ಬುಮ್ರಾ ಈಸ್ ಬ್ಯಾಕ್! – ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡ ಸೇರಲಿರುವ ಟೀಮ್ ಇಂಡಿಯಾ ವೇಗಿ

ಬುಮ್ರಾ ಈಸ್ ಬ್ಯಾಕ್! – ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡ ಸೇರಲಿರುವ ಟೀಮ್ ಇಂಡಿಯಾ ವೇಗಿ

ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ವಿರುದ್ಧ ಟಿ20 ಸರಣಿಯೊಂದಿಗೆ ಮಂಗಳವಾರದಿಂದ ಪಂದ್ಯ ಆರಂಭವಾಗಲಿದೆ. ಇದಾದ ನಂತರ ಶುರುವಾಗಲಿರುವ ಏಕದಿನ ಸರಣಿಗೆ ವೇಗಿ ಜಸ್‌ಪ್ರೀತ್ ಬುಮ್ರಾ ಸೇರಿಕೊಳ್ಳಲಿದ್ದಾರೆ. ಗಾಯಾಳುವಾಗಿ ಟೀಂ ಇಂಡಿಯಾದಿಂದ (Team India) ಹೊರಗುಳಿದಿದ್ದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಈಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಬಿಸಿಸಿಐ (BCCI) ಪ್ರಕಟಿಸಿರುವ ತಂಡದಲ್ಲಿ ಬುಮ್ರಾ ಹೆಸರು ಸೇರಿದೆ.

ಇದನ್ನು ಓದಿ:  ‘ರಿಷಬ್ ಪಂತ್ ಆರೋಗ್ಯ ಸ್ಥಿರವಾಗಿದೆ. ಭಯಪಡುವ ಅಗತ್ಯವಿಲ್ಲ’ – ಬಿಸಿಸಿಐ

2022ರ ಸೆಪ್ಟೆಂಬರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಬಳಿಕ ತಂಡದಿಂದ ಹೊರಗುಳಿದಿದ್ದ ಬುಮ್ರಾ ಇದೀಗ ಗಾಯದಿಂದ ಚೇತರಿಕೆ ಕಂಡಿದ್ದಾರೆ. ಫಿಟ್ ಆಗಿರುವ ಬುಮ್ರಾ ಏಕದಿನ ತಂಡಕ್ಕೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಮೊದಲು ಪ್ರಕಟಿಸಿದ ತಂಡದಲ್ಲಿ ಬುಮ್ರಾ ಆಯ್ಕೆ ಆಗಿರಲಿಲ್ಲ. ಆ ಬಳಿಕ ಇದೀಗ ಬದಲಾವಣೆಯೊಂದಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ತಂಡದಲ್ಲಿ ಬುಮ್ರಾ ಅವರ ಹೆಸರನ್ನು ಪ್ರಕಟಿಸಿದೆ. ಗಾಯದಿಂದಾಗಿ 2022ರ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಲ್ಲೂ ಬುಮ್ರಾ ಆಡಿರಲಿಲ್ಲ. ಇದೀಗ ಮುಂದಿನ ಏಕದಿನ ವಿಶ್ವಕಪ್ ದೃಷ್ಟಿಯಿಂದ ಬುಮ್ರಾರನ್ನು ಮತ್ತೆ ಆಯ್ಕೆ ಮಾಡಲಾಗಿದ್ದು, ಬುಮ್ರಾ ಪುನರಾಗಮನದಿಂದ ತಂಡದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ. ಟೀಮ್ ಇಂಡಿಯಾ, ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜ.3 ರಿಂದ ಟಿ20 ಸರಣಿ ಆರಂಭಗೊಳ್ಳಲಿದೆ. ಜ.10 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ.

suddiyaana