ಹೆಂಡ್ತಿ ಜೊತೆ ಜಗಳ, ನಟಿ ಜೊತೆಯೇ ವಾಸ – ಉದ್ಯಮಿ ವೈಶಾಖ್ ದುರಂತ ಅಂತ್ಯಕ್ಕೆ ಕಾರಣ ಬಹಿರಂಗ

ಹೆಂಡ್ತಿ ಜೊತೆ ಜಗಳ, ನಟಿ ಜೊತೆಯೇ ವಾಸ – ಉದ್ಯಮಿ ವೈಶಾಖ್ ದುರಂತ ಅಂತ್ಯಕ್ಕೆ ಕಾರಣ ಬಹಿರಂಗ

ನಟಿ ಕೃಷಿ ತಾಪಂಡ ಬದುಕಿನಲ್ಲಿ ಮತ್ತೊಮ್ಮೆ ಬಿರುಗಾಳಿ ಎದ್ದಿದೆ. ಇತ್ತೀಚೆಗಷ್ಟೇ ನಟಿ ಕೃಷಿ ತಾಪಂಡ ಪ್ರೀತಿಯಲ್ಲಿ ನೊಂದಿದ್ದೇನೆ ನನ್ನನ್ನು ಬದುಕಲಿ ಬಿಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದರು. ನಂತರ ಎಲ್ಲವೂ ಸರಿಯಾಗಿತ್ತು. ಕೃಷಿ ಮೊದಲಿನಂತೆ ಆರಾಮಾಗಿದ್ದರು ಅನ್ನೋವಾಗಲೇ ಮತ್ತೊಂದು ಶಾಕ್ ಎದುರಾಗಿದೆ. ನಟಿ ಕೃಷಿ ತಾಪಂಡ ಮನೆಯಲ್ಲೇ ಉದ್ಯಮಿ *ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ಸೂ*ಸೈ*ಡ್

ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಖ್​​ ಸಾವಿಗೆ ಶರಣಾಗಿದ್ದು, ಕೆಲ ಮಾಹಿತಿಗಳು ಲಭ್ಯವಾಗಿದೆ. ಎಲಿಗೆಂಟ್ ಟೆರೆಸ್ಸ್ ಅಪಾರ್ಟ್​​ಮೆಂಟ್​ನ ನಾಲ್ಕನೇ ಮಹಡಿಯ 401 ರೂಮ್​​ನಲ್ಲಿ ವೈಶಾಕ್​ ನೇಣು ಬಿಗಿದುಕೊಂಡು *ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ ನಟಿ ಕೃಷಿ ತಾಪಂಡ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಆದ್ರೆ ಉದ್ಯಮಿ ವೈಶಾಕ್​ ಸಾವಿನ ಸುದ್ದಿ ಕೇಳಿ ನಟಿ ಕೃಷಿ ಕೂಡ ಆಘಾತಕ್ಕೆ ಒಳಗಾಗಿದ್ದಾರೆ. ನಟಿಗೂ ವೈಶಾಖ್ ಗೂ ಏನು ಸಂಬಂಧ? ಕೃಷಿ ತಾಪಂಡ ಮನೆಯಲ್ಲಿದ್ದ ವೈಶಾಕ್ ಯಾರು? ಎಂದು ನೋಡುವುದಾದರೆ, ಕೆಲ ದಿನಗಳ ಹಿಂದಷ್ಟೇ ನಟಿ ಕೃಷಿ ತಾಪಂಡ ವಿರುದ್ಧ ಉದ್ಯಮಿ ಹಾಗೂ ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಸಾಲು ಸಾಲು ಆರೋಪ ಮಾಡಿದ್ರು. ಈಕೆಯ ಮನೆಗೆ ನಿತ್ಯ ಓರ್ವ ಉದ್ಯಮಿ ಬರ್ತಾನೆ. ಅವನಿಂದ ನನ್ನ ಸಂಬಂಧ ಹಾಳಾಯ್ತು ಎಂದಿದ್ದರು. ಈ ಉದ್ಯಮಿಯೇ ವೈಶಾಖ್.

ಉದ್ಯಮಿ ವೈಶಾಖ್  15 ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ಈ ದಂಪತಿಗೆ 14 ವರ್ಷದ ಮಗ ಕೂಡ ಇದ್ದಾನೆ. ಎವಿಆರ್ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿರುವ ಆರೋಪ ವೈಶಾಕ್ ವಿರುದ್ಧ ಕೇಳಿಬಂದಿತ್ತು. ವೈಶಾಕ್ ವಿರುದ್ಧ ಹೆಚ್ ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೈಶಾಕ್​ನನ್ನ ಬಂಧನ ಮಾಡಿ ತನಿಖೆ ನಡೆಸಿದ್ದರು. ಇದಾದ ನಂತರ ವೈಶಾಕ್ ಮತ್ತು ಪತ್ನಿ ಮಾತನಾಡುತ್ತಿರಲಿಲ್ಲವಂತೆ. ಪತ್ನಿ ಜೊತೆ ಒಂದು ತಿಂಗಳಿಂದ ಮಾತಾಡಿಲ್ಲವೈಶಾಖ್. ಪತ್ನಿ ಜೊತೆ ಜಗಳ ಆದಾಗ ಉದ್ಯಮಿ ವೈಶಾಖ್​, ನಟಿ ಕೃಷಿ ತಾಪಂಡ ಮನೆಗೆ ಬಂದು ಹೋಗ್ತಿದ್ದನಂತೆ. ಅದೇ ರೀತಿ ನಿನ್ನೆ ರಾತ್ರಿ ಕೂಡ ಕೃಷಿ ತಪಂಡಾ ಮನೆಗೆ ಬಂದಿದ್ದ. ಬೆಳಗ್ಗೆ ಅಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ. ಸದ್ಯ ಆರ್ ಆರ್ ನಗರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇನ್ನು ಸಾಯುವ ಮೊದಲು ಉದ್ಯಮಿ ವೈಶಾಖ್ ಕೃಷಿಗೆ ಮೆಸೇಜ್ ಕೂಡಾ ಕಳಿಸಿದ್ದರಂತೆ. ತಾನು ಸಾಯೋದಾಗಿ ತಿಳಿಸಿದ್ದರು. ಆಗ ನಟಿ ಉದ್ಯಮಿಗೆ ಧೈರ್ಯ ಹೇಳಿದ್ದರಂತೆ. ಒಂದು ವಾರದಿಂದ ನಟಿಯ ಮನೆಯಲ್ಲೇ ವಾಸವಾಗಿದ್ದರು ವೈಶಾಖ್. ಇದೀಗ ವೈಶಾಕ್ ಸಾವಿಗೆ ಕಾರಣ ಏನು ಅನ್ನೋದು ಪೊಲೀಸ್ ತನಿಖೆಯಲ್ಲಿ ಬಯಲಾಗಬೇಕಿದೆ.

Sulekha

Leave a Reply

Your email address will not be published. Required fields are marked *