ಬ್ರಿಟನ್‌ ರಾಜ 3 ನೇ ಚಾಲ್ಸ್‌ಗೆ ಕ್ಯಾನ್ಸರ್‌ – ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ ಮೋದಿ

ಬ್ರಿಟನ್‌ ರಾಜ 3 ನೇ ಚಾಲ್ಸ್‌ಗೆ ಕ್ಯಾನ್ಸರ್‌ – ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ ಮೋದಿ

ಬ್ರಿಟನ್​ ರಾಜ 3ನೇ ಚಾಲ್ಸ್​ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಿಂಗ್‌ ಚಾಲ್ಸ್‌ಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ. ರಾಜ ಚಾಲ್ಸ್‌ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ.

ಇದನ್ನೂ ಓದಿ: ನಾಯಿ ತಿನ್ನದೇ ಬಿಟ್ಟ ಬಿಸ್ಕತ್ತನ್ನು ತನ್ನ ಕಾರ್ಯಕರ್ತನಿಗೆ ಕೊಟ್ಟ ರಾಹುಲ್ ಗಾಂಧಿ!

75ರ ಹರೆಯದ ಕಿಂಗ್​ ಚಾಲ್ಸ್​​ ಕಳೆದ ತಿಂಗಳು ಅನಾರೋಗ್ಯದ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಮೂರು ದಿನಗಳ ಕಾಲ ಚಿಕಿತ್ಸೆ ಪಡೆದರು. ಈ ವೇಳೆ ಅವರಿಗೆ ಕ್ಯಾನ್ಸರ್​​ ಲಕ್ಷಣ ಇರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ. ಇದೀಗ ಕಿಂಗ್ ಚಾರ್ಲ್ಸ್ 3 ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್ಹ್ಯಾಮ್‌ ಅರಮನೆ ಸ್ಪಷ್ಟಪಡಿಸಿದೆ. ಅವರಿಗೆ ಕ್ಯಾನ್ಸರ್ ಇರುವುದರಿಂದ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳದೇ ಇರುವಂತೆ ವೈದ್ಯರು ತಿಳಿಸಿದ್ದಾರೆ. ಹೀಗಿದ್ದರೂ ಈ ಅವಧಿಯಲ್ಲಿ ಅಧಿಕೃತ ಕೆಲಸವನ್ನು ಮುಂದುವರಿಸುತ್ತಾರೆ ಎಂದು ಬಕಿಂಗ್ಹ್ಯಾಮ್‌ ಅರಮನೆ ಸ್ಪಷ್ಟಪಡಿಸಿದೆ.

ಈ ವಿಷಯದ ಬಗ್ಗೆ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಹಾರೈಸಿದ್ದಾರೆ. “3 ಚಾರ್ಲ್ಸ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಅವರಿಗೆ ಒಳ್ಳೆ ಆರೋಗ್ಯ ಸಿಗಲಿ. ಅದಕ್ಕೆ ನಾನು ಭಾರತದ ಜನರೊಂದಿಗೆ ಸೇರಿ ಹಾರೈಸುತ್ತೇನೆ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಕೂಡ ಚಾರ್ಲ್ಸ್‌ ಅವರಿಗೆ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅವರು ಶೀಘ್ರವೇ ಪೂರ್ಣ ಶಕ್ತಿಯೊಂದಿಗೆ ಮರಳುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ತಿಳಿಸಿ ಹಾರೈಸಿದ್ದಾರೆ.

Shwetha M