IPL ಫೈನಲ್‌ಗೂ ಮುನ್ನವೇ ಸ್ಟೇಡಿಯಂ ಬಳಿ ಬ್ಲಾಸ್ಟ್! – ಪಂದ್ಯದ ಸ್ಥಳ ಬದಲಾವಣೆಯಾಗುತ್ತಾ?

RCB Vs PBKS ನಡುವೆ IPL ಫೈನಲ್ ಪಂದ್ಯ ನಡೆಯಲು ಕೆಲವೇ ಗಂಟೆಗಳು ಬಾಕಿಯಿದೆ. ಕಪ್ ಗೆಲ್ಲುವ ತಂಡ ಯಾವುದು ಎಂಬ ಕುತೂಹಲ ಮೂಡಿದೆ. ಆದ್ರೀಗ ಸ್ಟೇಡಿಯಂ ಬಳಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: RCB ಕಪ್ ಕನಸಿಗೆ ಮಳೆ ವಿಘ್ನ? – ಪಂದ್ಯ ರದ್ದಾದ್ರೆ PBKS ಚಾಂಪಿಯನ್
ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ. ಈ ಹೊತ್ತಲ್ಲೇ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಟೇಡಿಯಂನ ಗೇಟ್ ನಂಬರ್ 1ರ ಬಳಿ ಘಟನೆ ನಡೆದಿದೆ. ಕ್ರೀಡಾಂಗಣದ ಹೊರಗೆ ಫುಟ್‌ಪಾತ್‌ನಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ನಿರ್ಲಕ್ಷ್ಯದಿಂದಾಗಿ ಸಿಲಿಂಡರ್ ಸ್ಫೋಟಗೊಂಡಿರಬಹುದು ಎನ್ನಲಾಗಿದೆ. IPL ಪಂದ್ಯದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆಪರೇಷನ್ ಸಿಂಧೂರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಮಾರಂಭವನ್ನು ಭಾರತೀಯ ಸೇನೆಗೆ ಸಮರ್ಪಿಸಲಾಗುತ್ತದೆ. ಖ್ಯಾತ ಗಾಯಕ ಶಂಕರ್ ಮಹದೇವನ್ ಸೇರಿದಂತೆ ಅನೇಕರು ಪ್ರದರ್ಶನ ನೀಡಲಿದ್ದಾರೆ.

ನೋಡಿರಿ

