ಚಿರ ಯುವಕನಂತಾಗಲು ನಿತ್ಯ 111 ಮಾತ್ರೆಗಳನ್ನು ಸೇವಿಸುತ್ತಾನೆ ಈ ಮಿಲಿಯನೇರ್! – ಈತನ ದಿನಚರಿ ಕಂಡು ಜಗತ್ತೇ ಬೆರಗು!

ಚಿರ ಯುವಕನಂತಾಗಲು ನಿತ್ಯ 111 ಮಾತ್ರೆಗಳನ್ನು ಸೇವಿಸುತ್ತಾನೆ ಈ ಮಿಲಿಯನೇರ್! – ಈತನ ದಿನಚರಿ ಕಂಡು ಜಗತ್ತೇ ಬೆರಗು!

ಯೌವನ ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರು ತಾವು ಚಿರಯುವಕ ಯುವತಿಯರಂತೆ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾರೆ. ಕೆಲವರಂತೂ ತಮ್ಮ ವಯಸ್ಸನ್ನು ಮರೆಮಾಚಲು ಸಾಕಷ್ಟು ಸರ್ಕಸ್ ಮಾಡುತ್ತಾರೆ. ತಾವು ಅಂದವಾಗಿ ಕಾಣಿಸಬೇಕೆಂದು ಶಸ್ತ್ರಚಿಕಿತ್ಸೆಗೂ ಒಳಗಾಗುತ್ತಾರೆ. ಇದರ ಹಿಂದೆ ಅಲೆಕ್ಸಾಂಡರ್‌ನಂತಹ ಮಹಾನ್ ದಂಡನಾಯಕನೂ ಬಿದ್ದಿದ್ದ. ಆದರೆ ತಮ್ಮ ವಯಸ್ಸನ್ನೇ ಇಳಿಸಬಹುದು ಅಂತ ಎಲ್ಲಿಯಾದರೂ ಕೇಳಿದ್ದೀರಾ? ಇಲ್ಲೊಬ್ಬ ವ್ಯಕ್ತಿ ತನ್ನ ವಯಸ್ಸನ್ನೇ ಕಡಿಮೆಗೊಳಿಸುತ್ತಿದ್ದಾನಂತೆ!

ಹೌದು, ಚಿರ ಯೌವ್ವನ ಉಳಿಸಿಕೊಳ್ಳಲು 46 ವರ್ಷದ  ಶ್ರೀಮಂತ ಉದ್ಯಮಿ ಬ್ರಿಯಾನ್ ಜಾನ್ಸನ್ ಪ್ರಯತ್ನಿಸುತ್ತಿದ್ದಾನೆ. ಕಳೆದ ಒಂದು ವರ್ಷದಿಂದ ಜಾನ್ಸನ್‌ನ ಪ್ರತಿಯೊಂದು ಅಂಗಗಳಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸಲು ವೈದ್ಯರು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಆತ ನಿತ್ಯ ವ್ಯಾಯಾಮ, ಡಯೆಟ್‌ ಮಾಡಿ ಕಟ್ಟುನಿಟ್ಟಿನ ದಿನಚರಿಯನ್ನು ಮಾಡುತ್ತಿದ್ದಾನೆ. ಇದೀಗ ಚಿರ ಯುವಕನಾಗಲು  ಪ್ರತಿದಿನ ಬರೋಬ್ಬರಿ 111 ಮಾತ್ರೆಗಳನ್ನು ಸೇವಿಸುತ್ತಿದ್ದಾನಂತೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಉದ್ಯಮಿ ಬ್ರಿಯಾನ್ ಜಾನ್ಸನ್, ತಾನು ಈ ಸಾಹಸಕ್ಕಾಗಿ ಪ್ರತಿದಿನವೂ 111 ಮಾತ್ರೆಗಳನ್ನು ಸೇವಿಸುತ್ತಿದ್ದೇನೆ. ಪ್ರಕೃತಿಗೆ ವಿರುದ್ಧವಾದ ಈ ಪ್ರಯತ್ನಕ್ಕಾಗಿ 2 ಮಿಲಿಯನ್ ಡಾಲರ್ ವೆಚ್ಚ ಮಾಡುತ್ತಿದ್ದೇನೆ. ಬರೀ 111 ಮಾತ್ರಗಳು ಮಾತ್ರವಲ್ಲದೇ ಇನ್ನು ಅನೇಕ ಪ್ರಯೋಗಗಳನ್ನು ಇವರು ತಮ್ಮ ದೇಹದ ಮೇಲೆ ಪ್ರಯೋಗಿಸುತ್ತಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಯುವಕನಂತಾಗಲು ನಿತ್ಯ 16 ಕೋಟಿ ರೂ. ಖರ್ಚು! – ಹೇಗಿದೆ ಗೊತ್ತಾ ಈತನ ದಿನಚರಿ?

ತನ್ನ ಈ ಪ್ರಯೋಗದ ಪ್ರಗತಿಯನ್ನು ತಿಳಿಯಲು ವಿವಿಧ ಆರೋಗ್ಯ ಮೇಲ್ವಿಚಾರಣಾ ಸಾಧನಗಳನ್ನು ಸಹ ಬಳಸುತ್ತಾರೆ. ಇದರ ಜೊತೆಗೆ ಬೇಸ್ಬಾಲ್ ಕ್ಯಾಪ್ ಕೂಡ ಧರಿಸುತ್ತಾರೆ.  ಈ ಕ್ಯಾಪ್ ನೆತ್ತಿಯ ಮೇಲೆ ಕೆಂಪು  ಲೈಟ್ನ್ನು ಹಾರಿಸುತ್ತದೆ. ಅಲ್ಲದೇ ಆತನ ದೇಹದ ಸ್ಟೂಲ್ ಸ್ಯಾಂಪಲ್ (ಮಲದ ಮಾದರಿಯ ಸಂಗ್ರಹ) ಸಂಗ್ರಹಿಸುತ್ತದೆ. ಈತನ ಈ ಪ್ರಕ್ರಿಯೆಯಲ್ಲಿ ಈತನ ಮಗ ಹಾಗೂ ಅಪ್ಪ ಕೂಡ ಬೆಂಬಲವಾಗಿದ್ದಾರೆ. ಒಮ್ಮೆ ಈತ ಇದಕ್ಕಾಗಿ ಮಗನಿಂದ ರಕ್ತವನ್ನು ಪಡೆದಿದ್ದ ಅಲ್ಲದೇ ಈತ ರಾತ್ರಿಯ ವೇಳೆ ನಿದ್ರಿಸುವಾಗ ಸಣ್ಣದಾದ ಜೆಟ್ ಪ್ಯಾಕ್ನಲ್ಲಿ ಮಲಗುತ್ತಾನೆ. ಇದು ಆತನ ಗುಪ್ತಾಂಗಕ್ಕೆ ಹೊಂದಿಕೊಂಡಿದ್ದು ರಾತ್ರಿಯ ವೇಳೆ ಅದರ ಚಲನೆಯನ್ನು ಕೂಡ ಗಮನಿಸುತ್ತದೆಯಂತೆ..!

ತನ್ನ ಇಡೀ ದೇಹವನ್ನು ವಯಸ್ಸಾಗದಂತೆ ತಡೆಯುವುದಕ್ಕಾಗಿ ಹೊಸ ಪ್ರಯೋಗಕ್ಕೆ ಒಡ್ಡಿದ್ದು, ಈತನ ದೇಹದ ನಿರ್ವಹಣೆಯನ್ನು ಹೊರಭಾಗದಿಂದ ನಿರ್ವಹಿಸುವ ಸಾಹಸ ಇದಾಗಿದ್ದು, ಇದನ್ನು ಆತ ರಾಸ್ಕಲ್ ಮೈಂಡ್ ಎಂದು ಕರೆದಿದ್ದಾನೆ.  46 ವರ್ಷದ ಈತನ ದೇಹವನ್ನು 18 ವರ್ಷದ ತರುಣನ ದೇಹದಂತೆ ಮಾರ್ಪಡಿಸುವುದು ಇದರ ಗುರಿ.

ಈ ಪ್ರಯೋಗದ ಹಿನ್ನೆಲೆಯಲ್ಲಿ ಈತನ ಬದುಕಿನ ದಿನಚರಿ ಸಂಪೂರ್ಣ ಬದಲಾಗಿದ್ದು, ಬೆಳಗ್ಗೆ 11 ಗಂಟೆಗೆಲ್ಲಾ ಈತ ತನ್ನ ರಾತ್ರಿಯ ಊಟವನ್ನು ಮುಗಿಸಿ ಬಿಡುತ್ತಾನೆ. ಈ ಟೆಕ್ ಮಿಲಿಯನೇರ್ನ ಮುಖ್ಯ ಮಾರ್ಕೆಂಟಿಂಗ್ ಆಫೀಸರ್ ಆಗಿರುವ ಕೇಟ್ ಟೋಲೋ ಅವರು ಈ ಜೀವನಶೈಲಿಯ ಮೇಲುಸ್ತುವಾರಿ ವಹಿಸಿದ್ದಾರೆ.

ಇನ್ನು ಬ್ರಿಯಾನ್ ಜಾನ್ಸನ್ ಶ್ರೀಮಂತಿಕೆ ಬಗ್ಗೆ ಹೇಳುವುದಾದರೆ, ಈತ ತನ್ನ 30 ರ ಪ್ರಾಯದಲ್ಲಿರುವಾಗ ಈತನೇ ಸ್ಥಾಪಿಸಿದ್ದ ಪಾವತಿ ಸಂಸ್ಕರಣಾ ಕಂಪನಿ ಬ್ರೈನ್ಟ್ರೀ ಪೇಮೆಂಟ್ ಸೊಲ್ಯುಷನ್ ಅನ್ನು ಈಬೇಗೆ $ 800 ಮಿಲಿಯನ್ ಡಾಲರ್ಗೆ ಮಾರಾಟ ಮಾಡುತ್ತಾರೆ. ಬ್ರೈನ್ಟ್ರೀ ಪೇಮೆಂಟ್ ಸೊಲ್ಯುಷನ್ ಅನ್ನು ಈಬೇಗೆ $ 800 ಮಿಲಿಯನ್ ಡಾಲರ್ಗೆ ಮಾರಾಟ ಮಾಡಿದ ನಂತರ ಇವರ ಅದೃಷ್ಟ ಖುಲಾಯಿಸಿತು. 46 ವರ್ಷದ ಮಿಲಿಯನೇರ್ ಬ್ರಿಯಾನ್ ತನ್ನ ಎಲೆಕ್ಟ್ರಿಕ್ ಆಡಿ ಕಾರನ್ನು ಸ್ವತಃ ಚಾಲನೆ ಮಾಡುತ್ತಾನೆ, ಆದರೆ ಅತ್ಯಂತ ನಿಧಾನವಾಗಿ ವಾಹನ ಚಲಾಯಿಸುವ ಆತ ಗಂಟೆಗೆ 16 ಮೈಲುಗಳಷ್ಟು ದೂರ ಮಾತ್ರ ಪ್ರಯಾಣಿಸುತ್ತಾನಂತೆ . ಈತ ಇತ್ತೀಚೆಗೆ ತನ್ನ ಆಹಾರ ಶೈಲಿಯನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅನೇಕರ ಕೋರಿಕೆ ಮೇರೆಗೆ ಲೈಫ್‌ಸ್ಟೈಲ್‌  ನೀಲಾನಕಾಶೆ ಪೋಸ್ಟ್ ಮಾಡಿದ್ದಾಗಿ ಬ್ರಿಯಾನ್ ಹೇಳಿದ್ದಾನೆ.

Shwetha M