ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಬಂಧನ ಭೀತಿ! – ವಿದೇಶಕ್ಕೆ ಎಸ್ಕೇಪ್‌ ಆದ್ರಾ?

ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಬಂಧನ ಭೀತಿ! – ವಿದೇಶಕ್ಕೆ ಎಸ್ಕೇಪ್‌ ಆದ್ರಾ?

ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ತೀವ್ರಗೊಂಡಿದೆ.  ಶಾಸಕ ಬೈರತಿ ಬಸವರಾಜ್‌ಗೆ ಬಂಧನದ ಭೀತಿ ಎದುರಾಗಿದೆ. ಅವರನ್ನು ಪತ್ತೆಹಚ್ಚಲು ಸಿಐಡಿ ತಂಡವು ಬೆಂಗಳೂರು ನಗರದೆಲ್ಲೆಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದ್ರೀಗ ಬೈರತಿ ಬಸವರಾಜ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ಎಸ್ಕೇಪ್‌ ಆಗಿದ್ದಾರೆ.

ಇದನ್ನೂ ಓದಿ: ಈ ಊರಿಗೆ ನಾನೇ ರಾಜ.. ಆಟೋ ನನ್ನ ಸಿಂಹಾಸನ!- ರಿಕ್ಷಾ ಮೇಲೆ ಸವಾರಿ ಮಾಡಿದ ನಾಯಿ!

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು‌ ಅರ್ಜಿಯನ್ನ ಹೈಕೋರ್ಟ್​​ ವಜಾ‌ಗೊಳಿಸಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಬಿಜೆಪಿ ಶಾಸಕನಿಗೆ ಸಿಐಡಿ ಟೀಮ್ ಲುಕ್​ ಔಟ್​ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಅವರನ್ನು ಬಂಧಿಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ​ ಶಾಸಕ ಬೈರತಿ ಬಸವರಾಜ್ ಅವರು ಮೊಬೈಲ್​​ಗಳನ್ನ ಆನ್​ ಮಾಡದೆ ಸ್ವಿಚ್​ ಆಫ್​ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.  ಆಪ್ತರ ಮೂಲಕ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿರೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬೈರತಿ ಆಪ್ತರ ಮೇಲೂ ಸಿಐಡಿ ತಂಡ ಕಣ್ಣಿಟ್ಟಿದೆ.

ಬೈರತಿ ಬಸವರಾಜ್‌ ಪತ್ತೆ ಹಚ್ಚಲು ಈಗಾಗಲೇ ಕರ್ನಾಟಕ, ಗೋವಾ, ಕೇರಳ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಸಿಐಡಿಯ ವಿಶೇಷ ತಂಡಗಳಿಂದ ಹುಡುಕಲಾಗಿದೆ. ಇದೀಗ ಬೈರತಿ ಬಸವರಾಜ್ ವಿದೇಶಕ್ಕೆ ತೆರಳುವುದನ್ನು ತಡೆಯುವ ನಿಟ್ಟಿನಲ್ಲಿ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

Shwetha M

Leave a Reply

Your email address will not be published. Required fields are marked *