22ಕ್ಕೆ 19 ರನ್.. ನೆಕ್ಸ್ಟ್ 23ಕ್ಕೆ 82 ರನ್ – ಮುಂಬೈ ಗೆ ಗೆಲುವಿನ ತಿಲಕವಿಟ್ಟ ಅಶ್ವನಿ
ಬುಮ್ರಾಗೂ ವಿಕೆಟ್.. MI ಆಟ ಶುರು

ಐಪಿಎಲ್ನಲ್ಲಿ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫೈನಲಿ ಗೆಲುವಿನ ಟ್ರ್ಯಾಕ್ಗೆ ಬಂತು. ಮೊದಲ ಮ್ಯಾಚಲ್ಲಿ ಕೆಕೆಆರ್ ವಿರುದ್ಧ ಭರ್ಜರಿ ಜಯ ಗಳಿಸಿದ್ದ ಮುಂಬೈ ಆ ನಂತ್ರ ಸತತ ನಾಲ್ಕು ಪಂದ್ಯ ಸೋತಿದ್ರು. ಈಗ ಗುಜರಾತ್ ವಿರುದ್ಧದ ಮ್ಯಾಚಲ್ಲಿ ಬ್ಯಾಟಿಂಗ್ ಹಾಗೇ ಬೌಲಿಂಗ್ನಲ್ಲಿ ಅಬ್ಬರಿಸಿ ಗೆದ್ದು ಬೀಗಿದ್ದಾರೆ.
ಇದನ್ನೂ ಓದಿ : ಮುಂಬೈಗೆ ವಿಜಯದ ತಿಲಕ! – GT ವಿರುದ್ದ 99 ರನ್‌ಗಳ ಭರ್ಜರಿ ಜಯ ಸಾಧಿಸಿದ MI
ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಸೋಮವಾರ ನಡೆದ ಮ್ಯಾಚಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಪರ ಒನ್ಸ್ ಅಗೇನ್ ಓಪನರ್ಸ್ ಕೈಕೊಟ್ರು. ಆದ್ರೆ ಆ ನಂತರದಲ್ಲಿ ತಿಲಕ್ ವರ್ಮಾ ಅವರ ಸ್ಫೋಟಕ ಶತಕದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು 199 ರನ್ ಕಲೆಹಾಕಿತು. ಈ ಮೂಲಕ ಗುಜರಾತ್ ಗೆಲುವಿಗೆ 200 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಗುಜರಾತ್ ಕೇವಲ 100 ರನ್ಗಳಿಗೆ ಆಲೌಟ್ ಆಗುವ ಮೂಲಕ ಬರೋಬ್ಬರಿ 99 ರನ್ಗಳಿಂದ ಪಂದ್ಯವನ್ನು ಸೋತಿದೆ. ಌಕ್ಚುಲಿ ಮುಂಬೈ ಪರ ಪಂದ್ಯದ ದಿಕ್ಕನ್ನೇ ಬದಲಿಸಿದ್ದು ತಿಲಕ್ ವರ್ಮಾ ಹಾಗೇ ಅಶ್ವನಿ ಕುಮಾರ್.
ಗೆದ್ದು ಬೀಗಿದ ಮುಂಬೈ!
ಬ್ಯಾಟಿಂಗ್ ಆರಂಭ ಮಾಡಿದ ಮುಂಬೈ ಪವರ್ ಪ್ಲೇನಲ್ಲೇ 3 ವಿಕೆಟ್
ಡಿಕಾಕ್ 13 ರನ್ಸ್, ಡ್ಯಾನಿಶ್ ಮಲೇವಾರ್ 2, ಸೂರ್ಯ 15 ರನ್
ನಮನ್ ಧೀರ್ 45 ರನ್ ಕಲೆ ಹಾಕಿದ್ರೆ ತಿಲಕ್ ಸ್ಫೋಟಕ ಶತಕ 101(45)
ತಿಲಕ್ ಆಟದಿಂದ 200 ರನ್ ಗಳ ಟಾರ್ಗೆಟ್ ನೀಡಿದ ಮುಂಬೈ
ಫಸ್ಟ್ ಬಾಲಲ್ಲೇ ಗುಜರಾತ್ ಬ್ಯಾಟರ್ ಸುದರ್ಶನ್ ವಿಕೆಟ್ ತೆಗೆದ ಬುಮ್ರಾ
ಉಳಿದ ಯಾವುದೇ ಬ್ಯಾಟರ್ ಕೂಡ ಸೆಟಲ್ ಆಗೋಕೆ ಆಗಲೇ ಇಲ್ಲ
ಸುಂದರ್ 26 ರನ್ ಗಳಿಸಿದ್ದೇ ಗುಜರಾತ್ ಪರ ಹೈಯೆಸ್ಟ್ ಸ್ಕೋರ್
ಮುಂಬೈ ಪರ 24 ರನ್ ನೀಡಿ ನಾಲ್ಕು ವಿಕೆಟ್ ಬೇಟೆಯಾಡಿದ ಅಶ್ವಿನಿ
ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡ್ರಲ್ಲೂ ವೀಕ್ ಆಗಿದ್ದ ಗುಜರಾತ್
ಹೀಗೆ ಮುಂಬೈ ಇಂಡಿಯನ್ಸ್ ತಂಡ ಕಂಪ್ಲೀಟ್ ಡಾಮಿನೇಟ್ ಮಾಡಿ ಗುಜರಾತ್ ತಂಡವನ್ನ ಬರೋಬ್ಬರಿ 99 ರನ್ಗಳಿಂದ ಸೋಲಿಸಿತು. ಇನ್ನು ಜಸ್ಪ್ರೀತ್ ಬುಮ್ರಾ ಈ ಸೀಸನ್ನಲ್ಲಿ ತಮ್ಮ ಮೊದಲ ವಿಕೆಟ್ ಕೂಡ ತೆಗೆದ್ರು. 5 ಪಂದ್ಯಗಳ ಬಳಿಕ ಮೊದಲ ವಿಕೆಟ್ ಇದು. ಇನ್ನು ಮುಂಬೈ ಆಟಗಾರರ ಪ್ರದರ್ಶನದ ವೇಳೆ ಹಾರ್ದಿಕ್ ಪಾಂಡ್ಯ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯಗಳಂತೂ ಸಿಕ್ಕಾಪಟ್ಟೆ ವೈರಲ್ ಆಗಿವೆ. ಫೈನಲಿ ಮುಂಬೈ ಇಂಡಿಯನ್ಸ್ ಗೆಲುವಿನ ಹಳಿಗೆ ಬಂದಿದೆ.

ನೋಡಿರಿ

