‘ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೂ ಓಡಿ ಬಂದವರು ಅಂತಾರೆ’ – ಸದನದಲ್ಲಿ ಸಿದ್ದರಾಮಯ್ಯಗೆ ಬಿಎಸ್​ವೈ ಪಂಚ್!

‘ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೂ ಓಡಿ ಬಂದವರು ಅಂತಾರೆ’ – ಸದನದಲ್ಲಿ ಸಿದ್ದರಾಮಯ್ಯಗೆ ಬಿಎಸ್​ವೈ ಪಂಚ್!

ವಿಧಾನಸೌಧದಲ್ಲಿ ನಡೆಯುತ್ತಿರೋ ವಿಧಾನಸಭಾ ಕಲಾಪದಲ್ಲಿ ಇವತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿಪಕ್ಷನಾಯಕ ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ರು. ಚುನಾವಣೆ ಸ್ಪರ್ಧೆ ವಿಚಾರವಾಗಿ ಮಾಜಿ ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅವರ ಕ್ಷೇತ್ರದ ವಿಚಾರವಾಗಿ ಲೇವಡಿ ಮಾಡಿರುವ ಬಿಎಸ್​ವೈ ‘ನೀವು ಗೆದ್ದು ಬಂದಿರೋ ಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧೆ ಮಾಡಲ್ಲ ಅಂತಾ ಹೇಳುವುದರ ಹಿಂದಿನ ಅರ್ಥವೇನು? ಹಾಗಾದ್ರೆ ಆ ಕ್ಷೇತ್ರದ ಅಭಿವೃದ್ಧಿ ಮಾಡಿಲ್ವಾ ನೀವು? ಅಥವಾ ಮತ್ತೊಮ್ಮೆ ಅಲ್ಲಿ ಸ್ಪರ್ಧಿಸಿದ್ರೆ ಗೆಲ್ಲುತ್ತೇನೆ ಎಂಬ ವಿಶ್ವಾಸ ಇಲ್ವಾ? ಹಾಗಾದರೆ ಬೇರೆ ಕ್ಷೇತ್ರಗಳಲ್ಲಿ ಹೇಗೆ ಅವಕಾಶ ಮಾಡಿಕೊಡ್ತಾರೆ ನಿಮಗೆ? ಯಾವ ಕ್ಷೇತ್ರದಲ್ಲಿ ಗೆದ್ದು 5 ವರ್ಷಗಳಿಂದ ಕೆಲಸ ಮಾಡಿದ್ದೇನೆ ಅಂತಾ ಹೇಳ್ತೀರಲ್ಲ ಅಲ್ಲಿ ಮತ್ತೊಮ್ಮೆ ಚುನಾವಣೆಗೆ ನಿಲ್ಲಲು ಧೈರ್ಯ ಇಲ್ಲ ಅನ್ನೋದಾದ್ರೆ ಹೇಗೆ? ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ : ಮೀನೂಟ ತಿಂದು ದೇವಸ್ಥಾನಕ್ಕೆ ಹೋಗಿದ್ರಾ ಸಿ.ಟಿ ರವಿ ?- ಅದು ‘ಮೀನಲ್ಲ ಗೋಬಿ ಮಂಚೂರಿ’ ಎಂದ ಬಿಜೆಪಿ

ನಾನು ಸಿದ್ದರಾಮಯ್ಯಗೆ ಕಿವಿಮಾತು ಹೇಳ್ತೇನೆ. ವಿರೋಧಪಕ್ಷದ ನಾಯಕರಾಗಿ ನೀವು ಬಾದಾಮಿ ಕ್ಷೇತ್ರದ ಜನರ ಋಣ ತೀರಿಸಬೇಕು ಅಂತಿದ್ರೆ ಅಲ್ಲೇ ನಿಂತು ಗೆದ್ದು ಬನ್ನಿ. ಇಲ್ಲಾಂದ್ರೆ ನೀವು ಯಾವ ಕ್ಷೇತ್ರದಲ್ಲೂ ನಿಂತರೂ ನೀವು ಅಲ್ಲಿಂದ ಓಡಿ ಬಂದವರು ಅಂತಾರೆ. ನೀವು ಗೆಲ್ಲುತ್ತೀರಿ ಎನ್ನುವ ವಿಶ್ವಾಸ ಜನರಿಗೆ ಇರೋದಿಲ್ಲ ಎಂದು ಕಾಲೆಳೆದ್ರು.

ಸಿದ್ದರಾಮಯ್ಯ ಬಗ್ಗೆ ಬಿಎಸ್​ವೈ ವಾಗ್ದಾಳಿ ನಡೆಸುವಾಗಲೇ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ತಿರುಗೇಟು ಕೊಟ್ರು. ರಾಜಕೀಯ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಎಲ್ಲಾ ಪಕ್ಷದ ನಾಯಕರು ಕೂಡ ಬಹಳಷ್ಟು ಸಲ ಬೇರೆ ಕ್ಷೇತ್ರದಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯನವರು ಮಾಡಿರುವ ಜನಪರ ಯೋಜನೆಗಳು ಶಾಶ್ವತವಾಗಿವೆ. ಸಿದ್ದರಾಮಯ್ಯ 224 ಕ್ಷೇತ್ರಗಳ ಪೈಕಿ ಎಲ್ಲಿ ಸ್ಪರ್ಧಿಸಿದ್ರೂ ಗೆಲ್ಲುತ್ತಾರೆ ಎಂದು ಟಾಂಗ್ ಕೊಟ್ರು.

ಬಳಿಕ ಮಾತು ಮುಂದುವರಿಸಿದ ಬಿಎಸ್​ವೈ ‘ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆದ್ದಿದ್ದಾರೆ. ಈಗ ಅದೇ ಕ್ಷೇತ್ರದ ಜನ ಇಲ್ಲೇ ಬಂದು ಸ್ಪರ್ಧೆ ಮಾಡಿ ಅಂತಿದ್ದಾರೆ. ಆದ್ರೆ ಬಾದಾಮಿಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸ ಸಿದ್ದರಾಮಯ್ಯ ಅವ್ರಿಗೇ ಇಲ್ಲ. ಹೀಗಾಗಿ ಕ್ಷೇತ್ರಗಳ ಹುಡುಕಾಟ ನಡೆಸಿದ್ದಾರೆ. 224 ಕ್ಷೇತ್ರಗಳಲ್ಲಿ ಎಲ್ಲಿ ಸ್ಪರ್ಧಿಸಿದ್ರೂ ಗೆಲ್ಲುತ್ತಾರೆ ಅಂದ್ರೆ ಚಾಮುಂಡೇಶ್ವರಿಯಲ್ಲಿ ಸೋತಿದ್ದೇಕೆ. ಬಾದಾಮಿಯಲ್ಲಿ ಗೆದ್ದರೂ ಕೂಡ ಈಗ ಅಲ್ಲಿ ಸ್ಪರ್ಧಿಸ್ತಿಲ್ಲ ಯಾಕೆ ಎಂದು ವಾಗ್ದಾಳಿ ನಡೆಸಿದ್ರು.

 

suddiyaana