ಸೀಟ್​ಬೆಲ್ಟ್​ ಧರಿಸದೇ ಕಾರಿನಲ್ಲಿ ಪ್ರಯಾಣ: ಪ್ರಧಾನಿಗೆ ದಂಡ ಹಾಕಿದ ಪೊಲೀಸರು!

ಸೀಟ್​ಬೆಲ್ಟ್​ ಧರಿಸದೇ ಕಾರಿನಲ್ಲಿ ಪ್ರಯಾಣ: ಪ್ರಧಾನಿಗೆ ದಂಡ ಹಾಕಿದ ಪೊಲೀಸರು!

ನಮ್ಮ ದೇಶದಲ್ಲಿ ರಾಜಕಾರಣಿಗಳು ಮಾತ್ರ ಸೀಟ್​​​ ಬೆಲ್ಟ್​ ಹಾಕದಿದ್ದರೂ ಪೊಲೀಸರು ಅವರನ್ನು ಕೇಳೋಕೆ ಹೋಗಲ್ಲ. ಆದರೆ ಇಲ್ಲೊಂದು ದೇಶದ ಪ್ರಧಾನಿಗೆ ಸೀಟ್​ ಬೆಲ್ಟ್ ಹಾಕದಿದ್ದಕ್ಕೆ ಪೊಲೀಸರು ದಂಡ ವಿಧಿಸಿದ್ದಾರೆ!

ಇದನ್ನೂ ಓದಿ: ಜೆಸಿಂಡಾ ಅರ್ಡೆರ್ನ್ ರಾಜೀನಾಮೆ – ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಆಯ್ಕೆ!

ಹೌದು, ಬ್ರಿಟನ್ ಪ್ರಧಾನಿ ರಿಷಿ ಸುನಕ್​ ಲಂಡನ್​ನಲ್ಲಿ ಸೀಟ್​​ ಬೆಲ್ಟ್ ಹಾಕದೆ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಇದನ್ನು ಗಮನಿಸಿರುವ ಪೊಲೀಸರು, ಯಾವುದೇ ಮುಲಾಜಿಲ್ಲದೆ ಪ್ರಧಾನಿ ರಿಷಿ ಸುನಕ್​ಗೆ ದಂಡ ಕಟ್ಟುವಂತೆ ನೋಟಿಸ್ ನೀಡಿದ್ದಾರೆ.

ರಸ್ತೆ ನಿಯಮ ಪಾಲಿಸದೇ ಇದ್ದಿದ್ದಕ್ಕೆ ಈಗಾಗಲೇ ಪ್ರಧಾನಿ ರಿಷಿ ಸುನಕ್ ದಂಡ ಕಟ್ಟಿದ್ದಾರೆ. ಅಲ್ಲದೇ ‘ನನ್ನಿಂದ ದೊಡ್ಡ ತಪ್ಪಾಗಿದೆ’ ಅಂತಾ ಕ್ಷಮೆಯಾಚಿಸಿದ್ದಾರೆ. ಇದು ರಿಷಿಯವರಿಗೆ ವಿಧಿಸಿದ 2ನೇ ದಂಡವಾಗಿದೆ. ಕಳೆದ ವರ್ಷ ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಂದಿನ ಪ್ರಧಾನಿ ಬೋರಿಸ್​ ಜಾನ್ಸನ್​ ಸೇರಿ ರಿಷಿಗೆ ದಂಡ ವಿಧಿಸಲಾಗಿತ್ತು.

suddiyaana