ದೀಪಾವಳಿಯಲ್ಲಿ ಈ ವಸ್ತುಗಳನ್ನ ಮನೆಗೆ ತಂದರೆ ಸಿಗಲಿದೆ ಲಕ್ಷ್ಮೀ ಆಶೀರ್ವಾದ

ದೀಪಾವಳಿಯಲ್ಲಿ ಈ ವಸ್ತುಗಳನ್ನ ಮನೆಗೆ ತಂದರೆ ಸಿಗಲಿದೆ  ಲಕ್ಷ್ಮೀ  ಆಶೀರ್ವಾದ

ದೀಪಾವಳಿ ಸಂಭ್ರಮ ಸಡಗರ ಶುರುವಾಗಿದೆ. ಈ  ದೀಪಾವಳಿಯಲ್ಲಿ ನಾವು ಹಲವು ರೀತಿಯ ಸಂಪ್ರದಾಯಗಳ ಅನುಸರಿಸುತ್ತೇವೆ. ಹಾಗೆ ದೀಪಾವಳಿಯಲ್ಲಿ ನಾವು ಲಕ್ಷ್ಮಿ ಪೂಜೆ ಮಾಡುವುದು ಸಾಮಾನ್ಯ. ಮನೆಯಲ್ಲಿ ಸಂಪತ್ತು, ಐಶ್ವರ್ಯ ಹೆಚ್ಚಾಗಲಿ ಎಂಬ ಕಾರಣಕ್ಕೆ ನಾವು ಲಕ್ಷ್ಮಿ ದೇವಿಯ ಪೂಜಿಸುತ್ತೇವೆ.  ಇನ್ನು ಈ ಸಮಯದಲ್ಲಿ ನಾವು ಕೆಲವೊಂದು ವಸ್ತುವನ್ನು ಮನೆಗೆ ತಂದರೆ ಶುಭವಾಗುತ್ತದೆ ಎಂದು ಪುರಾಣಗಳು, ಶಾಸ್ತ್ರಗಳು ಹೇಳಿವೆ. ಅದ್ರಲ್ಲೂ ದೀಪಾವಳಿಯಲ್ಲಿ ಈ ವಸ್ತುವನ್ನು ಮನೆಗೆ ತಂದರೆ ವಿಶೇಷವಾಗಿ ಲಕ್ಷ್ಮಿ ದೇವಿಯ ಕೃಪೆಗೆ ನಾವು ಪಾತ್ರರಾಗಬಹುದಂತೆ. ಹಾಗಾದ್ರೆ ಯಾವೆಲ್ಲಾ ವಸ್ತುಗಳಿಂದ ಲಕ್ಷ್ಮಿ ದೇವಿ ಸಂತೃಪ್ತಳಾಗುತ್ತಾಳೆ. ಯಾವ ವಸ್ತು ದೀಪಾವಳಿಯಲ್ಲಿ ಮನೆಗೆ ತಂದರೆ ಶುಭವಾಗುತ್ತೆ ಎಂಬುದನ್ನು ನೋಡೋಣ.

ಹೊಸ ಲಕ್ಷ್ಮಿ ಫೋಟೋ 

ಗಣೇಶ ಮತ್ತು ಕುಬೇರರ ಮೂರ್ತಿಗಳು

ಹಸಿ ಅರಿಶಿನ

ದಕ್ಷಿಣವರ್ತಿ ಶಂಖ

ಪೊರಕೆ

ಹಸು

ಚಿನ್ನ ಅಥವಾ ಬೆಳ್ಳಿ ನಾಣ್ಯಗಳು

ವಾಹನ

ವೀಳ್ಯದೆಲೆ

ಬಿಲ್ವ ಮತ್ತು ತುಳಸಿ ಎಲೆಗಳು

ಕಮಲ ಬೀಜ ಮತ್ತು ಕಮಲದ ಹೂವು

ಐದು ದೊಡ್ಡ ಮಣ್ಣಿನ ದೀಪಗಳು ಮತ್ತು 25 ಸಣ್ಣ ಮಣ್ಣಿನ ದೀಪಗಳು

ದೀಪಾವಳಿಯ ಸಮಯದಲ್ಲಿ ಈ ಎಲ್ಲಾ ವಸ್ತುಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಶಾಸ್ತ್ರದ ಪ್ರಕಾರ, ಹಬ್ಬಗಳ ಮೊದಲು ಈ ವಸ್ತುಗಳ ಮನೆಗೆ ತರಬೇಕು ಎಂದು ಹೇಳಲಾಗಿದೆ. ಲಕ್ಷ್ಮಿ, ಗಣೇಶ ಮತ್ತು ಕುಬೇರರ ಹೊಸ ವಿಗ್ರಹಗಳು ದೀಪಾವಳಿ ಪೂಜೆಗಾಗಿ ಖರೀದಿಸುವುದು ಉತ್ತಮ ಶುಭ ತರಲಿದೆ. ನೀವು ಚಿನ್ನ ಅಥವಾ ಬೆಳ್ಳಿ ವಿಗ್ರಹಗಳನ್ನು ಸಹ ಖರೀದಿಸಬಹುದು. ಮಣ್ಣಿನ ಮೂರ್ತಿಗಳನ್ನು ಕೂಡ ಖರೀದಿಸಬಹುದು.

Kishor KV