ವಿದೇಶದಲ್ಲೂ ದೀಪಾವಳಿ ಸಂಭ್ರಮ! – ಹಿಂದೂ ಸಮುದಾಯದೊಂದಿಗೆ ಹಬ್ಬ ಆಚರಿಸಿದ ಬ್ರಿಟನ್​​ ಪ್ರಧಾನಿ ರಿಷಿ ಸುನಕ್!

ವಿದೇಶದಲ್ಲೂ ದೀಪಾವಳಿ ಸಂಭ್ರಮ! – ಹಿಂದೂ ಸಮುದಾಯದೊಂದಿಗೆ ಹಬ್ಬ ಆಚರಿಸಿದ ಬ್ರಿಟನ್​​ ಪ್ರಧಾನಿ ರಿಷಿ ಸುನಕ್!

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಣನೆ ಆರಂಭವಾಗಿದೆ. ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ಇದೀಗ ಭಾರತ ಮಾತ್ರವಲ್ಲದೇ ವಿದೇಶದಲ್ಲೂ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಬುಧವಾರ ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ದೀಪಾವಳಿ ಹಬ್ಬಕ್ಕೆ ಮುನ್ನವೇ  ಲಂಡನ್ ನ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ.

ಹಿಂದೂ ಸಂಸ್ಕೃತಿಯನ್ನು ಪ್ರೀತಿ, ಗೌರವಾದರಗಳಿಂದ ಕಾಣುವ ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ನಿವಾಸವಾದ 10 ಡೌನಿಂಗ್ ಸ್ಟ್ರೀಟ್ ಗೆ ಹಿಂದೂ ಸಮುದಾಯದವರನ್ನು ಅತಿಥಿಗಳಾಗಿ ಆಹ್ವಾನಿಸಿ ಹಬ್ಬ ಆಚರಿಸಿದ್ದಾರೆ. ಇದರ ವಿಡಿಯೊ, ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೆ ದೀಪ ಹಚ್ಚಿ ಹಬ್ಬವನ್ನು ಆಚರಿಸಿದ್ದಾರೆ. ಅವರ ಸುತ್ತಲೂ ಅನಿವಾಸಿ ಭಾರತೀಯರು ಖುಷಿಯಿಂದ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಬ್ಯಾಂಕ್‌ ನೌಕರರಿಗೆ ಗುಡ್‌ನ್ಯೂಸ್‌! – ಉದ್ಯೋಗಿಗಳಿಗೆ 2,500 ರೂವರೆಗೆ ದೀಪಾವಳಿ ಗಿಫ್ಟ್!

ಇಂಗ್ಲೆಂಡಿನಲ್ಲಿರುವ ಪ್ರತಿಯೊಬ್ಬರಿಗೂ ಮತ್ತು ಜಗತ್ತಿನ ಸುತ್ತ ಇರುವ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬದ ಶುಭಕಾಮನೆಗಳು ಎಂದು ಬ್ರಿಟನ್ ಪ್ರಧಾನ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

ಲಂಡನ್ ನ ಪ್ರಧಾನಿ ನಿವಾಸ 10 ಡೌನಿಂಗ್ ಸ್ಟ್ರೀಟ್ ನ್ನು ಹಬ್ಬದ ಸಂಕೇತವಾಗಿ ದೀಪಗಳು, ಹೂವುಗಳಿಂದ ಅಲಂಕರಿಸಲಾಗಿತ್ತು. ಅದರ ಮಧ್ಯೆ ಸಾಗುತ್ತಿರುವ ಅಕ್ಷತಾ ಮೂರ್ತಿ-ರಿಷಿ ಸುನಕ್ ಫೋಟೋಗೆ ಪೋಸ್‌ ನೀಡಿದ್ದಾರೆ.

ಭಾರತೀಯ ಮೂಲದವರಾದ ರಿಷಿ ಸುನಕ್ ವಿವಾಹವಾಗಿದ್ದು ಇನ್ಫೋಸಿಸ್ ಮುಖ್ಯಸ್ಥರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಯ ಪುತ್ರಿ ಅಕ್ಷತಾ ಮೂರ್ತಿಯವರನ್ನು, ಹೀಗಾಗಿ ಅವರು ಹಿಂದೂ ಸಂಸ್ಕೃತಿಯನ್ನು, ಹಬ್ಬ-ಹರಿದಿನಗಳನ್ನು ಕಡ್ಡಾಯವಾಗಿ ಆಚರಿಸುತ್ತಾರೆ ಮತ್ತು ಪಾಲಿಸುತ್ತಾರೆ ಕೂಡ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ದೂರವಾಣಿ ಮೂಲಕ ಎರಡೂ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಕುರಿತು ಮಾತುಕತೆ ನಡೆಸಿದ್ದರು. ಈಗ ನಡೆಯುತ್ತಿರುವ ವಿಶ್ವ ಕಪ್ ನಲ್ಲಿ ಭಾರತೀಯ ತಂಡದ ಸಾಧನೆಗೆ ರಿಷಿ ಸುನಕ್ ಅವರು ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದರು.

Shwetha M