ಪ್ರಿಯತಮನನ್ನು ಬಿಟ್ಟು ಬೆಡ್ ಶೀಟ್ ನೇ ಮದುವೆಯಾದ ಯುವತಿ! – ಹಿಂಗೂ ಆಗುತ್ತಾ?
ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತ ಹಿರಿಯರು ಹೇಳುತ್ತಾರೆ. ಈ ಯುವತಿಯ ಮದುವೆ ಎಲ್ಲಿ ನಿಶ್ಚಯವಾಗಿತ್ತೋ ಗೊತ್ತಿಲ್ಲ. ಈ ಯುವತಿ ಯಾವುದೇ ವ್ಯಕ್ತಿಯನ್ನು ಮದುವೆಯಾಗಿಲ್ಲ. ಬದಲಾಗಿ ಆಕೆ ಮದುವೆಯಾಗಿದ್ದು ತಾನು ಹೊದ್ದುಕೊಳ್ಳುವ ಹೊದಿಕೆಯನ್ನು! ಅದೂ ಆಕೆಯ ಪ್ರಿಯತಮನ ಮುಂದೆ!
ಪಾಸ್ಕೇಲ್ ಸೆಲ್ಲಿಕ್ ಎಂಬ ಬ್ರಿಟಿಷ್ ಮಹಿಳೆ ಪ್ರಿಯಕರನನ್ನು ಬಿಟ್ಟು, ತನ್ನ ಆಸೆಯಂತೆ ಬೆಡ್ ಶೀಟ್ ಮದುವೆಯಾಗಿದ್ದಾಳೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅನೇಕರು ಒಂದು ಕ್ಷಣ ಬೆರಗಾಗಿದ್ದಾರೆ.
ಇದನ್ನೂ ಓದಿ: ಇಲಿ ಹಿಡಿಯೋಕೆ ಮನೆಗೆ ಹಾವನ್ನೇ ಬಿಟ್ಟ ಮಾಲೀಕ – ಯಪ್ಪೋ ಮುಂದೇನಾಯ್ತು ಗೊತ್ತಾ..?
ಈ ವಿಡಿಯೋದಲ್ಲಿ ಪಾಸ್ಕೇಲ್ ಸೆಲ್ಲಿಕ್ ಪಾಶ್ಚಾತ್ಯ ಶೈಲಿಯಲ್ಲಿ ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡಿದ್ದಾಳೆ. ಅಲ್ಲದೇ ಆಕೆ ಮದುವೆಯಾಗುವ ಹೊದಿಕೆಯನ್ನು ಕೂಡ ಸುಂದರವಾಗಿ ಸಿಂಗರಿಸಲಾಗಿದೆ. ಈ ಹೊದಿಕೆಯಲ್ಲಿ “ಡುವೆಟ್, ನಾನು ನಿನ್ನನ್ನು ಪ್ರೀತಿಸುತ್ತೇನೆ”. ಎಂದು ಬರೆದಿದೆ. ಅಲ್ಲದೇ ಆಕೆ ಹೊದಿಕೆಯೊಂದಿಗೆ ಉಂಗುರ ಬದಲಾಯಿಸಿಕೊಂಡು ವಿವಾಹವಾಗಿದ್ದಾಳೆ.
ವೃತ್ತಿಯಲ್ಲಿ ಕಲಾವಿದೆಯಾಗಿರುವ ಸೆಲ್ಲಿಕ್, ಈ ಮದುವೆಗೆ ತನ್ನ ಪ್ರಿಯತಮ ಜಾನಿಯನ್ನು ಆಹ್ವಾನಿಸಿದ್ದಳಂತೆ. ಆಕೆಯ ಆಹ್ವಾನವನ್ನು ಸ್ವೀಕರಿಸಿದ ಜಾನಿ, ತನ್ನ ಪ್ರಿಯತಮೆಯ ನಡೆಯನ್ನು ಬೆಂಬಲಿಸಿದ್ದಾನೆ. ಅಲ್ಲದೇ ಈಕೆಯ ಕುಟುಂಬಸ್ಥರು ಕೂಡ ಸೆಲ್ಲಿಕ್ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೆಲ್ಲಿಕ್, ನನ್ನ ದುಃಖ ಮತ್ತು ಖುಷಿ ಸಮಯದಲ್ಲಿ ಈ ಹೊದಿಕೆ ನನ್ನ ಜೊತೆ ಇರುತ್ತದೆ. ಇದು ನನ್ನ ಆಪ್ತ ಸ್ನೇಹಿತನಂತೆ ಇದೆ. ಅದಕ್ಕಾಗಿ ಈ ಹೊದಿಕೆಯನ್ನು ಮದುವೆಯಾಗಿದ್ದೇನೆ. ಈ ಬಗ್ಗೆ ನಾನು ನನ್ನ ಪ್ರಿಯತಮನ ಜೊತೆ ಹೇಳಿಕೊಂಡಾಗ ಆತನೂ ಕೂಡ ತನ್ನ ನಿರ್ಧಾರವನ್ನು ಬೆಂಬಲಿಸಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.
Pascale Sellick married her #duvet says her boyfriend is ‘very proud’ and not jealous pic.twitter.com/OFnaAWcr1M
— Patriot (@NamoTheBestPM) January 13, 2023
ಸೆಲ್ಲಿಸ್ ಮದುವೆಯ ನಿರ್ಧಾರ ಎಲ್ಲರನ್ನು ಬೆರಗುಗೊಳಿಸುವಂತಿದೆ. ಅಲ್ಲದೇ ಈಕೆಯ ಮದುವೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.