ಭಾರತದ ಕುಸ್ತಿ ಫೆಡರೇಷನ್ ಚುನಾವಣೆ – ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಆಯ್ಕೆ

ಭಾರತದ ಕುಸ್ತಿ ಫೆಡರೇಷನ್ ಚುನಾವಣೆ – ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಆಯ್ಕೆ

ಸಾಕಷ್ಟು ವಿಳಂಬವಾಗಿದ್ದ ಭಾರತದ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಚುನಾವಣೆಯು ಗುರವಾರ ನಡೆದಿದ್ದು, ಫಲಿತಾಂಶ ಕೂಡ ಹೊರಬಿದ್ದಿದೆ. ಡಬ್ಲ್ಯುಎಫ್‌ಐ ನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಂಜಯ್‌ ಸಿಂಗ್‌ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹಣ ಸಂಗ್ರಹಿಸೋ ವಿಚಾರದಲ್ಲೂ ಕಾಂಗ್ರೆಸ್ ಮಹಾ ಎಡವಟ್ಟು! – ಬಿಜೆಪಿ ಆಡಿದ ಗೇಮ್ ಏನು?  

ಅಧ್ಯಕ್ಷ  ಸ್ಥಾನಕ್ಕೆ ಆಯ್ಕೆಯಾದ ಸಂಜಯ್ ಸಿಂಗ್ , ಈ ಹಿಂದೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದು ವಿವಾದಕ್ಕೀಡಾಗಿದ್ದ  ಡಬ್ಲ್ಯುಎಫ್‌ಐನ ನಿರ್ಗಮಿತ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತರಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ  ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಮತ್ತು ಸಂಜಯ್ ನಡುವೆ ಪೈಪೋಟಿ ನಡೆದಿತ್ತು.

ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಡಬ್ಲ್ಯುಎಫ್‌ಐ ಚುನಾವಣೆಗೆ ಈ ವರ್ಷದ ಆಗಸ್ಟ್ 11ರಂದು ತಡೆಯಾಜ್ಞೆ ನೀಡಿತ್ತು. ಬಳಿಕ ಚುನಾವಣೆಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೆರವುಗೊಳಿಸಿತ್ತು. ಆಗಸ್ಟ್ 7ರಂದು ಪ್ರಕಟಿಸಲಾದ ಮತದಾರರ ಪಟ್ಟಿಯ ಪ್ರಕಾರ ಚುನಾವ ಗುರುವಾರ ಚುನಾವಣೆ ನಡೆಸಲಾಗಿದೆ.

Shwetha M