ರೀಲ್ಸ್ ಸ್ಟಾರ್‌ಗಳಿಗೆ ನಿರ್ಮಲಾ ಬೂಸ್ಟ್ – 4 ರಾಜ್ಯಗಳಿಗೆ ಬಂಪರ್ ಗಿಫ್ಟ್

ರೀಲ್ಸ್ ಸ್ಟಾರ್‌ಗಳಿಗೆ ನಿರ್ಮಲಾ ಬೂಸ್ಟ್ – 4 ರಾಜ್ಯಗಳಿಗೆ ಬಂಪರ್ ಗಿಫ್ಟ್

ಸಾಕಷ್ಚು ನಿರೀಕ್ಷೆಗಳು ಮೂಡಿಸಿದ ಕೇಂದ್ರ ಬಜೆಟ್‌ ಮಂಡನೆಯಾಗಿದೆ.. ಬೆಟ್ಟದಷ್ಟು ನಿರೀಕ್ಷೆಗಳಿತ್ತು.. ಸಾಕಷ್ಟು ಕ್ಷೇತ್ರಗಳಿಗೆ ಬಂಪರ್ ಸಿಕ್ಕಿದೆ. ನಾನು ಈ ಬಜೆಟ್ ಅನ್ನು ಮಾಘ ಪೂರ್ಣಿಮೆ ಮತ್ತು ಗುರು ರವಿದಾಸ್ ಅವರ ಜನ್ಮ ದಿನದ ಸಂದರ್ಭದಲ್ಲಿ ಮಂಡಿಸುತ್ತಿದ್ದೇನೆ ಎನ್ನುತ್ತಾ ನಿರ್ಮಲಾ ಸೀತಾರಮನ್‌ರವರು ಬಜೆಟ್ ಶುರುಮಾಡಿದರು. ಮೋದಿ ಬಜೆಟ್‌ನಲ್ಲಿ ದೇಶದ ಜನರಿಗೆ ಏನೆಲ್ಲಾ ಸಿಕ್ಕಿದೆ ಎಂಬ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಖಾದಿ ಉದ್ಯಮಕ್ಕೆ ಗಾಂಧಿ ಹೆಸರು – ಚೆನ್ನೈ- ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ 4 ರಾಜ್ಯಗಳಿಗೆ ಕೇಂದ್ರದಿಂದ ಬಂಪರ್ ಗಿಫ್ಟ್

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ.

  • 4 ರಾಜ್ಯಗಳಿಗೆ ಬಂಪರ್ ಗಿಫ್ಟ್
  • ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾ ಮತ್ತು ಕೇರಳ ರಾಜ್ಯಕ್ಕೆ ಬಂಪರ್
  • 4 ರಾಜ್ಯಗಳಿಗೆ ಅರ್ಥ್ ಮಿನರಲ್ ಕಾರಿಡಾರ್ ಯೋಜನೆ ಘೋಷಣೆ
    ಒಡಿಶಾ, ಕೇರಳ, ಆಂಧ್ರದಲ್ಲಿ ಮೈನಿಂಗ್ ಸಂಶೋಧನೆ

ತಮಿಳುನಾಡು, ಆಂಧ್ರ ಪ್ರದೇಶ, ಒಡಿಸ್ಸಾ ಮತ್ತು ಕೇರಳ ನಿರ್ಮಲಾ ಸಿತಾರಾಮನ್ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. 4 ರಾಜ್ಯಗಳಿಗೆ ಅರ್ಥ್ ಮಿನರಲ್ ಕಾರಿಡಾರ್ ಯೋಜನೆ ಘೋಷಣೆ  ಮಾಡಿದ್ದಾರೆ.  ಒಡಿಶಾ, ಕೇರಳ, ಆಂಧ್ರ ಮತ್ತು ತಮಿಳುನಾಡುಗಳಲ್ಲಿ ಅಪರೂಪದ ಭೂಮಿಯ ಖನಿಜ ಕಾರಿಡಾರ್‌ಗಳನ್ನು ಸ್ಥಾಪನೆ. ಇದ್ದಕ್ಕೆ ₹40 ಸಾವಿರ ಕೋಟಿ ನೀಡಿದ್ದಾರೆ.

  • ಸೆಮಿಕಂಡಕ್ಟರ್ ಯೋಜನೆ
  • ಸೆಮಿಕಂಡಕ್ಟರ್ ಯೋಜನೆಗೆ 40 ಸಾವಿರ ಕೋಟಿ ರೂ.

ಎಲೆಕ್ಟ್ರಾನಿಕ್ ಬಿಡಿಭಾಗಗಳ ಉತ್ಪಾದನಾ ಯೋಜನೆಯ ವೆಚ್ಚ 40,000 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ.

  • ಆರ್ಥಿಕ ಅಭಿವೃದ್ಧಿಗೆ ಹಲವು ಯೋಜನೆ
  • ಜಾಗತಿಕ ಬಯೋಫಾರ್ಮಾ ಹಬ್​ ಕನಸು
  • ಬಯೋಫಾರ್ಮಾ ಹಬ್​ಗೆ ₹10 ಲಕ್ಷ ಕೋಟಿ
  • 3 ಹೊಸ ಫಾರ್ಮಾ ಕಾಲೇಜುಗಳ ಘೋಷಣೆ

ಜಾಗತಿಕ ಬಯೋಫಾರ್ಮಾ ಹಬ್​ ಕನಸು ನೀಡಿದ್ದು, ಬಯೋಫಾರ್ಮಾ ಹಬ್​ಗೆ ₹10 ಲಕ್ಷ ಕೋಟಿ ನೀಡಿದ್ದು, 3 ಹೊಸ ಫಾರ್ಮಾ ಕಾಲೇಜುಗಳ ಘೋಷಣೆ ಮಾಡಲಾಗಿದೆ.

  • ಟೆಕ್ಸ್‌ ಟೈಲ್ ವಲಯಕ್ಕೆ ಬೂಸ್ಟ್
  • ಮಹಾತ್ಮಾ ಗಾಂಧಿ ಗ್ರಾಮ್ ಸ್ವರಾಜ್ ಯೋಜನೆ ಜಾರಿ
  • ಗ್ರಾಮೀಣ ಕೈಗಾರಿಕೆಗೆ ಒತ್ತು ನೀಡುವ ಯೋಜನೆ

ಖಾದಿ ಕೈಮಗ್ಗ ವಲಯವನ್ನು ತರಬೇತಿ, ಕೌಶಲ್ಯ, ಉತ್ಪಾದನೆ ಮತ್ತು ಗುಣಮಟ್ಟದ ಪರಿಶೀಲನೆಗಳೊಂದಿಗೆ ಉತ್ತೇಜಿಸಲು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಸೀತಾರಾಮನ್ ಹೇಳಿದರು.

  • ಬಯೋ ಫಾರ್ಮಾ ಶಕ್ತಿ ಯೋಜನೆ 10 ಸಾವಿರ ಕೋಟಿ ರುಪಾಯಿ

ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಭರ್ಜರಿ ಕೊಡುಗೆ ನೀಡಿದ್ದು, ಬಯೋ ಫಾರ್ಮಾ ಶಕ್ತಿ ಯೋಜನೆಯಡಿ 10 ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ದೇಶವನ್ನು ಔಷಧ ತಯಾರಿಕಾ ಘಟಕದ ಹಬ್‌ ಮಾಡಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ.

  • ಅನಿಮೇಷನ್, VFX ವಲಯಕ್ಕೆ ಬೂಸ್ಟ್
  • 15 ಸಾವಿರ ಶಾಲೆಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್
  • ಅನಿಮೇಷನ್, VFX ವಲಯಕ್ಕೆ ಬೂಸ್ಟ್
  • ಮುಂಬೈನಲ್ಲಿ ಕಂಟೆಂಟ್ ಕ್ರಿಯೇಷನ್ ಲ್ಯಾಬ್
  • ಹೊಸ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಡಿಸೈನ್

ದೇಶದ 15 ಸಾವಿರ ಶಾಲೆಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಸ್ಥಾಪನೆ.  ಸೋಷಿಯಲ್ ಮೂಲಕ ಉದ್ಯೋಗ ನೀಡುವುದ್ದಕ್ಕೆ ಕೇಂದ್ರ ಉತ್ತೇಜನೆ ನೀಡಿದೆ. ಹಾಗೇ ಅನಿಮೇಷನ್, VFX ವಲಯಕ್ಕೆ ಬೂಸ್ಟ್ ನೀಡಿದ್ದು, ಮುಂಬೈನಲ್ಲಿ ಕಂಟೆಂಟ್ ಕ್ರಿಯೇಷನ್ ಲ್ಯಾಬ್ ನಿರ್ಮಾಣ ಮಾಡುವುದ್ದಕ್ಕೆ ಕೇಂದ್ರ ಮುಂದಾಗಿದೆ.

Sulekha