5 ಪಂದ್ಯದಲ್ಲಿ ಸಿಕ್ಕಿಲ್ಲ ಒಂದೇ ಒಂದು ವಿಕೆಟ್ – ಬುಮ್ರಾ ವೀಕ್ನೆಸ್ ಬ್ಯಾಟರ್‌ಗಳಿಗೆ ಗೊತ್ತಾಯ್ತಾ?
IPLನಲ್ಲಿ ವಿಶ್ವದ ನಂ1 ಬೌಲರ್ ಫೆಲ್ಯೂರ್!?

ಐಪಿಎಲ್ 2026 ರಲ್ಲಿ ಮುಂಬೈ ಇಂಡಿಯನ್ಸ್ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆಯೋ, ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರ ಫಾರ್ಮ್ ಕೂಡ ಅಷ್ಟೇ ಕೆಟ್ಟದಾಗಿದೆ. ಎಲ್ಲಾ ಮೂರು ಮಾದರಿಯಲ್ಲೂ ವಿಶ್ವದ ನಂ1 ಬೌಲರ್ ಆಗಿರೋ ಬುಮ್ರಾ ಐಪಿಎಲ್‌ನಲ್ಲಿ ಒಂದೇ ಒಂದು ವಿಕೆಟ್ ತೆಗೆಯೋಕೆ ಹೆಣಗಾಡುತ್ತಿದ್ದಾರೆ. ವಿಪರ್ಯಾಸ ಅಂದ್ರೆ ಬುಮ್ರಾ ಸತತ ಐದು ಪಂದ್ಯಗಳಲ್ಲಿ ಒಂದೇ ಒಂದು ವಿಕೆಟ್ ಪಡೆದಿಲ್ಲ. ಪ್ರತಿ ಓವರ್‌ಗೆ ಸುಮಾರು 8-9 ರನ್‌ಗಳನ್ನು ಬಿಟ್ಟುಕೊಡುತ್ತಿದ್ದಾರೆ. ಇದು ಹೈ- ಸ್ಕೋರಿಂಗ್ ಐಪಿಎಲ್‌ನಲ್ಲಿ ಕೆಟ್ಟದ್ದಲ್ಲ, ಆದರೆ ಬುಮ್ರಾ ಅವರಂತಹ ಸ್ಟ್ರೈಕ್ ಬೌಲರ್‌ನಿಂದ ವಿಕೆಟ್ ತೆಗೆಯಲು ಸಾಧ್ಯವಾಗದೆ ಇರುವುದು ಟೆನ್ಷನ್‌ಗೆ ಕಾರಣವಾಗಿದೆ
ಬೂಮ್ರಾ ವಿರುದ್ಧ ರನ್ ಗಳಿಸಲು ಬ್ಯಾಟರ್‌ಗಳು ಹರಸಾಹಸ ಪಡುತ್ತಾರೆ. ರನ್‌ಗಳಿಸೋದು ಬಿಡಿ ವಿಕೆಟ್ ಹೇಗೆ ಉಳಿಸಿಕೊಳ್ಳುವುದು ಸ್ಟಾರ್ ಬ್ಯಾಟ್ಸಮನ್‌ಗಳು ತಲೆಕೆಡಿಸಿಕೊಳ್ತಾರೆ. ಅವರ ಯಾರ್ಕರ್, ನಿಧಾನಗತಿಯ ಬೌಲಿಂಗ್, ಬೌನ್ಸರ್‌ಗಳಿಗೆ ಬ್ಯಾಟರ್‌ಗಳು ಒಂದು ರನ್ ಗಳಿಸಲು ಪರದಾಡುತ್ತಾರೆ. ಆದರೆ, ಈ ಬಾರಿಯ ಐಪಿಎಲ್‌ನಲ್ಲಿ ಅದಕ್ಕೆ ತದ್ವಿರುದ್ಧ ಎಂಬಂತೆ ಯುವ ಆಟಗಾರರು ಕೂಡ ಫುಲ್ ಜೋಶ್‌ನಲ್ಲಿ ರನ್ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ: GT ವಿರುದ್ಧವೂ ಸೋಲು, ಗೆಲುವಿನ ಖಾತೆ ತೆರೆಯದ KKR – ಸತತ ಐದು ಸೋಲಿನಿಂದ ಕಂಗೆಟ್ಟ ಕೋಲ್ಕತಾ
5 ಪಂದ್ಯಗಳಲ್ಲಿ ಸಿಕ್ಕಿಲ್ಲ ಒಂದೇ ಒಂದು ವಿಕೆಟ್
ಜಸ್‌ಪ್ರೀತ್ ಬೂಮ್ರಾ ತಂಡದಲ್ಲಿ ಇದ್ದಾರೆ ಅಂದ್ರೆ ಎದುರಾಳಿಗಳಿಗೆ ನಡುಕ ಶುರುವಾಗುತ್ತೆ.. ಟೀಂ ಇಂಡಿಯಾದ ಶಕ್ತಿಯೇ ಬುಮ್ರಾ.. ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಅದ್ದನ್ನ ಫ್ರೂವ್ ಮಾಡಿದ್ದಾರೆ. ಆದ್ರೆ ಐಪಿಎಲ್‌ನಲ್ಲಿ ಕಥೆ ಬದಲಾಗಿದೆ. 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕೂಡ ಬೂಮ್ರಾ ಅವರ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್ ಬಾರಿಸಿದ್ದಾರೆ. ಅಷ್ಟೇ ಅಲ್ಲ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಅವರು 4 ಓವರ್ ಬೌಲಿಂಗ್ ಮಾಡಿ 41 ರನ್ ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಈ ಬಾರಿ ಆಡಿರುವ ಐದು ಪಂದ್ಯಗಳಿಂದ ಯಾವುದೇ ವಿಕೆಟ್ ಕೂಡ ಪಡೆದಿಲ್ಲ.
ಬುಮ್ರಾ ಅವರ ಬಲ ಅರಿತ ಬ್ಯಾಟರ್‌ಗಳು
ಜಸ್‌ಪ್ರೀತ್ ಬೂಮ್ರಾ ಡೇಂಜರ್ ಬೌಲರ್ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ಸಂಗತಿ. ಆದರೆ, ಈ ಬಾರಿಯ ಐಪಿಎಲ್‌ನಲ್ಲಿ ಅವರ ಮ್ಯಾಜಿಕ್ ನಡೆಯುತ್ತಿಲ್ಲ. ಬ್ಯಾಟರ್‌ಗಳು ಅವರ ಪ್ರತಿ ಬೌಲ್‌ಗಳನ್ನ ಹೊಡಿಯುತ್ತಿಲ್ಲ. ಬದಲಾಗಿ, ಕೆಟ್ಟ ಎಸೆತಕ್ಕೆ ಮಾತ್ರ ರನ್ ಕಲೆಹಾಕುತ್ತಿದ್ದಾರೆ. ಆ ಕಾರಣಕ್ಕಾಗಿ ಅವರಿಗೆ ಇದುವರೆಗೆ ಯಾವುದೇ ವಿಕೆಟ್ ಬಂದಿಲ್ಲ. ಬ್ಯಾಟರ್‌ಗಳು ಬೂಮ್ರಾ ಅವರ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸದಂತೆ ರಕ್ಷಣಾತ್ಮಕ ಆಟ ಆಡುತ್ತಿದ್ದಾರೆ. ಬೂಮ್ರಾ ಅವರ ಓವರ್‌ನಲ್ಲಿ ರನ್ ಕಡಿಮೆಯಾದರೆ, ಅದನ್ನು ಬೇರೆ ಬೌಲರ್‌ಗಳ ಓವರ್‌ನಲ್ಲಿ ಮರಳಿ ತರಲು ಪ್ರಯತ್ನಿಸುತ್ತಿದ್ದಾರೆ ಬ್ಯಾಟ್ಸಮನ್‌ಗಳು..
ಈ ಸೀಸನ್‌ನಲ್ಲಿ ಬುಮ್ರಾ ತಮ್ಮ ಸರಾಸರಿ ವೇಗವನ್ನು ಗಂಟೆಗೆ 130 ಕಿ.ಮೀ.ಗೆ ಇಳಿಸಿಕೊಂಡಿದ್ದಾರೆ. ಅಂದ್ರೆ ಸುಮಾರು ಶೇ. 44 ರಷ್ಟು ನಿಧಾನವಾಗಿ ಚೆಂಡನ್ನು ಎಸೆಯುತ್ತಿದ್ದಾರೆ. ಅಂದರೆ ಪ್ರತಿ ಎರಡು ಎಸೆತಗಳಲ್ಲಿ ಒಂದು ನಿಧಾನವಾಗಿ ಬರುತ್ತಿದೆ. ಇದರಿಂದಾಗಿ, ಬ್ಯಾಟರ್‌ಗಳು ಸುಲಭವಾಗಿ ಸಮಯಕ್ಕೆ ತಕ್ಕಂತೆ ಆಡುತ್ತಿದ್ದಾರೆ. ಇದು ಕೂಡ ಬುಮ್ರಾ ಬೌಲಿಂಗ್‌ನಲ್ಲಿ ವಿಕೆಟ್ ಬರದಿರಲು ಕಾರಣ ಅಂತನೇ ಹೇಳಬಹುದು..
ಬುಮ್ರಾ ಮಾತು ಕೇಳುತ್ತಿಲ್ಲ ಪಾಂಡ್ಯ
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ನೋಡಿದವರಿಗೆ ಒಂದು ಅಂಶ ಅರ್ಥವಾಗುತ್ತದೆ. ಅದೇನು ಅಂದರೆ, ಹಾರ್ದಿಕ್ ಪಾಂಡ್ಯ ಮೇಲೆ ಬೂಮ್ರಾ ಅವರಿಗೆ ಅಸಮಾಧಾನ ಇದೆ ಎನ್ನುವುದು. ಪಂದ್ಯದ ಸಂದರ್ಭದಲ್ಲಿ ಉಭಯ ಆಟಗಾರರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ತಾನು ಹೇಳಿದ ಕಡೆಯಲ್ಲಿ ಪಾಂಡ್ಯ ಪೀಲ್ಡರ್‌ಗಳನ್ನ ನಿಲ್ಲಿಸುತ್ತಿಲ್ಲ ಅಂತ. ಆ ಆಕ್ರೋಶವನ್ನ ಪಾಂಡ್ಯ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಬಹಿರಂಗವಾಗಿ ಹೊರ ಹಾಕಿದ್ದಾರೆ. ಒಟ್ನಲ್ಲಿ ಬೌಲರ್‌ಗಳ ಚಾಣಕ್ಷ ತನವೋ ಬುಮ್ರಾ ಅವರ ಫೇಲ್ಯುರೋ ಗೊತ್ತಿಲ್ಲ. ಬುಮ್ರಾ ಇಲ್ಲಿ ತನಕ ಒಂದೇ ಒಂದು ವಿಕೆಟ್ ತೆಗೆದಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮೂಲಕ ತಿಳಿಸಿ ನಮಸ್ಕಾ

ನೋಡಿರಿ

