ಇಂಗ್ಲೆಂಡ್ ಸರಣಿಗೆ ರೆಸ್ಟ್.. – ಚಾಂಪಿಯನ್ಸ್ ಟ್ರೋಫಿಗೆ ಇಳಿಸುತ್ತಾ ಬಿಸಿಸಿಐ?
ಭಾರತ ತಂಡದ ಯಶಸ್ಸಿನಲ್ಲಿ ಬುಮ್ರಾನೇ ಮೇನ್ ಪಿಲ್ಲರ್. ಹೀಗಾಗಿ ಬುಮ್ರಾರನ್ನ ಜೋಪಾನ ಮಾಡಬೇಕಾದ ಅಗತ್ಯತೆ ಅನಿವಾರ್ಯತೆ ಬಿಸಿಸಿಐಗಿದೆ. ಹೀಗಾಗಿ ಇಂಗ್ಲೆಂಡ್ ಸರಣಿಗೆ ರೆಸ್ಟ್ ಕೊಟ್ಟು ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆಗೆ ಸಜ್ಜುಗೊಳಿಸಲು ಬಿಸಿಸಿಐ, ವೈದ್ಯಕೀಯ ತಂಡವು ಪ್ರಯತ್ನ ಪಡ್ತಿದೆ. ಬಟ್ ಜಸ್ಪ್ರೀತ್ ಬುಮ್ರಾ ಅವರ ಬೆನ್ನು ನೋವಿನ ತೀವ್ರತೆ ಎಷ್ಟಿದೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ.
ಇದನ್ನೂ ಓದಿ: BBK ಯಲ್ಲಿ Tom & Jerry.. ಚೈತ್ರಾ ಆಟ.. ರಜತ್ ವಿಲ ವಿಲ!! – “ಮಾತಿನ ಮಲ್ಲಿ”ಗೆ ಚುಚ್ಚಿದ್ರೆ ನಾಟುತ್ತಾ?
ಬಿಸಿಸಿಐ ಮೆಡಿಕಲ್ ಟೀಂ ಅವರ ಆರೋಗ್ಯದ ಕಡೆಗೆ ತೀವ್ರ ನಿಗಾ ಇರಿಸಿದೆ. ಬೆನ್ನು ನೋವಿನ ತೀವ್ರತೆ ಗ್ರೇಡ್ 1 ವಿಭಾಗದಲ್ಲಿದ್ದರೆ 3 ವಾರಗಳ ವಿಶ್ರಾಂತಿ ಸಾಕಾಗುತ್ತದೆ. ಒಂದು ವೇಳೆ ಗ್ರೇಡ್ 2 ವಿಭಾಗದಲ್ಲಿದ್ದರೆ, ಆಟಕ್ಕೆ ಮರಳುವ ಮೊದಲು ಅವರಿಗೆ ಕನಿಷ್ಠ 6 ವಾರಗಳ ರೆಸ್ಟ್ ಅಗತ್ಯವಿದೆ. ಒಂದು ವೇಳೆ ಗ್ರೇಡ್ 3ರಲ್ಲಿ ಇದ್ದರೆ ಕನಿಷ್ಠ 3 ತಿಂಗಳ ವಿಶ್ರಾಂತಿಯ ಅಗತ್ಯ ಇರುತ್ತದೆ. ಹೀಗಾದ್ರೆ ಬುಮ್ರಾಗೆ ಐಸಿಸಿ ಚಾಂಪಿಯನ್ ಟ್ರೋಫಿ ಆಡಲು ಸಾಧ್ಯವಾಗುವುದಿಲ್ಲ. ನೋವಿನ ತೀವ್ರತೆಯ ಪ್ರಮಾಣ ಅಳೆದ ನಂತರವೇ ಇಂಗ್ಲೆಂಡ್ ವಿರುದ್ಧ ಸರಣಿಗೆ ಬರ್ತಾರಾ ಇಲ್ವಾ ಅನ್ನೋದು ಗೊತ್ತಾಗುತ್ತೆ.
ಇನ್ನು ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿದೆ. ವಿಶೇಷವಾಗಿ ಈ ಟೂರ್ನಿ ಹೈಬ್ರೀಡ್ ಮಾದರಿಯಲ್ಲಿ ನಡೆಯಲಿದೆ. 2014ರಲ್ಲಿ ಭಾರತ ಕೊನೆಯದಾಗಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಹೀಗಾಗಿ ಈ ಸಲ ಭಾರತ ಬೆಸ್ಟ್ ಪರ್ಫಾಮೆನ್ಸ್ ನೀಡ್ಬೇಕು ಅಂದ್ರೆ ಬುಮ್ರಾ ಉಪಸ್ಥಿತಿ ಇರಲೇಬೇಕು. ಮತ್ತೊಂದೆಡೆ ಮೊಹಮ್ಮದ್ ಶಮಿ ಕೂಡ ವಿಜಯ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡ್ತಿದ್ದು ಟೀಂ ಇಂಡಿಯಾಗೆ ಬಿಸಿಸಿಐ ಸೆಲೆಕ್ಟ್ ಮಾಡುತ್ತಾ ಇಲ್ವಾ ಅನ್ನೋ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹಾಗೇನಾದ್ರೂ ಬುಮ್ರಾ ರಿಕವರಿಯಾಗಿ ಶಮಿ ರೀ ಎಂಟ್ರಿ ಕೊಟ್ರೆ ಭಾರತಕ್ಕೆ ಆನೆಬಲ ಸಿಗೋದಂತೂ ಗ್ಯಾರಂಟಿ.