ವಿಷಪೂರಿತ ಹಾಲು, ಇಂಜೆಕ್ಷನ್ ನೀಡಿ 7 ನವಜಾತ ಶಿಶುಗಳನ್ನ ಕೊಂದಳು ನರ್ಸ್ – ಇನ್ನೂ 6 ಮಕ್ಕಳನ್ನ ಕೊಲ್ಲಲು ಮುಂದಾಗಿದ್ದಳು ಪಾಪಿ

ವಿಷಪೂರಿತ ಹಾಲು, ಇಂಜೆಕ್ಷನ್ ನೀಡಿ 7 ನವಜಾತ ಶಿಶುಗಳನ್ನ ಕೊಂದಳು ನರ್ಸ್ – ಇನ್ನೂ 6 ಮಕ್ಕಳನ್ನ ಕೊಲ್ಲಲು ಮುಂದಾಗಿದ್ದಳು ಪಾಪಿ

ಮನೆಯಲ್ಲಿ ಗರ್ಭಿಣಿ ಇದ್ದಾಳೆ ಅಂದರೆ ಆಕೆಗೆ ಹುಟ್ಟುವ ಮಗುವಿನ ಬಗ್ಗೆ ಮನೆಯವರಿಗೆ ಸಾವಿರಾರು ಕನಸುಗಳು ಇರುತ್ತವೆ. ಹೆರಿಗೆಗೆಂದು ಆಸ್ಪತ್ರೆಗೆ ಸೇರಿಸಿದ್ದರಂತೂ ಮಗು ಹೆಣ್ಣೋ, ಗಂಡೋ ಆಗಲಿ ಆದರೆ ತಾಯಿ, ಮಗು ಆರೋಗ್ಯವಾಗಿ ಇದ್ದರೆ ಸಾಕಪ್ಪ ಅಂತಾ ಬೇಡಿಕೊಳ್ತಾರೆ. ಹಸುಗೂಸನ್ನ ಕಂಡೊಡನೆ ತಮ್ಮೆಲ್ಲಾ ನೋವನ್ನ ಮರೆಯುತ್ತಾರೆ. ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕಂದನಿಗೆ ಜನ್ಮ ನೀಡುವ ತಾಯಿ ತನ್ನ ಕಂದನನ್ನ ಮಡಿಲಲ್ಲಿ ಹಾಕಿಕೊಂಡರೆ ಅದೇ ಅವಳ ಪಾಲಿನ ಅಮೃತ ಗಳಿಗೆ. ಆದರೆ ಆಸ್ಪತ್ರೆಯಲ್ಲೇ ಮಗು ಸಾವನ್ನಪ್ಪಿದ್ರೆ ಕಥೆ ಏನಾಗಬೇಡಿ ಹೇಳಿ. ಆ ಸನ್ನಿವೇಶವನ್ನ ನಿಜಕ್ಕೂ ಊಹಿಸೋಕೆ ಆಗಲ್ಲ. ಆದರೆ ಇಲ್ಲಿ ತಾಯಿ ಮಗುವನ್ನ ಕಾಪಾಡಬೇಕಿದ್ದ ದಾದಿಯೇ ಅಂತಹ ಸನ್ನಿವೇಶವನ್ನ ಸೃಷ್ಟಿಸುತ್ತಿದ್ದಳು. ಅಂದರೆ ನವಜಾತ ಶಿಶುಗಳನ್ನ ಕೊಲ್ಲುತ್ತಿದ್ದಳು.

ಇದನ್ನೂ ಓದಿ : ಸಾಕು ನಾಯಿಗಳು ಕಚ್ಚಾಡಿಕೊಂಡಿತೆಂದು ಮಾಲೀಕರ ಜಗಳ! – ನಡೆದೇ ಹೋಯ್ತು ಘೋರ ದುರಂತ!

ಒಂದು ವರ್ಷದಲ್ಲಿ 7 ನವಜಾತ ಶಿಶುಗಳನ್ನ (Newborn Babies) ಹತ್ಯೆ ಮಾಡಿ, ಇನ್ನೂ 6 ಶಿಶುಗಳನ್ನು ಕೊಲ್ಲಲು ಪ್ರಯತ್ನಿಸಿದ್ದಳು ಅನ್ನೋ ಆಘಾತಕಾರಿ ವಿಚಾರ ಹೊರ ಬಿದ್ದಿದೆ. ಬ್ರಿಟಿಷ್ ನರ್ಸ್ (British Nurse) ಒಬ್ಬಳನ್ನ ತಪ್ಪಿತಸ್ಥೆ ಎಂದು ನ್ಯಾಯಾಲಯ ಪರಿಗಣಿಸಿದ್ದು, ಆರೋಪಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಕ್ರೌನ್ ಪ್ರಾಸಿಕ್ಯೂಷನ್ ಸೇವೆ ತಿಳಿಸಿದೆ. ಬ್ರಿಟಿಷ್‌ ನರ್ಸ್ ಮಹಿಳೆಯನ್ನು ಲೂಸಿ ಲೆಟ್ಬಿ ಎಂದು ಗುರುತಿಸಲಾಗಿದೆ. 2015ರ ಜೂನ್ ರಿಂದ 2016ರ ಜೂನ್ ನಡುವೆ ವಾಯವ್ಯ ಇಂಗ್ಲೆಂಡ್‌ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಈ ಸರಣಿ ಕೊಲೆಗಳನ್ನ ಮಾಡಿದ್ದಾಳೆ. ಕಳೆದ ಅಕ್ಟೋಬರ್‌ನಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಶುಕ್ರವಾರ ಈ ಕುರಿತು ವಿಚಾರಣೆ ನಡೆಸಿದ ಇಂಗ್ಲೆಂಡ್‌ನ ಕೋರ್ಟ್ (England Court) ಶಿಶುಹತ್ಯೆಯ ಆರೋಪಿ ನರ್ಸ್‌ಗೆ ಶಿಕ್ಷೆ ವಿಧಿಸಲು ಮುಂದಾಗಿದೆ. ಈಕೆಗೆ ಶಿಕ್ಷೆ ವಿಧಿಸಲು ಭಾರತೀಯ ಮೂಲದ ಮಕ್ಕಳ ವೈದ್ಯರ ಸಲಹೆಗಾರ ಡಾ. ರವಿ ಜಯರಾಮ್ ಸಹಕರಿಸಿದ್ದಾರೆ.

ಈ ನರ್ಸ್ ಳಿಂದ ಕೊಲೆಯಾದ ಹೆಚ್ಚಿನ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಏಕೆಂದರೆ ಲೂಸಿ ಲೆಟ್ಬಿ (33) ತನ್ನ ಆರೈಕೆಯಲ್ಲಿದ್ದ ಶಿಶುಗಳಿಗೆ ವಿಷಪೂರಿತ ಚುಚ್ಚುಮದ್ದು ನೀಡುತ್ತಿದ್ದಳು. ಜೊತೆಗೆ ಹಾಲಿನೊಂದಿಗೆ ವಿಷಪೂರಿತ ಲಿಕ್ವಿಡ್ ಬೆರೆಸಿ ಕೊಡುತ್ತಿದ್ದಳು. ಮಕ್ಕಳನ್ನ ಉಸಿರುಗಟ್ಟಿಸಿ, ದೈಹಿಕವಾಗಿ ಹಲ್ಲೆ ನಡೆಸಿ ಕೊಂದಿದ್ದಾಳೆ ಎಂದು ಪ್ರಾಸಿಕ್ಯೂಟರ್‌ಗಳು ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ಗೆ ತಿಳಿಸಿದ್ದಾರೆ. ಈ ಹಿಂದೆ ಆಕೆಯ ನಿವಾಸದಲ್ಲಿ ತನಿಖೆ ನಡೆಸಿದಾಗ ಕೆಲ ಪತ್ರಗಳು ಪತ್ತೆಯಾಗಿದ್ದು, ಅದರಲ್ಲಿ ನಾನು ದೆವ್ವ, ಉದ್ದೇಶಪೂರ್ವಕವಾಗಿ ಕೊಂದಿದ್ದೇನೆ. ನಾನು ಕೆಟ್ಟವಳು, ಅದಕ್ಕಾಗಿಯೇ ಹಾಗೆ ಮಾಡಿದ್ದೇನೆ ಎಂದು ಬರೆದಿದ್ದ ಪತ್ರಗಳು ಪತ್ತೆಯಾಗಿದ್ದವು.

ಬ್ರಿಟನ್‌ನಲ್ಲಿ ಈ ಬೆಚ್ಚಿ ಬೀಳಿಸುವ ಪ್ರಕರಣ ಇದೇ ಮೊದಲೇನಲ್ಲ. ಈ ಹಿಂದೆಯೂ ಡಾಕ್ಟರ್ ಹೆರಾಲ್ಡ್ ಶಿಪ್‌ಮನ್ ಮತ್ತು ನರ್ಸ್ ಬೆವರ್ಲಿ ಅಲಿಟ್ ಎಂಬವರು ಇಂತಹದ್ದೇ ಕುಕೃತ್ಯ ಎಸಗಿದ್ದರು. ಶಿಪ್‌ಮನ್ 2004ರಲ್ಲಿ 15 ರೋಗಿಗಳನ್ನ ಕೊಂದಿದ್ದ. ಆಗ ಆತನಿಕೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದ್ರೆ ಅವನು ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದಕ್ಕೂ ಮುನ್ನ 1971 ಮತ್ತು 1998ರ ಅವಧಿಯಲ್ಲಿ ವೈದ್ಯ ಮಾರ್ಫಿನ್ ಎಂಬಾತ ವಿಷಪೂರಿತ ಚುಚ್ಚುಮದ್ದು ನೀಡಿ ಸುಮಾರು 250 ರೋಗಿಗಳನ್ನ ಮಾರಣಹೋಮವಾಗಿತ್ತು.

 

suddiyaana