ಭಾರತದ ಬೌಲರ್ಸ್‌ಗಳೇ ತಂಡದ ತಾಕತ್ತು –ಟೀಮ್ ಇಂಡಿಯಾ ಬೌಲರ್ಸ್‌ಗಳಿಂದ ಅದ್ಭುತ ಪ್ರದರ್ಶನ

ಭಾರತದ ಬೌಲರ್ಸ್‌ಗಳೇ ತಂಡದ ತಾಕತ್ತು –ಟೀಮ್ ಇಂಡಿಯಾ ಬೌಲರ್ಸ್‌ಗಳಿಂದ ಅದ್ಭುತ ಪ್ರದರ್ಶನ

ಈ ಬಾರಿಯ ವರ್ಲ್ಡ್​​ಕಪ್​ನಲ್ಲಿ ಟೀಮ್ ಇಂಡಿಯಾ ಬೌಲಿಂಗ್ ನಿಜವಾಗಲೂ ಸಖತ್ ಸ್ಟ್ರಾಂಗ್ ಆಗಿದೆ. ಬ್ಯಾಟ್ಸ್​ಮನ್​ಗಳಿಗಿಂತಲೂ ಬೌಲರ್ಸ್​ಗಳೇ ಈ ಬಾರಿ ಹೆಚ್ಚು ಶೈನ್ ಆಗುತ್ತಿದ್ದಾರೆ. ಇರೋ ಅಷ್ಟೂ ಮಂದಿ ಬೌಲರ್ಸ್​ಗಳು ಬೆಸ್ಟ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಬ್ಯಾಟ್ ಬೀಸುತ್ತಿಲ್ಲ ಶ್ರೇಯಸ್ ಅಯ್ಯರ್ – ಮುಂದಿನ ಪಂದ್ಯಗಳಲ್ಲಿ ಟೀಮ್‌ನಲ್ಲಿ ಅವಕಾಶ ಉಳಿಸಿಕೊಳ್ತಾರಾ?

ಟೀಮ್ ಇಂಡಿಯಾ ಆಟಗಾರರು ಈ ಬಾರಿಯ ವಿಶ್ವಕಪ್‌ ಪಂದ್ಯಗಳಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಅದರಲ್ಲೂ ಭಾರತದ ಬೌಲರ್‌ಗಳು ಈ ಬಾರಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಜಸ್ಪ್ರಿತ್ ಬುಮ್ರಾ ಅಂತೂ ಎಲ್ಲಾ ಮ್ಯಾಚ್​ಗಳಲ್ಲಿ ಪವರ್​​ಪ್ಲೇನಲ್ಲಿ ಸಖತ್ತಾಗಿಯೇ ಬೌಲ್ ಮಾಡಿದ್ದಾರೆ. ರನ್​ ಬಿಟ್ಟು ಕೊಡೋದಿಲ್ಲ.. ವಿಕೆಟ್ ಕೂಡ ಪಡೆದಿದ್ದಾರೆ. ಇಂಗ್ಲೆಂಡ್​ ವಿರುದ್ಧ ಟೀಂ ಇಂಡಿಯಾಗೆ ಬ್ರೇಕ್ ಥ್ರೂ ನೀಡಿದ್ದೇ ಜಸ್ಪ್ರಿತ್ ಬುಮ್ರಾ. ಮೊದಲ ಎರಡು ವಿಕೆಟ್​​ಗಳನ್ನ ಮೇಲಿಂದ ಮೇಲೆ ಉರುಳಿಸಿದರು. ಬಳಿಕ ಸೂಪರ್​​​ಮ್ಯಾನ್​​ನ ಎಂಟ್ರಿಯಾಯ್ತು ನೋಡಿ.. ಮೊಹಮ್ಮದ್ ಶಮಿ.. ವಿರಾಟ್​ ಕೊಹ್ಲಿಯ ಫೇವರೇಟ್ ವರ್ಡ್ ಬೆನ್​ ಸ್ಟೋಕ್ಸ್​ರನ್ನ ಬೌಲ್ಡ್​ ಮಾಡಿದ ರೀತಿಯಂತೂ ಅದ್ಭುತವಾಗಿತ್ತು. ಫಸ್ಟ್​​ ಬಾಲ್​​​ನ್ನ ಕಂಪ್ಲೀಟ್ ಔಟ್​ ಸೈಡ್​ ದಿ ಆಫ್​ ಸ್ಟಂಪ್​ಗೆ ಎಸೆದಿದ್ದರು. ಇನ್ನೇನು ವೈಡ್​ ಬಾಲ್​ ಆಗುವ ರೇಂಜಿನಲ್ಲಿ ಫಸ್ಟ್ ಬಾಲ್ ಹಾಕಿದರು. 2ನೇ ಬಾಲ್​ ಇನ್ನೊಂದು ಸ್ವಲ್ಪ ಇನ್​ಸೈಡ್​ ಆಗಿ ಎಸೆದರು. 3ನೇ ಬಾಲ್ ಮತ್ತಷ್ಟು ಮತ್ತಷ್ಟು ಇನ್​​ಸೈಡ್.. 4ನೇ ಬಾಲ್​​ ಆಫ್​ ಸ್ಟಂಪ್​ ವಿಕೆಟ್ ಬಳಿಯೇ ಹಾದು ಹೋಗಿತ್ತು. 5ನೇ ಬಾಲ್​​ ಮತ್ತಷ್ಟು ಕ್ಲೋಸ್ ಆಗಿತ್ತು. 6ನೇ ಬಾಲ್​​ ಲೆಗ್​​ಸ್ಟಂಪ್​​ನಂತ ನುಗ್ಗಿ ಬರುತ್ತಲೇ ಬೆನ್​ಸ್ಟೋಕ್​ ಕ್ಲೀನ್​ ಬೌಲ್ಡ್ ಆದರು. ಶಮಿಯ ಆರೂ ಬಾಲ್​​ಗಳನ್ನ ಕೂಡ ಜಡ್ಜ್​ ಮಾಡುವಲ್ಲಿ ಬೆನ್​ಸ್ಟೋಕ್ಸ್​ ಕಂಪ್ಲೀಟ್ ಫೇಲ್ ಆಗಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಶಮಿ ಸ್ಟ್ರ್ಯಾಟಜಿಯನ್ನ ಸ್ಟೋಕ್ಸ್​​ಗೆ ರೀಡ್​ ಮಾಡೋಕೆ ಸಾಧ್ಯವಾಗಿರಲಿಲ್ಲ. ಸದ್ಯ ವರ್ಲ್ಡ್​ ಕ್ರಿಕೆಟ್​ನಲ್ಲಿ ಬೆಸ್ಟ್ ಸೀಮ್​ ಹೊಂದಿರುವ ಬೌಲರ್​​ ಅಂದ್ರೆ ಅದು ಮೊಹಮ್ಮದ್ ಶಮಿ. ವಿಶ್ವಕಪ್​ನಲ್ಲಿ ಇದುವರೆಗೆ ಶಮಿ ಆಡಿರುವ 13 ಪಂದ್ಯಗಳಲ್ಲಿ 39 ವಿಕೆಟ್​ಗಳನ್ನ ಪಡೆದಿದ್ದಾರೆ. ಅಂದ್ರೆ ಪ್ರತಿ ಮ್ಯಾಚ್​​ನಲ್ಲೂ ತಲಾ 3 ವಿಕೆಟ್​ಗಳನ್ನ ಪಡೆದಿದ್ದಾರೆ. ನೆಕ್ಸ್ಟ್ ಲೆವೆಲ್ ಬೌಲಿಂಗ್ ಅಂದ್ರೆ ಇದೇ ನೋಡಿ. ಇಂಥಾ ವರ್ಲ್ಡ್​ಕ್ಲಾಸ್ ಬೌಲರ್​​ನ್ನ ಮುಂದಿನ ಯಾವ ಮ್ಯಾಚ್​​ಗಳಲ್ಲೂ ಕೂಡ ಡ್ರಾಪ್​ ಮಾಡೋಕೆ ಸಾಧ್ಯವೇ ಇಲ್ಲ. ಮೊಹಮ್ಮದ್ ಶಮಿ ಟೀಂ ಇಂಡಿಯಾ ಪಾಲಿಗೆ ನಿಜಕ್ಕೂ ಗಿಫ್ಟೆಡ್ ಬೌಲರ್​ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಅಷ್ಟೇ ಯಾಕೆ, ವರ್ಲ್ಡ್​ಕಪ್​ನ ನೆಕ್ಸ್ಟ್ ಮ್ಯಾಚ್​ಗಳಲ್ಲಿ ಜಸ್ಪ್ರಿತ್ ಬುಮ್ರಾ ಜೊತಗೆ ಮೊಹಮ್ಮದ್ ಶಮಿ ಓಪನಿಂಗ್​ ಸ್ಪೆಲ್ ಹಾಕಿದ್ರೂ ಆಶ್ಚರ್ಯ ಇಲ್ಲ. ಬುಮ್ರಾ ಮ್ತತು ಶಮಿ.. ಇಬ್ರೂ ಲೀಥಲ್​ ಬೌಲರ್ಸ್​ ಓಪನಿಂಗ್ ಬೌಲಿಂಗ್ ಜೋಡಿ ಹೇಗಿರಬಹುದು ಅನ್ನೋದನ್ನ ಊಹಿಸ್ಕೊಳ್ಳಿ.

ಇನ್ನು ಮ್ಯಾಜಿಶೀಯನ್ ಕುಲ್​​ದೀಪ್​ ಯಾದವ್ ಬಗ್ಗೆ ಹೇಳಲೇಬೇಕು. ಡೇಂಜರಸ್ ಜಾಸ್ ಬಟ್ಲರ್​​ನ್ನ ಔಟ್​ ಮಾಡಿ ಮತ್ತೊಮ್ಮೆ ಮ್ಯಾಚ್​​ನ್ನೇ ಟರ್ನ್ ಮಾಡಿದ್ರು. ಜಾಸ್​ ಬಟ್ಲರ್ ಅಂತೂ ಯಾವುದೇ ಹಂತದಲ್ಲಿ ಬೇಕಾದ್ರೂ ಪಂದ್ಯದ ದಿಕ್ಕೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಬಟ್ಲರ್​ರನ್ನ ಬೇಗನೆ ಔಟ್ ಮಾಡೋದು ತುಂಬಾನೆ ಅನಿವಾರ್ಯವಾಗಿತ್ತು. ಕುಲ್​ದೀಪ್​ ಯಾದವ್ ಎಸೆದ ಬಾಲ್​ ಔಟ್​​ ಸೈಡ್​​ ದಿ ಆಫ್​​ ಸ್ಟಂಪ್​​ನತ್ತ ಪಿಚ್​​ ಆಗಿ ರೆಪ್ಪೆ ಮಿಟುಕಿಸುವಷ್ಟರಲ್ಲಿ ಇನ್​ಸೈಡ್​​ಗೆ ಸ್ಪಿನ್ ಆಗಿ ಬಟ್ಲರ್ ಕ್ಲೀನ್ ಬೌಲ್ಡ್ ಆಗ್ತಾರೆ. ಈ ಬಾಲ್​ 7.2 ಡಿಗ್ರಿಯಷ್ಟು ಟರ್ನ್ ಆಗಿತ್ತು. ಇದನ್ನ ಬಾಲ್​​ ಆಫ್​ ದಿ ಟೂರ್ನಮೆಂಟ್​​ ಅಂತಾನೆ ಹೇಳಲಾಗ್ತಿದೆ. ಡೌಡೇ ಇಲ್ಲಿ.. ಇದು ಈ ಬಾರಿಯ ವರ್ಲ್ಡ್​​ಕಪ್​ ದಿ ಬೆಸ್ಟ್ ಬಾಲ್.

ಇದು ಕುಲ್​​ದೀಪ್​ ಯಾದವ್​ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರ. ಕೆಲ ವೆಪನ್​​ಗಳನ್ನ ಅಷ್ಟೊಂದು ಅಗತ್ಯ ಬಿದ್ದಾಗ ಮಾತ್ರ, ಟೈಮಿಂಗ್​ ನೋಡ್ಕೊಂಡು ಪ್ರಯೋಗ ಮಾಡಬೇಕು. ಇದೊಂಥರಾ ಸರ್ಜಕಲ್ ಸ್ಟ್ರೈಕ್ ಇದ್ದ ಹಾಗೆ. ಪ್ರತಿ ಬಾರಿಯೂ ಸರ್ಜಿಕಲ್​​ ಸ್ಟ್ರೈಕ್ ಮಾಡೋಕೆ ಆಗಲ್ಲ. ಅಂಥಾ ಸಮಯ, ಸಂದರ್ಭ ಮಾತ್ರ ಸ್ಟ್ರೈಕ್​ ಮಾಡಲಾಗುತ್ತೆ. ಅದೇ ರೀತಿ ಕುಲ್​ದೀಪ್​ ಯಾದವ್​ 2ನೇ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಈ ಹಿಂದೆ 2019ರ ವರ್ಲ್ಡ್​​ಕಪ್​​ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಬರ್​ ಆಜಂರನ್ನ ಸೇಮ್ ಡೆಲಿವರಿ ಮೂಲಕ ಕುಲ್​ದೀಪ್ ಕ್ಲೀನ್​ ಬೌಲ್ಡ್ ಮಾಡಿದ್ರು. ಈಗ ಮತ್ತೊಮ್ಮೆ ಕುಲ್​ದೀಪ್​ ಸರ್ಜಿಕಲ್​ ಸ್ಟ್ರೈಕ್​​ಗೆ ಜಾಸ್ ಬಟ್ಲರ್ ಬಲಿಯಾಗಿದ್ದಾರೆ.

 

Sulekha