ಕರ್ನಾಟಕ ಕಟ್ಟಲು ಕೈ ಜೋಡಿಸಿದ ಬ್ರಿಟಿಷ್ ಅಧಿಕಾರಿಗಳು – ಏಕೀಕರಣದ ಕನಸನ್ನು ಬಿತ್ತುವಲ್ಲಿ ಇವರ ಪಾಲು ಇದೆ..!

ಕರ್ನಾಟಕ ಕಟ್ಟಲು ಕೈ ಜೋಡಿಸಿದ ಬ್ರಿಟಿಷ್ ಅಧಿಕಾರಿಗಳು – ಏಕೀಕರಣದ ಕನಸನ್ನು ಬಿತ್ತುವಲ್ಲಿ ಇವರ ಪಾಲು ಇದೆ..!

ಕನ್ನಡ.. ಕನ್ನಡಿಗ.. ಕರ್ನಾಟಕ.. ನವೆಂಬರ್‌ ತಿಂಗಳು ಕನ್ನಡಿಗರ ಪಾಲಿನ ವಿಶೇಷ ತಿಂಗಳು. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ತನುವು ಕನ್ನಡ.. ಮನವೂ ಕನ್ನಡ ಎಂಬ ವಾತಾವರಣ ಮನೆ ಮಾಡಿರುತ್ತೆ.. ಸುಮಾರು 2 ಸಾವಿರ ವರ್ಷಗಳ ಉಜ್ವಲ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿ ಹೊಂದಿದ ಜನತೆಯ ಹೃದಯವನ್ನು ನವೆಂಬರ್‌ 1 ಒಂದುಗೂಡಿಸಿತ್ತು. ಕನ್ನಡದ ಕನಸು ಬಿತ್ತಲು, ಕರ್ನಾಟಕ ಕಟ್ಟಲು ನಮ್ಮವರ ಜೊತೆ ಬ್ರಿಟಿಷ್ ಅಧಿಕಾರಿಗಳು ಕೂಡಾ ಕೈ ಜೋಡಿಸಿದ್ದರು.

ಇದನ್ನೂ ಓದಿ: ಕರ್ನಾಟಕಕ್ಕೆ 50ರ ಸಂಭ್ರಮ – ನವೆಂಬರ್ 1 ರಂದೇ ಕನ್ನಡ ರಾಜ್ಯೋತ್ಸವ ಆಚರಣೆ ಏಕೆ? ಇಲ್ಲಿದೆ ಮಹತ್ವದ ಮಾಹಿತಿ..

ಆಡೋಕೆ ಒಂದೇ ಭಾಷೆ ಅದುವೇ ಕನ್ನಡ.. ಇಂದು ಕನ್ನಡಿಗರೆಲ್ಲಾ ಒಟ್ಟಿಗೆ ಇದ್ದೇವೆ. ಇದಕ್ಕೆ ಕಾರಣ ಕರ್ನಾಟಕದ ಏಕೀಕರಣ. ಏಕೀಕರಣದ ಕನಸನ್ನು ಬಿತ್ತಿ ಕನ್ನಡವನ್ನು ಸಮರ್ಥವಾಗಿ ಕಟ್ಟುವಲ್ಲಿ ಸರ್ ವಾಲ್ಟರ್ ಎಲಿಯಟ್, ಸರ್ ಥಾಮಸ್ ಮನ್ರೋ, ಜೆ. ಎಫ್. ಫ್ಲೀಟ್‌ರಂತಹ ಬ್ರಿಟಿಷ್ ಅಧಿಕಾರಿಗಳೂ ಕೂಡ ಕೆಲಸ ಮಾಡಿದ್ದರು. ಕನ್ನಡಿಗರಾದ ಚೆನ್ನಬಸಪ್ಪ, ರಾ.ಹ. ದೇಶಪಾಂಡೆ, ರೊದ್ದ ಶ್ರೀನಿವಾಸರಾವ್, ಆಲೂರು ವೆಂಕಟರಾಯರಂತಹ ಹಿರಿಯರು ಕೈ ಜೋಡಿಸಿದ್ದರು. ಇವರು ಹಾಕಿದ ಬೀಜವೇ ಮೊಳಕೆಯೊಡೆದು ಕರ್ನಾಟಕ ರಾಜ್ಯ ಉದಯವಾಯಿತು. ರಾ.ಹ.ದೇಶಪಾಂಡೆ ನೇತೃತ್ವದಲ್ಲಿ ವಿದ್ಯಾವರ್ಧಕ ಸಂಘವನ್ನು ಧಾರವಾಡದಲ್ಲಿ ಹುಟ್ಟುಹಾಕಲಾಯ್ತು. ಈ ಸಂಘ ಕನ್ನಡಕ್ಕಾಗಿ ಸಾಕಷ್ಟು ಶ್ರಮಿಸಿತ್ತು. ಕನ್ನಡದಲ್ಲಿ ಶಿಕ್ಷಣ ಪ್ರಸಾರ, ಕನ್ನಡ ಬೆಳವಣಿಗೆ ಸಂಬಂಧ ಅನೇಕ ಕೆಲಸ ಇಲ್ಲಿಂದಲೇ ಆರಂಭವಾಯ್ತು. ಇದರ ಮುಂದುವರಿದ ಭಾಗವೇ 1907 ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಕರ್ನಾಟಕ ಗ್ರಂಥಕರ್ತರ ಮೊದಲ ಸಮ್ಮೇಳನ. ನಂತರ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಕೂಡಾ ಕನ್ನಡದ ಏಕೀಕರಣದ ಹೋರಾಟಕ್ಕೆ ಸ್ಫೂರ್ತಿ ನೀಡಿತು.

Sulekha