ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಹೊಸ ಟೋಲ್‌ಗೇಟ್ ಎಫೆಕ್ಟ್ – ಜಾಸ್ತಿಯಾಯ್ತು ಬಸ್ ರೇಟ್..!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಹೊಸ ಟೋಲ್‌ಗೇಟ್ ಎಫೆಕ್ಟ್ –   ಜಾಸ್ತಿಯಾಯ್ತು ಬಸ್ ರೇಟ್..!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಎರಡನೇ ಟೋಲ್ ಜಾರಿಯಾಗಿರುವ ಅಸಮಾಧಾನ ಇರುವಾಗಲೇ ಈಗ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಮಂಗಳವಾರದಿಂದ ಈ ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್‌ಟಿಸಿ ಪ್ರಯಾಣ ದರವೂ ಏರಿಕೆಯಾಗಿದೆ. ಯಾವಾಗ ಮತ್ತೊಂದು ಟೋಲ್‌ಗೇಟ್‌ನಲ್ಲಿ ದುಬಾರಿ ಟೋಲ್ ಕಟ್ಟಬೇಕಾಯ್ತೋ ಅದರ ಹೊರೆ ಕೂಡಾ ಈಗ ಪ್ರಯಾಣಿಕರೇ ಹೊರಬೇಕಿದೆ. ದಿಢೀರ್ ಅಂತಾ ಬಸ್ ರೇಟ್ ಜಾಸ್ತಿಯಾಗಿದ್ದು, ಅಭಿವೃದ್ಧಿ ಹೆಸರಲ್ಲಿ ಪ್ರಯಾಣಿಕರಿಗೆ ಹೊರೆ ತಪ್ಪುತ್ತಿಲ್ಲ. ಇನ್ನು ಸದನದಲ್ಲೂ ಕೂಡಾ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸ್ಪೀಡ್‌ಗೆ ಬ್ರೇಕ್ – ಗಂಟೆಗೆ 100 ಕಿ.ಮೀ. ವೇಗದ ಮಿತಿ ನಿಗದಿ..!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಜುಲೈ 1 ರಿಂದ ಆರಂಭಗೊಂಡಿದೆ. ಇಲ್ಲಿನ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 525 ರೂ. ಟೋಲ್ ಸಂಗ್ರಹಿಸಲಾಗುತ್ತಿದೆ. ಇದನ್ನ ಸರಿದೂಗಿಸಲು ಕೆಎಸ್ಆರ್‌ಟಿಸಿ ಈ ಮಾರ್ಗದಲ್ಲಿ ಸಾಮಾನ್ಯ ಸಾರಿಗೆಗೆ 15 ರೂ., ರಾಜಹಂಸಕ್ಕೆ 20 ರೂ., ವೋಲ್ವೋ ಮತ್ತು ಎಲೆಕ್ಟ್ರಿಕ್ ಬಸ್‌ಗಳ ಟಿಕೆಟ್ ದರವನ್ನು 30 ರೂ.ಗಳಷ್ಟು ಹೆಚ್ಚಿಸಿದೆ. ಈ ಹಿಂದೆ ಸಾಮಾನ್ಯ ಸಾರಿಗೆಯಲ್ಲಿ ಬೆಂಗಳೂರಿನಿಂದ ಮೈಸೂರಿಗೆ 170 ರೂ. ಇತ್ತು, ಈಗ 185 ರೂ. ಆಗಿದೆ. ರಾಜಹಂಸ 230 ರಿಂದ 250 ರೂ.ಗೆ ಏರಿಕೆಯಾಗಿದೆ. ವೋಲ್ವೋ ಅಥವಾ ಇವಿ ಬಸ್ಗಳಲ್ಲಿ 330 ರಿಂದ 360 ರೂ.ಗೆ ಟಿಕೆಟ್ ದರ ಹೆಚ್ಚಳ ಆಗಿದೆ.

ಇನ್ನು, ಸದನದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ನಡೆಯುತ್ತಿರುವ ಅಪಘಾತಗಳ ಬಗ್ಗೆಯೂ ಪ್ರಸ್ತಾಪ ಆಗಿದೆ. ಜೆಡಿಎಸ್ ಶಾಸಕ ಮರಿತಿಬ್ಬೇಗೌಡ, ಈ ಕುರಿತಾಗಿ ಪ್ರಶ್ನಿಸಿದ್ದು ಲೋಕೋಪಯೋಗಿ ಖಾತೆ ಸಚಿವ ಸತಿಶ್ ಜಾರಕಿಹೊಳಿ ಉತ್ತರಿಸಿದ್ದಾರೆ. ಜೆಡಿಎಸ್‌ನ ಮರಿತಿಬ್ಬೇಗೌಡ, ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಇಲಾಲಿಯವರೆಗೂ 512 ಅಪಘಾತವಾಗಿದೆ. 123 ಮರಣ ಆಗಿದೆ. 585 ಮಂದಿ ಗಾಯಗೊಂಡಿದ್ದಾರೆ. ಇದು ರಾಷ್ಟ್ರೀಯ ಹೆದ್ದಾರಿಯಲ್ಲ, ಸಾವಿನ ಹೆದ್ದಾರಿಯಾಗಿದೆ. ಇಲ್ಲಿ ಯಾವುದೇ ಸುರಕ್ಷಾ ಕ್ರಮ ಇಲ್ಲ. ಈ ಕುರಿತಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡಬೇಕು ಎಂದು ಹೇಳಿದ್ದಾರೆ. ಸದನದಲ್ಲಿ ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಖಂಡಿತವಾಗಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವರಿಕೆ ಮಾಡ್ತೀವಿ. ಈಗಾಗಲೇ ನಮ್ಮ ಪೋಲಿಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಮಾತನಾಡ್ತೇವೆ. ಹೆದ್ದಾರಿಯಲ್ಲಿ ಸಮಸ್ಯೆ ಇರೊದು ಸತ್ಯ. ಆ ಸಮಸ್ಯೆಗಳ ಪ್ರಾಧಿಕಾರಕ್ಕೆ ತಿಳಿಸುತ್ತೇವೆ” ಎಂದಿದ್ದಾರೆ.

suddiyaana