ಬರ್ಗರ್ ಕಂಪನಿಯಿಂದ ಬಂಪರ್ ಆಫರ್! – ಈ ಸ್ಪರ್ಧೆ ಗೆದ್ದರೆ 8 ಕೋಟಿ ರೂ. ಬಹುಮಾನ!
ನೀವು ಬರ್ಗರ್ ಪ್ರಿಯರಾಗಿದ್ರೆ ನಿಮಗೊಂದು ಬೆಸ್ಟ್ ಆಫರ್ ಇದೆ. ನೀವು ಈ ಕಾಂಪಿಟೀಷನ್ನಲ್ಲಿ ಭಾಗವಹಿಸಿದ್ರೆ ಬರೋಬ್ಬರಿ 8 ಕೋಟಿ ರೂಪಾಯಿ ಗೆಲ್ಲಬಹುದು.. ಅಷ್ಟಕ್ಕೂ ಆ ಕಾಂಪಿಟೇಷನ್ ಏನು? ಇದರಲ್ಲಿ ಭಾಗವಹಿಸೋದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ನೀವೇನಾದ್ರೂ ಬರ್ಗರ್ ಪ್ರಿಯರಾಗಿದ್ರೆ ನಿಮಗೊಂದು ಸುವರ್ಣ ಅವಕಾಶ ಕಾಯುತ್ತಿದೆ. ಈ ಆಫರ್ ಕೋಟಿ ರೂಪಾಯಿಗಳನ್ನು ಗೆಲ್ಲುವ ಅವಕಾಶವನ್ನು ನಿಮಗೆ ನೀಡುತ್ತದೆ. ಈ ಬಹುಮಾನ ಕೊಡ್ತಿರೋದು ಫಾಸ್ಟ್ ಫುಡ್ ಕಂಪನಿ – ಬರ್ಗರ್ ಕಿಂಗ್.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಸಿಗುತ್ತೆ ಉಚಿತ ಹೊಲಿಗೆ ಯಂತ್ರ! – ಮಹಿಳೆಯರು, ಪುರುಷರಿಗೂ ಅವಕಾಶ.. ಅರ್ಜಿ ಸಲ್ಲಿಕೆ ಹೇಗೆ?
ವರದಿಯ ಪ್ರಕಾರ, ಫ್ಲೋರಿಡಾದ ಅತ್ಯುತ್ತಮ ಫಾಸ್ಟ್ ಫುಡ್ ಚೈನ್, ಬರ್ಗರ್ ಕಿಂಗ್ ತನ್ನ ಅಭಿಮಾನಿಗಳಿಗೆ ಒಟ್ಟು 1 ಮಿಲಿಯನ್ ಯುಎಸ್ ಡಾಲರ್ ಗೆಲ್ಲುವ ಬಹುಮಾನವನ್ನು ಘೋಷಿಸಿದೆ. ಇದಕ್ಕಾಗಿ, ಬರ್ಗರ್ ಕಿಂಗ್ ಕಂಪನಿಯ Whopper (ವೊಪ್ಪರ್) ಸ್ಯಾಂಡ್ ವಿಚ್ ಅನ್ನು ತಮ್ಮದೇ ಆದ ರೀತಿಯಲ್ಲಿ ವಿನ್ಯಾಸಗೊಳಿಸಬೇಕು ಅಂತಾ ಸವಾಲು ಹಾಕಿದೆ. ಬರ್ಗರ್ ಕಿಂಗ್ ನ ಅತಿಥಿಗಳು ಇಷ್ಟಪಡುವ ಸ್ಯಾಂಡ್ ವಿಚ್ ಹೇಗಿರಬೇಕು ಅನ್ನೋದನ್ನು ಅತಿಥಿಗಳಿಂದಲೇ ಕೇಳಿ ತಿಳಿದುಕೊಳ್ಳುವುದು ಇದರ ಉದ್ದೇಶ. ಅಂದರೆ ಗ್ರಾಹಕರು ಮಚ್ಚುವಂತಹ ಬರ್ಗರ್ ತಯಾರಿಸುವುದೇ ಇಲ್ಲಿರುವ ಚಾಲೆಂಜ್.
ಯಾವ ವ್ಯಕ್ತಿ ಡಿಸೈನ್ ಮಾಡಿದ ಬರ್ಗರ್ ಗೆ ಹೆಚ್ಚು ವೋಟು ಬರುತ್ತದೆಯೋ ಅವರನ್ನು ಸ್ಪರ್ಧೆಯ ವಿನ್ನರ್ ಎಂದು ಘೋಷಿಸಲಾಗುತ್ತದೆ. ವಿಜೇತರಿಗೆ 10 ಲಕ್ಷ ಯುಎಸ್ ಡಾಲರ್ ಅಂದರೆ ಬರೋಬ್ಬರಿ 8 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಬಹುಮಾನವನ್ನು ನೀಡಲಾಗುತ್ತದೆ. ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ಹಾಗೂ ಷರತ್ತುಗಳನ್ನು ಬರ್ಗರ್ ಕಿಂಗ್ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ರಾಯಲ್ ಪರ್ಕ್ಸ್ ಅಕೌಂಟ್ ಹೊಂದಿರಬೇಕು. ಅರ್ಜಿ ಸಲ್ಲಿಸಲು ಮಾರ್ಚ್ 17 ಕೊನೆಯ ದಿನವಾಗಿದೆ. ಮೊದಲಿಗೆ, ಬರ್ಗರ್ ನ ಚಿತ್ರವನ್ನು ಎಐ ಮೂಲಕ ತಯಾರಿಸಲಾಗುತ್ತದೆ, ಇದರಿಂದ ನಿಮ್ಮ ಹೆಸರು ಎಂಟ್ರಿಯಾಗುತ್ತದೆ.