ಹೆಣ್ಣು ಮಕ್ಕಳನ್ನು ಮಾರಲೆಂದೇ ಇದೆ ಈ ಮಾರುಕಟ್ಟೆ! – ವಧುವನ್ನು ಖರೀದಿ ಮಾಡುವವರು ಯಾರು ಗೊತ್ತಾ?

ಹೆಣ್ಣು ಮಕ್ಕಳನ್ನು ಮಾರಲೆಂದೇ ಇದೆ ಈ ಮಾರುಕಟ್ಟೆ! – ವಧುವನ್ನು ಖರೀದಿ ಮಾಡುವವರು ಯಾರು ಗೊತ್ತಾ?

ಮಾರುಕಟ್ಟೆ ಅಂದಾಗ ಹತ್ತಾರು ಅಂಗಡಿಗಳಿರುತ್ತವೆ. ಬಟ್ಟೆ, ತರಕಾರಿ, ಧಾನ್ಯ, ಮಾಂಸ ಮಾರಾಟ, ಪ್ರಾಣಿಗಳನ್ನು ವ್ಯಾಪಾರಸ್ಥರು ಮಾರಾಟ ಮಾಡುತ್ತಾರೆ. ಗ್ರಾಹಕರು ಕೂಡ ಮಾರುಕಟ್ಟೆಗೆ ಆಗಮಿಸಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಾರೆ. ಆದರೆ ಇಲ್ಲೊಂದು ಮಾರುಕಟ್ಟೆ ಇದೆ. ಇಲ್ಲಿ ಯಾವುದೇ ವಸ್ತು, ಹಣ್ಣು ತರಕಾರಿಗಳನ್ನು ಮಾರಾಟ ಮಾಡುವುದಿಲ್ಲ. ಇದು ವಧುವಿನ ಮಾರುಕಟ್ಟೆ. ಇಲ್ಲಿ ಪೋಷಕರು ಮದುವೆಗೆ ಬಂದ ಹೆಣ್ಣು ಮಕ್ಕಳನ್ನು ಕರೆತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಅಚ್ಚರಿಯಾದರೂ ಸತ್ಯ.. ವಧುವಿನ ಮಾರುಕಟ್ಟೆ ಇರುವುದು ಬಲ್ಗೇರಿಯಾದಲ್ಲಿ. ಇಲ್ಲಿ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಕರೆತಂದು ಮಾರಾಟ ಮಾಡುತ್ತಾರೆ. ವಧುವಿನ ಮಾರಾಟ ಮಾಡಲು ಅಲ್ಲಿನ ಸರ್ಕಾರ ಕೂಡ ಸಂಪೂರ್ಣವಾಗಿ ಅನುಮೋದಿಸಿದೆ. ಜನರು ಈ ಮಾರುಕಟ್ಟೆಯಲ್ಲಿ ಅಲೆದಾಡಿ ತಮ್ಮ ನೆಚ್ಚಿನ ಪತ್ನಿಯರನ್ನು ಆಯ್ಕೆ ಮಾಡಿ ಖರೀದಿಸುತ್ತಾರೆ.

ಇದನ್ನೂ ಓದಿ: ಸಂಜೆಯಾಗುತ್ತಿದ್ದಂತೆ ಭಯಾನಕವಾಗುತ್ತೆ ಈ ಧಾರ್ಮಿಕ ಸ್ಥಳ.. – ರಾತ್ರಿ ವೇಳೆ ಕೇಳುತ್ತೆ ಜನರ ಕಿರುಚಾಟ!

ಬಡ ಹೆಣ್ಣು ಮಕ್ಕಳಿಗೆ ಮಾತ್ರ ಈ ಮಾರುಕಟ್ಟೆ

ವಧುವಿನ ಮಾರುಕಟ್ಟೆಯಲ್ಲಿ ದೇಶದ ಎಲ್ಲಾ ಮಹಿಳೆಯರನ್ನು ಮಾರಾಟ ಮಾಡಲು ಅವಕಾಶ ಇಲ್ಲ. ಈ ಮಾರುಕಟ್ಟೆ ಕೇವಲ ಬಡ ಮಹಿಳೆಯರಿಗೆ ಮಾತ್ರ ಸೀಮಿತವಾಗಿದೆ. ಮದುವೆ ದುಬಾರಿಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಮಾತ್ರ ಇದನ್ನು ಭರಿಸಲಾಗದೆ ತಮ್ಮ ಹೆಣ್ಣು ಮಕ್ಕಳನ್ನು ಈ ಮಾರುಕಟ್ಟೆಗೆ ಕರೆದೊಯ್ಯುತ್ತವೆ. ಅಲ್ಲಿ ಪುರುಷರು ತಮ್ಮ ನೆಚ್ಚಿನ ಮಹಿಳೆಯರನ್ನು ಸಮಂಜಸವಾದ ಬೆಲೆಗೆ ಖರೀದಿಸಿ ಅವರನ್ನು ಹೆಂಡತಿಯಾಗಿ ಸ್ವೀಕರಿಸಿ ಬದುಕಲು ಪ್ರಾರಂಭಿಸುತ್ತಾರೆ.

ವಧು ಖರೀದಿಸಲು ಷರತ್ತುಗಳು ಅನ್ವಯ

ಈ ಮಾರುಕಟ್ಟೆಯಲ್ಲಿ ಖರೀದಿಸಿದ ವಧುವನ್ನು ಮನೆಗೆ ಕರೆದೊಯ್ಯಲು ಹಲವು ಷರತ್ತುಗಳನ್ನು ಸಹ ಹಾಕಲಾಗುತ್ತದೆ. ಕಲೈಯಾಡಿ ಸಮುದಾಯದವರು ತಮ್ಮ ಹೆಣ್ಣು ಮಕ್ಕಳನ್ನು ಈ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಹೆಣ್ಣುಮಕ್ಕಳನ್ನು ಖರೀದಿಸುವ ಪುರುಷನೂ ಕೂಡ ಅದೇ ಸಮುದಾಯಕ್ಕೆ ಸೇರಿರಬೇಕು. ಅಲ್ಲದೆ, ಈ ಮಾರುಕಟ್ಟೆಯಲ್ಲಿ ಮಾರಾಟವಾಗುವ ಮಹಿಳೆ ಬಡವಳಾಗಿರಬೇಕು. ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ಮಾರಾಟ ಮಾಡಲು ಈ ಮಾರುಕಟ್ಟೆಯಲ್ಲಿ ಸಾಧ್ಯವಿಲ್ಲ. ಅಲ್ಲದೆ, ಪುರುಷನ ಕುಟುಂಬವು ಖರೀದಿಸಿದ ಮಹಿಳೆಗೆ ಸೊಸೆಯ ಸ್ಥಾನಮಾನವನ್ನು ನೀಡಬೇಕು.

Shwetha M