಚ್ಚರ.. ಎಚ್ಚರ! – ಚಾಕಲೇಟ್ ತಿಂದರೆ ಜೀವಕ್ಕೆ ಕಂಟಕ?  
ಚಾಕಲೇಟ್ ನಿಂದ ಲಿಸ್ಟೀರಿಯಾ ಸೋಂಕು!

ಕ್ಯಾಡ್ಬರಿ ಪ್ರಿಯರೇ ಎಚ್ಚರ.. ಎಚ್ಚರ! – ಚಾಕಲೇಟ್ ತಿಂದರೆ ಜೀವಕ್ಕೆ ಕಂಟಕ?  ಚಾಕಲೇಟ್ ನಿಂದ ಲಿಸ್ಟೀರಿಯಾ ಸೋಂಕು!

ವಿಶ್ವದ ಬಹುತೇಕ ಜನರಿಗೆ ಕ್ಯಾಡ್ಬರಿ ಅಚ್ಚುಮೆಚ್ಚಿನ ಚಾಕಲೇಟ್ ಆಗಿದೆ. ಮಕ್ಕಳಿಂದ ವೃದ್ಧರ ವರೆಗೂ ಎಲ್ಲರೂ ಈ ಚಾಕಲೇಟ್ ಅನ್ನು ಸವಿಯುತ್ತಾರೆ. ಇದೀಗ ಕ್ಯಾಡ್ಬರಿ ಚಾಕಲೇಟ್ ತಿನ್ನುವವರಿಗೆ ಶಾಕಿಂಗ್ ವಿಚಾರವೊಂದು ಕಾದಿದೆ. ಈ ಚಾಕಲೇಟ್ ನಿಂದ ಲಿಸ್ಟೀರಿಯಾ ಸೋಂಕು ಹರಡುವ ಭೀತಿ ಎದುರಾಗಿದೆ.

ಲಿಸ್ಟೀರಿಯಾ ಸೋಂಕು ಹರಡುವ ಭೀತಿಯಿಂದಾಗಿ ಯುಕೆಯಾದ್ಯಂತ ಸಾವಿರಾರು ಕ್ಯಾಡ್ಬರಿ ಉತ್ಪನ್ನಗಳನ್ನು ಖರೀದಿಸಿದ ಜನರಿಗೆ ಅವುಗಳನ್ನು ತಿನ್ನದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ ಈ ಕಂಪನಿಯ ಉತ್ಪನ್ನಗಳನ್ನು ಹಿಂತಿರುಗಿಸಿದರೆ ಹಣ ವಾಪಸ್ ನೀಡಲಾಗುವುದು ಎಂದು ಕಂಪನಿ ಹೇಳಿರುವುದಾಗಿ ಯುಕೆ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಮೇ 10ರಂದು ಚುನಾವಣೆ – ಎಲ್ಲಾ ಖಾಸಗಿ ಕಚೇರಿಗಳು, ಕಾರ್ಖಾನೆಗಳು ಬಂದ್..!

ಯುಕೆಯ ಆಹಾರ ಗುಣಮಟ್ಟ ಏಜಿನ್ಸಿ ತನ್ನ ವೆಬ್ ಸೈಟ್ ನಲ್ಲಿ ತನ್ನ ಗ್ರಾಹಕರಿಗೆ ಮನವಿ ಮಾಡಿದೆ. ಕ್ರಂಚಿ, ಡೈಮ್, ಫ್ಲೇಕ್, ಡೈರಿ ಮಿಲ್ಕ್ ಬಟನ್‌ಗಳು ಮತ್ತು ಡೈರಿ ಮಿಲ್ಕ್ ಚಂಕ್ಸ್ 75 ಗ್ರಾಂ ಚಾಕೊಲೇಟ್ ಡೆಸರ್ಟ್‌ಗಳನ್ನು ಸೇವಿಸುವಾಗ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಉತ್ಪನ್ನಗಳ ಎಕ್ಸ್‌ಪೈರಿ ದಿನಾಂಕವನ್ನು ಪರಿಶೀಲಿಸುವಂತೆ ಮನವಿ ಮಾಡಿಕೊಳ್ಳುತ್ತಿದೆ. ಕ್ರಂಚಿ ಮತ್ತು ಫ್ಲೇಕ್ ಡೆಸರ್ಟ್‌ಗಳಿಗೆ ಮೇ 17 ಎಕ್ಸ್‌ಪೈರಿ ಡೇಟ್‌ ಇರುವ ಹಾಗೂ ಉಳಿದವುಗಳಿಗೆ ಮೇ 18 ರಂದು ಎಕ್ಸ್‌ಪೈರಿ ಡೇಟ್‌ ಇರುವ ಚಾಕೊಲೇಟ್‌ಗಳಲ್ಲಿ ಲಿಸ್ಟೀರಿಯಾ ಸೋಂಕು ಹರಡುವ ಸಾಧ್ಯತೆ ಇದೆ.

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮಾಹಿತಿ ಪ್ರಕಾರ, ಲಿಸ್ಟೀರಿಯಾ ಸೋಂಕು ಆಹಾರದಿಂದ ಹರಡುವ ಬ್ಯಾಕ್ಟೀರಿಯಾದ ಕಾಯಿಲೆಯಾಗಿದೆ. ಲಿಸ್ಟೀರಿಯಾ ಸೋಂಕು ಗರ್ಭಿಣಿಯರು ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈ ಸೋಂಕು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತವೆ. ಇದರಿಂದಾಗಿ ಆರೋಗ್ಯ ಕ್ಷೀಣಿಸುತ್ತಾ ಬರುತ್ತದೆ.  ಗರ್ಭಿಣಿಯರಿಗೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಪ್ರಕಾರ, ಲಿಸ್ಟೀರಿಯಾ ಸೋಂಕು ಫ್ಲೂಗೆ ಹೋಲುತ್ತವೆ. ಆರಂಭದಲ್ಲಿ ಜ್ವರ, ಸ್ನಾಯು ನೋವು, ಶೀತ, ಭಾವನೆ ಅಥವಾ ಅನಾರೋಗ್ಯ ಮತ್ತು ಅತಿಸಾರ ಕಾಣಿಸಿಕೊಳ್ಳುತ್ತದೆ. ಸೋಂಕಿತ ವ್ಯಕ್ತಿ ಮತ್ತು ದೇಹ ಸ್ಥಿತಿಗಣುಗುಣವಾಗಿ ಲಿಸ್ಟೀರಿಯಾ ಸೋಂಕಿನ ಲಕ್ಷಣಗಳು ಬದಲಾಗುತ್ತವೆ ಎನ್ನಲಾಗಿದೆ.

suddiyaana