ಗಂಡ-ಹೆಂಡ್ತಿ ಮಧ್ಯೆ ಜಗಳ!‌ – ಅಯ್ಯಯೋ.. ಗಂಡನ ಸಿಟ್ಟಿಗೆ ಹೆಂಡತಿ ಮೂಗು ಕಟ್!

ಗಂಡ-ಹೆಂಡ್ತಿ ಮಧ್ಯೆ  ಜಗಳ!‌ – ಅಯ್ಯಯೋ.. ಗಂಡನ ಸಿಟ್ಟಿಗೆ ಹೆಂಡತಿ ಮೂಗು ಕಟ್!

ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತನ್ನ ನಾವು ಕೇಳಿದ್ದೇವೆ. ಆದ್ರೆ ಕೆಲವೊಮ್ಮೆ ಈ ಮನಸ್ತಾಪ ವಿಕೋಪಕ್ಕೆ ತಿರುಗುತ್ತವೆ. ಇದೀಗ ಇಲ್ಲೊಂದು ಕಡೆ ಗಂಡ – ಹೆಂಡತಿ ಮಧ್ಯೆ ಜಗಳ ನಡೆದಿದ್ದು, ಪಾಪಿ ಪತಿ ಹೆಂಡತಿಯ ಮೂಗು ಕೆನ್ನೆಯನ್ನೇ ಕಚ್ಚಿದ್ದಾನೆ.

ಇದನ್ನೂ ಓದಿ: ಚಿಕ್ಕಮಗಳೂರಿನ ಪ್ರವಾಸಿಗರಿಗೆ ಬಿಗ್‌ ಶಾಕ್‌! – ಇನ್ಮುಂದೆ ಈ ಸ್ಥಳಗಳಲ್ಲಿ 3 ಗಂಟೆಗಿಂತ ಹೆಚ್ಚು ಸಮಯ ಕಳೆಯುವಂತಿಲ್ಲ!

ಈ ಘಟನೆ ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ನಡೆದಿದೆ. ಪತ್ನಿ ಜತೆ ಜಗಳವಾಡಿ ಕೋಪದ ಭರದಲ್ಲಿ ಆಕೆಯ ಮೂಗು, ಕೆನ್ನೆ ಕಚ್ಚಿರುವ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖಕ್ಕೆ 10 ಹೊಲಿಗೆಗಳನ್ನು ಹಾಕಲಾಗಿದೆ. ಈ ದಾಳಿಯಲ್ಲಿ ಮೂಗಿನ ಮಾಂಸವೆಲ್ಲಾ ಕಿತ್ತು ಬಂದಿದೆ, ಕೆನ್ನೆಗಳ ಮೇಲೂ ಕೂಡ ಆಳವಾದ ಗಾಯಗಳಾಗಿವೆ.

ಇನ್ನು ಸಂತ್ರಸ್ತ ಮಹಿಳೆಯ ಸಹೋದರ ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ದಂಪತಿ ಆಗಾಗ ಜಗಳವಾಡುತ್ತಿದ್ದರು ಮತ್ತು ಘಟನೆಯ ರಾತ್ರಿ, ಅಂತಹ ಒಂದು ವಿವಾದವು ಕ್ರೂರ ಹಲ್ಲೆಗೆ ಕಾರಣವಾಯಿತು. ಆಕೆಯ ಮೂಗಿಗೆ ಆಗಿರುವ ಗಾಯದ ಪ್ರಮಾಣವನ್ನು ಪರಿಗಣಿಸಿ, ವೈದ್ಯರು ಆಕೆಯ ಮುಖ ಮೊದಲಿನಂತಾಗಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತಿ ಪ್ರಸ್ತುತ ಪರಾರಿಯಾಗಿದ್ದು, ಆತನನ್ನು ಪತ್ತೆಹಚ್ಚಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Shwetha M