2.5 ಕೋಟಿ ಬಂಗಾರ ಎಂದು ದೇವರಿಗೇ ಮೋಸ – ಬರೀ 28 ಗ್ರಾಂ ಚಿನ್ನ ಕೊಟ್ಟು ಉದ್ಯಮಿ ಬಿಲ್ಡಪ್
ಕೋಟಿ ಕೋಟಿ ಬಂಗಾರ ಎಂದು ತಾಮ್ರಾದ ಲೇಪನದ ಒಡವೆ ಕೊಟ್ಟ ಉದ್ಯಮಿ

2.5 ಕೋಟಿ ಬಂಗಾರ ಎಂದು ದೇವರಿಗೇ ಮೋಸ – ಬರೀ 28 ಗ್ರಾಂ ಚಿನ್ನ ಕೊಟ್ಟು ಉದ್ಯಮಿ ಬಿಲ್ಡಪ್ಕೋಟಿ ಕೋಟಿ ಬಂಗಾರ ಎಂದು ತಾಮ್ರಾದ ಲೇಪನದ ಒಡವೆ ಕೊಟ್ಟ ಉದ್ಯಮಿ

ಅಂಜನಾದ್ರಿಯ ಆಂಜನೇಯ ದೇವಸ್ಧಾನಕ್ಕೆ ಎರಡೂವರೆ ಕೋಟಿ ಬಂಗಾರ ಹಾಕಿರುವುದಾಗಿ ಆ ಉದ್ಯಮಿ ಹೇಳಿಕೊಂಡಿದ್ದರು. ಅದೂ ಕೂಡಾ ಶಾಸಕ ಜನಾರ್ದನ ರೆಡ್ಡಿ ಜೊತೆ ಬಂದು ದೇವಸ್ಥಾನಕ್ಕೆ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದರು. ಇದೀಗ ದೇವರಿಗೇ ಆ ಉದ್ಯಮಿ ದೇಣಿಗೆ ಹೆಸರಲ್ಲಿ ಮೋಸ ಮಾಡಿರುವುದು ಬಯಲಾಗಿದೆ.

ಇದನ್ನೂ ಓದಿ:ತಮ್ಮ ಪ್ರೀತಿಸಿ ಓಡಿಹೋಗಿದ್ದಕ್ಕೆ ಅಣ್ಣನಿಗೆ ಶಿಕ್ಷೆ! – ಅರ್ಚಕನ ಕಿಡ್ನ್ಯಾಪ್‌ ಮಾಡಿ ಥಳಿಸಿದ ಯುವತಿ ಮನೆಯವರು!

ಅಂಜನಾದ್ರಿಯ ಆಂಜನೇಯನಿಗೆ ಕೆಲ ದಿನಗಳ ಹಿಂದಷ್ಟೇ ಹೈದರಾಬಾದ್​ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಭಾರೀ ಚಿನ್ನದ ದೇಣಿಗೆ ಕೊಟ್ಟು ಸುದ್ದಿಯಾಗಿದ್ದರು. ಶಾಸಕ ಜನಾರ್ದನ ರೆಡ್ಡಿ ಕೂಡ ಉದ್ಯಮಿ ಜೊತೆ ಆಭರಣಗಳನ್ನ ದೇವರಿಗೆ ಸಮರ್ಪಿಸಿದ್ದರು. ಆದರೆ,  ದೇವಸ್ಥಾನಕ್ಕೆ  ಉದ್ಯಮಿ ಮಹೇಶ್ ರೆಡ್ಡಿ ನೀಡಿದ್ದ 2.50 ಕೋಟಿ ಮೌಲ್ಯದ ಆಭರಣಗಳ ಅಸಲಿಯತ್ತು ಈಗ ಬಯಲಾಗಿದೆ.

ಕಳೆದ ಮೇ 8ರಂದು ಎಎಂಆರ್  ಗ್ರೂಪ್ ಅಧ್ಯಕ್ಷ ಎ. ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಜೊತೆ ದೇವಸ್ಥಾನಕ್ಕೆ ಬಂಗಾರದ ಪ್ರಭಾವಳಿ, ಕಿರೀಟ ಹಾಗೂ ಗದೆಯನ್ನು ಅರ್ಪಿಸಿದ್ದರು. ಈ ಆಭರಣಗಳ ಮೌಲ್ಯ ಸುಮಾರು 2.50 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಇದೀಗ ಮಹೇಶ ರೆಡ್ಡಿ ನೀಡಿದ್ದ 2.50 ಕೋಟಿ ಮೌಲ್ಯದ ಆಭರಣಗಳು ವಿವಾದಕ್ಕೀಡಾಗಿವೆ. ತಪಾಸಣೆ ವೇಳೆ ಇವು ತಾಮ್ರದ ಮೇಲೆ ಚಿನ್ನದ ಲೇಪನ ಮಾಡಿರುವುದು ಪತ್ತೆಯಾಗಿದ್ದು, ಕೇವಲ 28 ಗ್ರಾಂ ಬಂಗಾರ ಇರುವುದು ದೃಢಪಟ್ಟಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಉದ್ಯಮಿಗೆ ಅಧಿಕೃತ ಬಿಲ್ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದೆ. ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ನೀಡಿದ ಈ ಚಿನ್ನದ ಕಾಣಿಕೆ ತಾಮ್ರದ ಲೇಪನ ಅನ್ನೋದು ಬಯಲಾಗಿದೆ. ಆಭರಣಗಳ ಖಚಿತತೆ ಮತ್ತು ಮೌಲ್ಯದ ಬಗ್ಗೆ ಬಿಲ್ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಕಳೆದ ಮೇ 8ರಂದು ಎಎಂಆರ್ (AMR) ಗ್ರೂಪ್ ಅಧ್ಯಕ್ಷ ಎ. ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ದಂಪತಿಗಳ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಬಂಗಾರದ ಪ್ರಭಾವಳಿ, ಕಿರೀಟ ಹಾಗೂ ಗದೆಯನ್ನು ಅರ್ಪಿಸಿದ್ದರು. ತಿರುಪತಿ ಮಾದರಿಯಲ್ಲಿ ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುವ ಆಶಯದೊಂದಿಗೆ ಈ ಬೃಹತ್ ದೇಣಿಗೆ ನೀಡಲಾಗಿದೆ ಎಂದು ಅಂದು ಸಂಭ್ರಮಿಸಲಾಗಿತ್ತು. ತಪಾಸಣೆ ವೇಳೆ ಬಯಲಾದ ಸತ್ಯ ಉದ್ಯಮಿ ಮಹೇಶ ರೆಡ್ಡಿ ಅವರ ಮನವಿಯ ಮೇರೆಗೆ ಎರಡು ದಿನಗಳ ಕಾಲ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು. ಆದರೆ, ಇವುಗಳನ್ನು ಅಧಿಕೃತವಾಗಿ ದೇವಸ್ಥಾನದ ಖಜಾನೆಗೆ ಜಮೆ ಮಾಡಿಕೊಳ್ಳುವ ಮೊದಲು ಜಿಲ್ಲಾಡಳಿತವು ಪರಿಶೀಲನೆ ನಡೆಸಿದಾಗ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ. 2.50 ಕೋಟಿ ಮೌಲ್ಯದ ಚಿನ್ನ ಎಂದು ಹೇಳಲಾದ ಆಭರಣಗಳಲ್ಲಿ ಕೇವಲ 28 ಗ್ರಾಂ ಬಂಗಾರ ಮಾತ್ರ ಪತ್ತೆಯಾಗಿದೆ.

Sulekha

Leave a Reply

Your email address will not be published. Required fields are marked *