ಚಾಂಪಿಯನ್ಸ್ ಟ್ರೋಫಿಗಿಲ್ಲ ಬುಮ್ರಾ? – ಬೆನ್ನು ನೋವು.. ಎಷ್ಟು ವಾರಗಳ ರೆಸ್ಟ್?

ಚಾಂಪಿಯನ್ಸ್ ಟ್ರೋಫಿಗಿಲ್ಲ ಬುಮ್ರಾ? – ಬೆನ್ನು ನೋವು.. ಎಷ್ಟು ವಾರಗಳ ರೆಸ್ಟ್?

ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಮ್ಯಾಚ್ ಟರ್ನಿಂಗ್ ಪ್ಲೇಯರ್ ಅಂತಾ ಯಾರಾದ್ರೂ ಇದ್ರೆ ಅದು ಒನ್ ಌಂಡ್ ಓನ್ಲಿ ಜಸ್ಪ್ರೀತ್ ಬುಮ್ರಾ ಮಾತ್ರ. ಪ್ರತೀ ಪಂದ್ಯದಲ್ಲೂ ಅವ್ರ ಮೇಲಷ್ಟೇ ನಂಬಿಕೆ ಇಡ್ಬೋದು. ಬಟ್ ಆಸಿಸ್ ಸರಣಿಯ ಕೊನೇ ಪಂದ್ಯದಲ್ಲಿ ಗಾಯಗೊಂಡಿದ್ದ ಬುಮ್ರಾ ಇದೀಗ ಇಂಗ್ಲೆಂಡ್ ಸರಣಿಯಿಂದ ಹೊರಬೀಳ್ತಿದ್ದಾರೆ. ಬಟ್ ಚಾಂಪಿಯನ್ಸ್ ಟ್ರೋಫಿಗೂ ಕಮ್ ಬ್ಯಾಕ್ ಮಾಡ್ತಾರೋ ಇಲ್ವೋ ಅನ್ನೋ ಆತಂಕ ಶುರುವಾಗಿದೆ. ಬುಮ್ರಾಗೆ ಏನಾಗಿದೆ? ಚೇತರಿಸಿಕೊಳ್ಳೋಕೆ ಇನ್ನೆಷ್ಟು ದಿನ ಬೇಕು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: BBK ಯಲ್ಲಿ Tom & Jerry.. ಚೈತ್ರಾ ಆಟ.. ರಜತ್‌ ವಿಲ ವಿಲ!! – “ಮಾತಿನ ಮಲ್ಲಿ”ಗೆ ಚುಚ್ಚಿದ್ರೆ ನಾಟುತ್ತಾ?

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಸೋತಿರೋ ಭಾರತ ತಂಡ ನೆಕ್ಸ್​ಟ್ ಇಂಗ್ಲೆಂಡ್ ವಿರುದ್ಧದ ಸಿರೀಸ್​ಗೆ ರೆಡಿ ಆಗ್ಬೇಕಿದೆ. ಇದೇ ತಿಂಗಳಲ್ಲೇ ಆರಂಭವಾಗಲಿರೋ ಟಿ-20 ಹಾಗೇ ಏಕದಿನ ಸರಣಿಗಳಿಗೆ ಇನ್ನಷ್ಟೇ ಟೀಂ ಅನೌನ್ಸ್ ಮಾಡ್ಬೇಕಿದೆ. 5 ಟಿ20 ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಫೆಬ್ರವರಿ 6, ನಾಗ್ಪುರದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಫೆಬ್ರವರಿ 9ರಂದು ಕಟಕ್‌ನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಫೆಬ್ರವರಿ 12ರಂದು ಅಹಮದಾಬಾದ್‌ನಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದೆ. ಬಟ್ ಬೌಲಿಂಗ್ ಬ್ರಹ್ಮಾಸ್ತ್ರವಾಗಿರುವ ಜಸ್ಪ್ರೀತ್ ಬುಮ್ರಾ ಫಿಟ್​ನೆಸ್ ಸಮಸ್ಯೆ ಕಾಡ್ತಿದ್ದು, ಅವ್ರನ್ನ ಸೆಲೆಕ್ಟ್ ಮಾಡೋದು ಡೌಟ್ ಇದೆ.

ಜನವರಿ 22ರಿಂದ ಇಂಗ್ಲೆಂಡ್ ವಿರುದ್ಧ ಸರಣಿ ಆರಂಭ!

ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸಿಸ್ ತಂಡ ಗೆದ್ದು ಬೀಗಿತ್ತು. ಬಟ್ ಕೊನೇ ಪಂದ್ಯದವರೆಗೂ ಕಾಂಗರೂಪಡೆಯನ್ನ ಕಾಡಿದ್ದ ಜಸ್ಪ್ರೀತ್ ಬುಮ್ರಾ 32 ವಿಕೆಟ್​ಗಳನ್ನ ಬೇಟೆಯಾಡಿ ಹೈಯೆಸ್ಟ್ ವಿಕೆಟ್ ಟೇಕರ್ ಎನಿಸಿಕೊಂಡಿದ್ರು. ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ರು. ಇದೀಗ ಜನವರಿ 22ರಂದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸರಣಿ ಆಡ್ಬೇಕಿದೆ. ಭಾರತದಲ್ಲೇ ನಡೆಯಲಿರುವ ಸರಣಿಯಲ್ಲಿ  ಪ್ರವಾಸಿ ತಂಡವು ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಬಟ್ ಈ ಸರಣಿಗಳಿಗೆ ಬುಮ್ರಾರನ್ನ ಸೆಲೆಕ್ಟ್ ಮಾಡೋದು ಕಷ್ಟ ಇದೆ.

ಆಸ್ಟ್ರೇಲಿಯಾ ವಿರುದ್ಧ 150ಕ್ಕೂ ಹೆಚ್ಚು ಓವರ್​ ಗಳ ಬೌಲಿಂಗ್!

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಬಿರುಗಾಳಿ ಎಬ್ಬಿಸಿದ್ರು. ಸರಣಿಯಲ್ಲಿ 150ಕ್ಕೂ ಹೆಚ್ಚು ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಸತತವಾಗಿ ಚೆಂಡುಗಳನ್ನ ಎಸೆದ ಕಾರಣ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅಂತಿಮ ಟೆಸ್ಟ್‌ನ ಪಂದ್ಯದ ಮಧ್ಯದಲ್ಲೇ ಮೈದಾನ ತೊರೆದಿದ್ರು. ಹಾಗೇ ಕೊನೆಯ ಇನಿಂಗ್ಸ್‌ನಲ್ಲಿ ಕಣಕ್ಕಿಳಿದಿರಲಿಲ್ಲ. ಹೆಚ್ಚಿನ ಬೌಲಿಂಗ್ ನಿಂದಾಗಿ ಬೆನ್ನು ನೋವಿಗೆ ಕಾರಣವಾಗಿತ್ತು. 30 ವರ್ಷದ ವಿಶ್ವದ ನಂಬರ್ ಒನ್ ವೇಗಿ ನಿರಂತರ ಸ್ಪೆಲ್ ಗಳನ್ನು ಅವರು ಹಾಕಿದ್ದರು. ಒಂದು ಟೈಮಲ್ಲಂತೂ ಬುಮ್ರಾ ಅವರು ನಾಯಕ ರೋಹಿತ್ ಶರ್ಮಾ ಅವರಿಗೆ ಬೌಲಿಂಗ್ ಮಾಡಲು ಆಯಾಸವಾಗುತ್ತಿದೆ ಎಂದು ಸಹ ಹೇಳಿಕೊಂಡಿದ್ರು. ಆದ್​ರೆ ರೋಹಿತ್ ಬಳಿ ಬೇರೆ ಆಯ್ಕೆ ಇಲ್ಲದೆ ಬುಮ್ರಾರನ್ನ ಒಪ್ಪಿಸಿ ಬೌಲಿಂಗ್ ಗೆ ಇಳಿಸಿದ್ದರು.

ಬುಮ್ರಾ ಬ್ರಹ್ಮಾಸ್ತ್ರಕ್ಕೆ ನಡುಗಿದ್ದ ಆಸಿಸ್ ಪ್ಲೇಯರ್ಸ್!

ಬ್ಯಾಟಿಂಗ್ ನಲ್ಲಿ ಆಸಿಸ್ ಪಡೆ ಅದ್ಬುತ ಪ್ರದರ್ಶನ ನೀಡಿದ್ರೂ ಬುಮ್ರಾ ಅವರ ಎಸೆತಗಳು ಅವ್ರಿಗೆ ತಲೆನೋವು ತಂದಿಟ್ಟಿತ್ತು. ಯಾಕಂದ್ರೆ ಬುಮ್ರಾ ಹೊರತುಪಡಿಸಿದರೆ ಬೇರೆ ಬೌಲರ್ ಗಳು ಆಸ್ಚ್ರೇಲಿಯಾ ತಂಡದ ವಿರುದ್ಧ ಪರಿಣಾಮಕಾರಿಯಾಗಲಿಲ್ಲ. ಈ ಸರಣಿಯಲ್ಲಿ ಬುಮ್ರಾ ಮೂರು ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದರ ಜೊತೆಗೆ 76 ರನ್‌ಗಳಿಗೆ 6 ವಿಕೆಟ್‌ ಕಬಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದಲ್ಲದೇ ಬುಮ್ರಾ 2 ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕತ್ವವನ್ನೂ ವಹಿಸಿದ್ದರು. ಇದೇ ಕಾರಣಕ್ಕೆ ಸಿಡ್ನಿ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ವೇಳೆ ಬುಮ್ರಾ ಬೌಲಿಂಗ್ ಗೆ ಇಳಿಯದ್ದು ಕಮಿನ್ಸ್ ಬಳಗಕ್ಕೆ ಪಂದ್ಯ ಗೆಲ್ಲಲು ಪ್ಲಸ್ ಆಗಿತ್ತು. ಇದನ್ನು ಸ್ವತಃ ಆಸ್ಚ್ರೇಲಿಯಾದ ಆಟಗಾರರೇ ಒಪ್ಪಿಕೊಂಡಿದ್ದಾರೆ.

Shwetha M

Leave a Reply

Your email address will not be published. Required fields are marked *