ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಬಿಗ್‌ ಶಾಕ್‌ – ಲಸಿಕೆಯಿಂದಲೇ ಅಡ್ಡಪರಿಣಾಮ!

ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಬಿಗ್‌ ಶಾಕ್‌ – ಲಸಿಕೆಯಿಂದಲೇ ಅಡ್ಡಪರಿಣಾಮ!

ಕೊರೊನಾ ಸಮಯದಲ್ಲಿ ಲಸಿಕೆ ಪಡೆದವರಿಗೆ ಶಾಕಿಂಗ್‌ ಸುದ್ದಿಯಿದೆ. ಕೋವಿಶೀಲ್ಡ್‌ ಲಸಿಕೆ ಪಡೆದರೆ ಅಡ್ಡಪರಿಣಾಮಗಳಿವೆ ಎಂದು ಸ್ವತಃ ಲಸಿಕಾ ಕಂಪನಿಯೇ ಒಪ್ಪಿಕೊಂಡಿದೆ.

ಇದನ್ನೂ ಓದಿ: ಟಿ-20 ವಿಶ್ವಕಪ್ ಗೆ ರೋಹಿತ್ ಟೀಂ ರೆಡಿ – IPLನಲ್ಲಿ ಅಬ್ಬರಿಸಿದ್ರೂ ಇವರಿಗೆ ಚಾನ್ಸ್ ಇಲ್ವಾ?

ಕೋವಿಡ್‌ ಸಮಯದಲ್ಲಿ ಕೋಟ್ಯಾಂತರ ಜನರು ಕೋವಿಶೀಲ್ಡ್‌  ಲಸಿಕೆ ಪಡೆದುಕೊಂಡಿದ್ದರು. ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಲಸಿಕೆಯನ್ನು ನೀಡಲಾಗಿತ್ತು. ಆದರೆ ಈ ಲಸಿಕೆ ಪಡೆಯುವುದರಿಂದಾಗಿ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಬ್ರಿಟಿಷ್‌ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಒಪ್ಪಿಕೊಂಡಿದೆ.

ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಕಡಿಮೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದ ದಾಖಲೆಗಳಲ್ಲಿ ಹೇಳಿದ್ದಾರೆ.

ಯುಕೆಯಲ್ಲಿ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವು ಮತ್ತು ತೀವ್ರತರವಾದ ಗಾಯಗಳಿಗೆ ಕಾರಣವಾದ ಆರೋಪದ ಮೇಲೆ ಅಸ್ಟ್ರಾಜೆನೆಕಾ ಮೊಕದ್ದಮೆ ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳು ದಾಖಲಾಗಿದ್ದವು. ಲಸಿಕೆಯಿಂದ ತೊಂದರೆಗೆ ಒಳಗಾದವರು 100 ಮಿಲಿಯನ್‌ ಪೌಂಡ್‌ಗಳವರೆಗೆ ಪರಿಹಾರ ಬಯಸಿದ್ದಾರೆ ಎಂದು ವರದಿಯಾಗಿದೆ.

Shwetha M