ಮಗು ಹೆತ್ತು ಕೊಟ್ಟರೆ ₹25 ಲಕ್ಷ! – ತಾಯಂದಿರಿಗೆ ಕಂಪನಿಯಿಂದ ಭರ್ಜರಿ ಆಫರ್!
ಯಾವುದೇ ಮಹಿಳೆಗೆ ತಾಯಿಯಾಗುವುದು ಅವಳ ಜೀವನದ ಅತ್ಯಂತ ವಿಶೇಷವಾದ ಕ್ಷಣ. ತನ್ನೊಡಲಲ್ಲಿ ಮುದ್ದು ಮಗುವೊಂದು ಚಿಗುರೊಡೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಹೆಣ್ಣು ತಾಯ್ತನದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಳ್ತಾಳೆ. ಒಬ್ಬ ಸಾಮಾನ್ಯ ಹೆಣ್ಣು ದೈವತ್ವಕ್ಕೇರುವ ಪಯಣ ಆರಂಭವಾಗೋದು ಕೂಡ ಇಲ್ಲಿಂದಲೇ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ಅಮ್ಮ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಶಕ್ತಿಯಿದೆ. ಹೀಗಾಗೇ ಸಾಮಾನ್ಯ ಮಹಿಳೆಯಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ತಾಯ್ತನವನ್ನ ಅನುಭವಿಸೋದು ಮಾತ್ರವಲ್ಲ ಸಂಭ್ರಮಿಸ್ತಾರೆ. ಕರುಳಬಳ್ಳಿಯ ಇಂತಹ ಮಧುರ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಆದ್ರೀಗ ಚೀನಾದ ಕಂಪನಿಯೊಂದು ಮಗುವಿಗೆ ಜನ್ಮ ನೀಡುವ ಮಹಿಳೆಗೆ ಬಿಗ್ ಆಫರ್ ನೀಡಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಆಗಲಿ..!- ಐಪಿಎಲ್ ವಿಚಾರದಲ್ಲಿ ಹಿಟ್ಮ್ಯಾನ್ ಫುಲ್ ಸೈಲೆಂಟ್
ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿದ್ರೆ ಚೀನಾ ಒಂಥರಾ ವಿಚಿತ್ರ ದೇಶನೇ. ಅಲ್ಲಿರುವ ಕಂಪನಿಗಳು ಜನರಿಗೆ ಕೊಡೋ ಆಫರ್ಗಳು ತಲೆ ತಿರುಗುವಂತೆ ಮಾಡುತ್ತವೆ. ಇದೀಗ ಡ್ರ್ಯಾಗನ್ ರಾಷ್ಟ್ರದ ಕಂಪನಿಯೊಂದು ಯಾವುದೇ ಮಹಿಳೆ ಮಗುವಿಗೆ ಜನ್ಮ ನೀಡುವ ಮೂಲಕ ಹಣವನ್ನು ಗಳಿಸಬಹುದು ಎಂಬ ಆಫರ್ ಕೊಟ್ಟಿದೆ.
ಇದು ಒಂದು ರೀತಿಯ ಕಮರ್ಷಿಯಲ್ ಜಾಹೀರಾತಾಗಿದ್ದು, ಮಕ್ಕಳನ್ನು ಹೊಂದುವ ಮೂಲಕ ಹಣವನ್ನು ಸಂಪಾದಿಸಲು ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದೆ. ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಕಂಪನಿ ಮಹಿಳೆಯರು ಬಾಡಿಗೆ ತಾಯಂದಿರಾಗುವ ಮೂಲಕ ಹಣವನ್ನು ಗಳಿಸಬಹುದು ಎಂದು ಆಫರ್ ನೀಡಿದೆ. ಅಷ್ಟೇ ಅಲ್ಲ, ಅವರ ವಯಸ್ಸಿಗೆ ಅನುಗುಣವಾಗಿ ಪ್ಯಾಕೇಜ್ ನೀಡಲಾಗುತ್ತಿದೆ.
28 ವರ್ಷದ ಮಹಿಳೆ ತಾಯಿಯಾದರೆ ಭಾರತದ ಕರೆನ್ಸಿ ಪ್ರಕಾರ ಆಕೆಗೆ 25 ಲಕ್ಷದ 23 ಸಾವಿರದ 783 ರೂಪಾಯಿ ಮತ್ತು 29 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದರೆ ಆಕೆಗೆ 24 ಲಕ್ಷದ 19 ಸಾವಿರದ 57 ರೂಪಾಯಿ ನೀಡಲಾಗುತ್ತದೆ. ಅಂತೆಯೇ, ಮಹಿಳೆಗೆ ವಯಸ್ಸಾದಂತೆಲ್ಲಾ ಮಗುವಿಗೆ ಜನ್ಮ ನೀಡಲು ಅವಳು ಕಡಿಮೆ ಹಣವನ್ನು ಪಡೆಯುತ್ತಾಳೆ. ಯಾರಾದರೂ 40 ರಿಂದ 42 ವರ್ಷ ವಯಸ್ಸಿನಲ್ಲಿ ಬಾಡಿಗೆ ತಾಯಂದಿರಾಗಲು ಬಯಸಿದಲ್ಲಿ ಅವ್ರಿಗೆ ಕಂಪನಿಯು 20 ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಹೀಗೆ ಹಣ ಕೊಟ್ಟು ಮಗುವನ್ನ ಪಡೆಯುತ್ತದೆ. ಬಳಿಕ ಮಕ್ಕಳಿಲ್ಲದ ದಂಪತಿಗೆ ಕಾನೂನು ಪ್ರಕ್ರಿಯೆಗಳನ್ನೆಲ್ಲಾ ಮುಗಿಸಿ ಮಗು ನೀಡಲಾಗುತ್ತದೆ.