ಎಲೆಕೋಸು ತಿನ್ನೋದು ಡೇಂಜರ್! – ಈ ಸಮಸ್ಯೆ ಇದ್ದವರು ಕ್ಯಾಬೇಜ್ ತಿನ್ನಲೇಬೇಡಿ!

ಎಲೆಕೋಸು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದ್ರಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಇದು ವಿಟಮಿನ್ C, ವಿಟಮಿನ್ K, ಫೈಬರ್ ಹಾಗೂ ಶಕ್ತಿಶಾಲಿ ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ತೂಕ ಇಳಿಸಿಕೊಳ್ಳಲು ಇದು ಸಹಕಾರಿ. ಆದರೆ ಎಲೆಕೋಸು ಎಲ್ಲರಿಗೂ ಒಳ್ಳೆಯದಲ್ಲ. ಇದ್ರಿಂದಾಗಿ ಕೆಲವರಿಗೆ ಅನಾರೋಗ್ಯ ಉಂಟಾಗಬಹುದು.
ಇದನ್ನೂ ಓದಿ: ವಿಜಯ್-ರಶ್ಮಿಕಾ ಮದುವೆ ಬರುವ ಅತಿಥಿಗಳಿಗೆ ಮೊಬೈಲ್ ನಿಷೇಧ – ಫೋಟೋ ಲೀಕ್ ಮಾಡುವಂಗಿಲ್ಲ
ಮೂತ್ರಪಿಂಡದ ಕಲ್ಲು ಸಮಸ್ಯೆ ಇರುವವರು ಎಲೆಕೋಸು ತಿನ್ನುವ ಮೊದಲು ಎಚ್ಚರಿಕೆ ವಹಿಸಬೇಕು. ಇದರಲ್ಲಿ ಇರುವ ಆಕ್ಸಾಲಿಕ್ ಆಮ್ಲವು ಕ್ಯಾಲ್ಸಿಯಂ ಜೊತೆ ಸೇರಿ ಕಲ್ಲು ರೂಪಿಸುವ ಸಾಧ್ಯತೆ ಇದೆ. ಮೂತ್ರಪಿಂಡದ ಕಾರ್ಯ ನಿಧಾನವಾಗಿರುವವರಿಗೆ ಇದು ಸಮಸ್ಯೆಯನ್ನು ಹೆಚ್ಚಿಸಬಹುದು.
ಹೃದಯ ಸಂಬಂಧಿ ಸಮಸ್ಯೆಗಳಿಂದ ರಕ್ತ ತೆಳುಗೊಳಿಸುವ ಔಷಧಿಗಳನ್ನು ಸೇವಿಸುವವರು ಕೂಡ ಎಚ್ಚರಿಕೆಯಿಂದಿರಬೇಕು. ಎಲೆಕೋಸಿನಲ್ಲಿ ವಿಟಮಿನ್ K ಹೆಚ್ಚು ಇರುವುದರಿಂದ ಅದು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡಬಹುದು. ಇದರಿಂದ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಹೆಚ್ಚಾಗಬಹುದು.
ಜೀರ್ಣಕ್ರಿಯೆ ಸಮಸ್ಯೆ ಇರುವವರು ಎಲೆಕೋಸನ್ನು ಜಾಗ್ರತೆಯಿಂದ ಸೇವಿಸಬೇಕು. ಇದರಲ್ಲಿ ರಾಫಿನೋಸ್ ಎಂಬ ಕಾರ್ಬೋಹೈಡ್ರೇಟ್ ಇದ್ದು, ಇದು ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಹೊಟ್ಟೆ ಉಬ್ಬರ, ಅನಿಲ ಮತ್ತು ಸೆಳೆತದ ನೋವು ಉಂಟಾಗಬಹುದು. ಹೆಚ್ಚು ಫೈಬರ್ ಇರುವುದರಿಂದ ಸೂಕ್ಷ್ಮ ಹೊಟ್ಟೆ ಇರುವವರಿಗೆ ಅತಿಸಾರ ಸಮಸ್ಯೆಯೂ ಉಂಟಾಗಬಹುದು.
ಥೈರಾಯ್ಡ್ ಸಮಸ್ಯೆ ಇರುವವರು, ವಿಶೇಷವಾಗಿ ಗಾಯ್ಟರ್ ಇರುವವರು, ಎಲೆಕೋಸನ್ನು ಮಿತವಾಗಿ ಅಥವಾ ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸಬೇಕು. ಕ್ರೂಸಿಫೆರಸ್ ತರಕಾರಿಗಳಲ್ಲಿರುವ ಗಾಯ್ಟ್ರೋಜೆನ್ಗಳು ಅಯೋಡಿನ್ ಶೋಷಣೆಗೆ ಅಡ್ಡಿಯಾಗಬಹುದು. ಇದರಿಂದ ಥೈರಾಯ್ಡ್ ಹಾರ್ಮೋನ್ ಉತ್ಪಾದನೆಗೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಅಲರ್ಜಿ, ಆಸ್ತಮಾ ಅಥವಾ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರೂ ಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಕೆಲವರಿಗೆ ಹಿಸ್ಟಮೈನ್ ಪ್ರತಿಕ್ರಿಯೆಯಿಂದ ಚರ್ಮದ ದದ್ದು, ತುರಿಕೆ ಅಥವಾ ಉಸಿರಾಟ ತೊಂದರೆ ಉಂಟಾಗಬಹುದು. ಗರ್ಭಿಣಿಯರಲ್ಲಿ ಉಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಎಲೆಕೋಸು ಆರೋಗ್ಯಕರವಾದರೂ, ಕೆಲವರಿಗೆ ಅದು ಹಾನಿಕಾರಿಯಾಗಬಹುದು — ವೈದ್ಯರ ಸಲಹೆ ಪಡೆಯುವುದು ಉತ್ತಮ.

ನೋಡಿರಿ

