ಕರಾವಳಿಗೆ ಬಂದಿಳಿದ ಬ್ರಿಟನ್‌ನ ‘ಕೊರ್ಗಿ’ ಶ್ವಾನ..!

ಕರಾವಳಿಗೆ ಬಂದಿಳಿದ ಬ್ರಿಟನ್‌ನ ‘ಕೊರ್ಗಿ’ ಶ್ವಾನ..!

ಬ್ರಿಟನ್ ಅರಮನೆಯ ಸಾಕು ನಾಯಿಯ ತಳಿ ಕರಾವಳಿಗೆ ಆಗಮಸಿದೆ. ಬ್ರಿಟನ್ ರಾಣಿಯ ಅರಮನೆಯ ಸಾಕುನಾಯಿ ವೆಲ್ಯ್ ಕೊರ್ಗಿಯ ತಳಿಗಳನ್ನ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಗೆ ಕರೆತರಲಾಗಿದೆ. ಕೊರ್ಗಿ ಬುದ್ಧಿವಂತ ನಾಯಿಯಲ್ಲಿ 11ನೇ ಸ್ಥಾನ ಪಡೆದಿದೆ. ಎರಡನೇ ರಾಣಿ ಎಲಿಜಬೆತ್ ಅವರು ಸುಮಾರು 30ಕ್ಕೂ ಹೆಚ್ಚು ಕೊರ್ಗಿ ತಳಿಯ ನಾಯಿಯನ್ನು ಸಾಕುತ್ತಾ ಬಂದಿದ್ದಾರೆ. ಅವರ ಬಳಿಕ ಈಗಲೂ ಅರಮನೆಯಲ್ಲಿ ಈ ನಾಯಿ ಸಾಕುತ್ತಿದ್ದಾರೆ.

ಇದನ್ನೂ ಓದಿ :  ರಾಷ್ಟ್ರ ರಾಜಧಾನಿಯಲ್ಲಿ ಭಯಾನಕ ಆ್ಯಸಿಡ್ ಅಟ್ಯಾಕ್!

ಬ್ರಿಟನ್ ದೇಶದಲ್ಲಿ ಕೊರ್ಗಿ ನಾಯಿಗಳಿಗೆ ಬಹಳ ಬೇಡಿಕೆಯಿದೆ. ಅಮೆರಿಕನ್ ಕೆನ್ ಕ್ಲಬ್‌ನಿಂದ 2020ರಲ್ಲಿ ಬಹಳ ಬುದ್ಧಿವಂತ ಎಂಬ ಬಿರುದನ್ನು ಕೊರ್ಗಿ ಪಡೆದಿರುತ್ತದೆ. ಕೊರ್ಗಿ ತಳಿಯ ಶ್ವಾನವನ್ನು ಹೊರ ದೇಶದಿಂದ ಆಮದು ಮಾಡಿ ದೆಹಲಿ ಮೂಲಕ ಮೂಲ್ಕಿಯ ರಾಯಲ್ ಪೆಟ್ ಶಾಪ್ ಗೆ ತರಿಸಲಾಗಿದೆ. ಕೊರ್ಗಿ ಯ ಗಂಡು ಮತ್ತು ಹೆಣ್ಣು ಮರಿಯನ್ನು ಅನಿತಾ ಸೋನ್ಸ್ ಎಂಬವರಿಗೆ ನೀಡಲಾಗಿದೆ. ಈ ಶ್ವಾನವೊಂದರ ಮಾರುಕಟ್ಟೆ ಬೆಲೆ 3 ಲಕ್ಷ ರುಪಾಯಿವರೆಗೂ ಇದೆ.

suddiyaana