ಬಿಗ್‌ಬಾಸ್ ಧನರಾಜ್ ಜೋಡಿಗೆ ಬಂಪರ್ ಚಾನ್ಸ್ – ಮದುವೆಯಾದ ವಾರದಲ್ಲೇ ರುದ್ರಮಾಸ್ಟರ್‌ಗೆ ಸಿಕ್ತು ಮತ್ತೊಂದು ರಿಯಾಲಿಟಿ ಶೋ

ಜೀ ಕನ್ನಡ ವಾಹಿನಿಯಲ್ಲಿ ಮತ್ತೊಂದು ರಿಯಾಲಿಟಿ ಶೋಗೆ ದಿನಗಣನೆ ಶುರುವಾಗಿದೆ. ಈ ರಿಯಾಲಿಟಿ ಶೋನಲ್ಲಿ ಜೀ ಕನ್ನಡದ ಪ್ರತಿಭೆಗಳಿಗೆ ಚಾನ್ಸ್ ಸಿಕ್ಕಿದೆ. ಜೊತೆಯಲ್ಲಿ ಬಿಗ್‌ಬಾಸ್‌ನಲ್ಲಿ ಜನರನ್ನು ರಂಜಿಸಿದ ಧನರಾಜ್‌ಗೂ ಅವಕಾಶ ಸಿಕ್ಕಿದೆ.
ಇದನ್ನೂ ಓದಿ:ಸಿದ್ದೇಗೌಡ್ರಿಗೆ DKD ಫೈನಲ್ ಟಿಕೆಟ್.. ಶೋನಲ್ಲಿ ಗುಂಡಮ್ಮಗೆ ಮೋಸ ಆಯ್ತಾ? – ಡ್ಯಾನ್ಸ್ ಶೋ ಗೆಲ್ಲೋದು ಇದೇ ಜೋಡಿ?
ಜೀ ಕನ್ನಡದ ಹೊಸ ರಿಯಾಲಿಟಿ ಶೋ ಜೋಡಿ ನಂ.1 ಇನ್ನೇನು ಆರಂಭವಾಗಲಿದೆ. ಇದರಲ್ಲಿ ಸೆಲೆಬ್ರಿಟಿ ಜೋಡಿಗಳು ತಮ್ಮ ನಡುವಿನ ಅನುಬಂಧದ ಬಗ್ಗೆ ಜನರೆದುರು ತೆರೆದಿಡಲಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ನಟಿ ರಂಜಿನಿ ಮತ್ತು ಅವರ ಪತಿ, ರೀಲ್ಸ್ ನಲ್ಲಿ ಫೇಮಸ್ ಆಗಿರುವ ಅರುಣ್ ಗೌಡ ದಂಪತಿ ಭಾಗವಹಿಸಲಿದ್ದಾರೆ. ಮತ್ತು ಬಿಗ್ ಬಾಸ್ ನಿಂದ ಫೇಮಸ್ ಆಗಿರುವ ಧನರಾಜ್ ಮತ್ತು ರೀಲ್ಸ್ ಮೂಲಕ ಚಿರಪರಿಚಿತ ಮುಖ ಪ್ರಜ್ಞಾ ಭಾಗವಹಿಸಲಿದ್ದಾರೆ. ಇವರ ಜೊತೆ ಇತ್ತೀಚೆಗಷ್ಟೇ ಹಸೆಮಣೆ ಏರಿರುವ ರುದ್ರ ಮಾಸ್ಟರ್ ದಂಪತಿ ಭಾಗವಹಿಸಲಿದ್ದಾರೆ. ಜೊತೆಗೆ ಗುಂಡಮ್ಮ ಎಂದೇ ಫೇಮಸ್ ಆಗಿರುವ ಗೀತಾ ಭಾರತಿ ತನ್ನ ಗಂಡನ ಜೊತೆ ಭಾಗವಹಿಸಲಿದ್ದಾರೆ.
ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿ ದಂಪತಿವರೆಗೆ ಕಿತ್ತಾಟ ಇದ್ದೇ ಇರುತ್ತದೆ. ಜೊತೆ ಪ್ರೀತಿ ಕೂಡ ಇರುತ್ತದೆ. ಎಲ್ಲಿ ಜಗಳ ಇರುತ್ತದೆಯೋ ಅಲ್ಲಿ ಪ್ರೀತಿ ಇರುತ್ತದೆ ಎಂಬ ಮಾತಿದೆ. ಇದನ್ನು ತೋರಿಸುವ ರೀತಿಯಲ್ಲಿ ‘ಜೋಡಿ ನಂಬರ್ 1’ ಬರುತ್ತಿದೆ. ಇದಕ್ಕೆ ಟ್ರೆಂಡ್ನಲ್ಲಿರೋ ಜೋಡಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬುದು ವಿಶೇಷ. ಹೌದು, ‘ಜೋಡಿ ನಂಬರ್ 1’ ರಿಯಾಲಿಟಿ ಶೋನಲ್ಲಿ ಧನರಾಜ್ ಹಾಗೂ ಅವರ ಪತ್ನಿ ಪ್ರಜ್ಞಾ ಆಗಮಿಸಲಿದ್ದಾರೆ. ಇವರು ರೀಲ್ಸ್ ಮಾಡಿ ಟ್ರೆಂಡ್ ಆದವರು. ಇನ್ನು, ರಂಜನಿ ಹಾಗೂ ಅರುಣ್ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಮೊದಲು ಫ್ರೆಂಡ್ಸ್ ಆಗಿದ್ದ ಇವರು ಈಗ ಪತಿ-ಪತ್ನಿ ಆಗಿದ್ದಾರೆ. ಇವರು ಕೂಡ ಜೋಡಿ ನಂಬರ್ ಸ್ಪರ್ಧಿಗಳಾಗಿದ್ದಾರೆ. ಕೋಟೆ ಪ್ರಭಾಕರ್-ಮಾಲತಿ, ಜಯರಾಮ್-ಗೀತಾ ಭಾರತಿ, ನಿರೀಕ್ಷಾ-ರುದ್ರ ಶೋನಲ್ಲಿ ಭಾಗವಹಿಸಲಿದ್ದಾರೆ.

ನೋಡಿರಿ

