ಪಾನ್‌ ಮಸಾಲ ಬದಲು ಚಿಪ್ಸ್‌ ಖರೀದಿ!  – ಸಿಟ್ಟಿಗೆದ್ದ ಪಾಪಿ ಬಾಲಕಿಯನ್ನು ಕೊಂದೇ ಬಿಟ್ಟ!

ಪಾನ್‌ ಮಸಾಲ ಬದಲು ಚಿಪ್ಸ್‌ ಖರೀದಿ!  – ಸಿಟ್ಟಿಗೆದ್ದ ಪಾಪಿ ಬಾಲಕಿಯನ್ನು ಕೊಂದೇ ಬಿಟ್ಟ!

ಸಣ್ಣ ಮಕ್ಕಳಿಗೆ ಹಣ ನೀಡಿ ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸಿ ತರುವಂತೆ ಅನೇಕರು ಹೇಳ್ತಾರೆ. ಈ ವೇಳೆ ಮಕ್ಕಳು ಉಳಿದ ಹಣದಲ್ಲಿ ಚಾಕಲೇಟ್‌, ಪೆಪ್ಪರ್‌ಮೆಂಟ್‌ ತಗೋಳೊದು ಸಾಮಾನ್ಯ. ಇಲ್ಲೊಬ್ಬ ವ್ಯಕ್ತಿ ಬಾಲಕಿಗೆ ಹಣ ನೀಡಿ ಪಾನ್ ಮಸಾಲಾ ತರುವಂತೆ ಹೇಳಿದ್ದಾನೆ. ಆದ್ರೆ ಬಾಲಕಿ ಪಾನ್ ಮಸಾಲ ಬದಲು ಚಿಪ್ಸ್‌ ಪ್ಯಾಕೆಟ್‌ ಖರೀದಿಸಿದ್ದಾಳೆ. ಇದರಿಂದಾಗಿ ರೊಚ್ಚಿಗೆದ್ದ ಆತ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಏನಿದೆ ಘಟನೆ?

ಉತ್ತರ ಪ್ರದೇಶದ ಆಲಿಘರ್‌ನಲ್ಲಿ ಘಟನೆ ನಡೆದಿದೆ. ನೆರೆ ಮನೆಯ ವ್ಯಕ್ತಿಯೊಬ್ಬ 6 ವರ್ಷದ ಬಾಲಕಿ ಬಳಿ ಪಾನ್‌ ಮಸಾಲ ತರುವಂತೆ ಹೇಳಿದ್ದಾನೆ. ಈ ವೇಳೆ ಬಾಲಕಿ ಕೈಗೆ 20 ರೂಪಾಯಿ ನೀಡಿ ಅಂಗಡಿಗೆ ಕಳುಹಿಸಿದ್ದಾನೆ. ಆದರೆ ಬಾಲಕಿ ಪಾನ್‌ ಮಸಾಲ ತರಲೆಂದು ನೀಡಿದ್ದ ಹಣದಲ್ಲಿ ಚಿಪ್ಸ್‌ ಖರೀದಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಪಾಕಿಸ್ತಾನದಿಂದ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಭಿಕ್ಷುಕರ ರಫ್ತು – ವಿದೇಶಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿಯರಿಂದ ಭಿಕ್ಷಾಟನೆ

ಪ್ರಕರಣ ಬಯಲಾಗಿದ್ದು ಹೇಗೆ?

ಬಾಲಕಿ ಮನೆಯ ಸುತ್ತಮುತ್ತ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಪೋಷಕರು ಬಾಲಕಿಗಾಗಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದಾರೆ. ಈ ವೇಳೆ ಆಕೆ ಪತ್ತೆಯಾಗಿರಲ್ಲಿಲ್ಲ. ಹೀಗಾಗಿ ಆಕೆಯ ಕುಟುಂಬದವರು ನಗರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಂಜೆಯ ನಂತರ ಕಾಣೆಯಾದ ದೂರು ದಾಖಲಿಸಿದ್ದರು. ಬಳಿಕ, ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಸಹಾಯದಿಂದ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ಸಿಸಿಟಿವಿಯಲ್ಲಿ ನೆರೆಯಾತ ಬಾಲಕಿಯನ್ನು ಮನೆಗೆ ಕರೆದೊಯ್ದಿರುವುದು ಬೆಳಕಿಗೆ ಬಂದಿದೆ.

ಬಾಲಕಿ ಶವವನ್ನು ಗೋಣಿಚೀಲದಲ್ಲಿ ಇಟ್ಟಿದ್ದ!

ಬಾಲಕಿಯನ್ನು ಹತ್ಯೆಗೈದಿದ್ದ ಪಾಪಿ, ಬಾಲಕಿಯ ಶವವನ್ನು ಆತನ ಮನೆಯಲ್ಲಿ ಇಟ್ಟಿದ್ದ. ಮೃತದೇಹವನ್ನು  ವಿಲೇವಾರಿ ಮಾಡಲು ಗೋಣಿಚೀಲದಲ್ಲಿ ಕಟ್ಟಿದ್ದ. ತನಿಖೆ ನಡೆಸಿದ ಪೊಲೀಸರು ಆರೋಪಿಯ ನಿವಾಸದಲ್ಲಿದ್ದ ಶವವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಹಾಗೂ ಆತನ ಇಬ್ಬರು ಸಹೋದರರ ಬಂಧನ!

ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಸಹಾಯ ಮಾಡಿದ ಆತನ ಇಬ್ಬರು ಸಹೋದರರನ್ನು ಬಂಧಿಸಲಾಗಿದ್ದು, ಹಾಗೂ ಬಾಲಕಿಯ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Shwetha M