ವಧುವಿನ ಮನೆಗೆ ವರನ ಕಡೆಯಿಂದ 15 ಟ್ರ್ಯಾಕ್ಟರ್‌ಗಳಲ್ಲಿ ಬಂತು ಉಡುಗೊರೆ – 500 ಗಿಫ್ಟ್ ನೋಡಿ ಸಂಭ್ರಮಿಸಿದ ಮದುಮಗಳು..!

ವಧುವಿನ ಮನೆಗೆ ವರನ ಕಡೆಯಿಂದ 15 ಟ್ರ್ಯಾಕ್ಟರ್‌ಗಳಲ್ಲಿ ಬಂತು ಉಡುಗೊರೆ – 500 ಗಿಫ್ಟ್ ನೋಡಿ ಸಂಭ್ರಮಿಸಿದ ಮದುಮಗಳು..!

ಈಗಿನ ಕಾಲದಲ್ಲಿ ಏನೇ ಮಾಡಿದರೂ ಸಮ್‌ಥಿಂಗ್ ಸ್ಪೆಷಲ್. ಅದರಲ್ಲೂ ಮದುವೆ, ಎಂಗೇಜ್‌ಮೆಂಟ್ ಇದ್ದರೆ ಅದು ಯಾವಾಗಲೂ ನೆನಪಿನಲ್ಲಿ ಉಳಿಯಬೇಕು ಅನ್ನೋ ಆಸೆ ಅನೇಕರದ್ದು. ಆದರೆ, ಇಲ್ಲೊಬ್ಬರು ತಮ್ಮ ನಿಶ್ಚಿತಾರ್ಥದ ದಿನ ಬರೀ ಹುಡುಗಿಗೆ ಮಾತ್ರ ಸರ್‌ಪ್ರೈಸ್ ಕೊಟ್ಟಿಲ್ಲ. ಇಡೀ ಗ್ರಾಮಕ್ಕೆ ಗ್ರಾಮವೇ ಅಬ್ಬಬ್ಬಾ ಅನ್ನೋ ರೀತಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಜೊತೆಗೆ ವಧುವಿನ ಮನೆಗೆ ವರನ ಕಡೆಯಿಂದ ಬಂದ ಉಡುಗೊರೆ ನೋಡಿ ಬಂಧು, ಬಾಂಧವರು ಕೂಡಾ ಬೆರಗಾಗಿದ್ದಾರೆ. ಇಂಥಾ ಒಂದು ಸರ್‌ಪ್ರೈಸ್ ಎಂಗೇಜ್‌ಮೆಂಟ್ ನಡೆದಿರುವುದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿರುವ ರಾಜೇಶ್ ಅಲಿಯಾಸ್ ತಿರುಂತೈಯನ್ ಅವರು ಸಾಕಷ್ಟು ಮದುವೆ, ನಿಶ್ಚಿತಾರ್ಥದಂತಹ ಶುಭಸಮಾರಂಭಗಳನ್ನು ನಡೆಸಿಕೊಟ್ಟಿದ್ದಾರೆ. ಮೊನ್ನೆ ಅವರದ್ದೇ ಎಂಗೇಜ್‌ಮೆಂಟ್ ಫಿಕ್ಸ್ ಆಗಿತ್ತು. ತನ್ನ ನಿಶ್ಚಿತಾರ್ಥಕ್ಕೆ ತನ್ನ ಹುಡುಗಿಗೆ ಸರ್‌ಪ್ರೈಸ್ ಕೊಟ್ಟು ಮೆಚ್ಚಿಸಬೇಕು ಅನ್ನೋ ಯೋಚನೆ ರಾಜೇಶ್ ಅವರದ್ದು. ಅದಕ್ಕಾಗಿ ವಧುವಿನ ಮನೆಗೆ ನಿಶ್ಚಿತಾರ್ಥಕ್ಕೆ ಬಂದಾಗ ರಾಜೇಶ್ ಕಡೆಯವರು 15 ಟ್ರ್ಯಾಕ್ಟರ್‌ ಗಳಲ್ಲಿ ಉಡುಗೊರೆ ತುಂಬಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಅಪ್ಪನ ಜಾಗಕ್ಕೆ ಮಗಳು ವರ್ಗಾವಣೆ , ತಂದೆ ಕೈಯಿಂದಲೇ ಅಧಿಕಾರ ಸ್ವೀಕಾರ – ಮಂಡ್ಯದ ಪೊಲೀಸ್ ಠಾಣೆಯಲ್ಲಿ ಭಾವುಕ ಕ್ಷಣ..!

ರಾಜೇಶ್ ಅಲಿಯಾಸ್ ತಿರುಂತೈಯನ್ ಅವರಿಗೆ ಮಲೇಶ್ಯಾದಲ್ಲಿರುವ ದೂರದ ಸಂಬಂಧಿ ಥಿನೋಶಾರ ಜೊತೆ ನಿಶ್ಚಿತಾರ್ಥ ಫಿಕ್ಸ್ ಆಗಿತ್ತು. ಈ ಸಮಾರಂಭದಲ್ಲಿ ಔಪಚಾರಿಕವಾಗಿ ಉಡುಗೊರೆಗಳನ್ನು ನೀಡುವ ಕಾರ್ಯಕ್ರಮ ನಡೆದಿದೆ. ಪುರೋಹಿತರು ಲಗ್ನಪತ್ರಿಕೆಯನ್ನು ವಾಚಿಸಿದ ನಂತರ ದಂಪತಿ ನಡುವೆ ಉಂಗುರಗಳನ್ನು ಬದಲಾಯಿಸಲಾಯಿತು. ನಂತರ ವರನ ಕಡೆಯವರು ಬರೋಬ್ಬರಿ 500 ಉಡುಗೊರೆಗಳನ್ನು ವಧುವಿಗೆ ನೀಡಿ ಆಶ್ಚರ್ಯ ಆಗುವಂತೆ ಮಾಡಿದರು. ಈ ಉಡುಗೊರೆಗಳಲ್ಲಿ ಹಣ್ಣುಗಳು, ಡ್ರೈಫ್ರೂಟ್ಸ್, ಚಾಕೊಲೇಟ್ಸ್, ಮೇಕಪ್ ಪರಿಕರಗಳು, ಹ್ಯಾಂಡ್ ಬ್ಯಾಗ್, ಕೆಲವು ಆಟಿಕೆಗಳು ಸೇರಿದ್ದರು. ಮತ್ತೊಂದು ವಿಶೇಷತೆಯೆಂದರೆ ಈ ಎಲ್ಲಾ ಉಡುಗೊರೆಗಳನ್ನು ಬೆಳ್ಳಿಯ ತಟ್ಟೆಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಿ 15 ಟ್ರ್ಯಾಕ್ಟರ್‌ಗಳಲ್ಲಿ ವರನ ಕುಟುಂಬದವರು ಕಾರ್ಯಕ್ರಮದ ಸಭಾಂಗಣಕ್ಕೆ ತಂದಿದ್ದಾರೆ. ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ವಧುವಿನ ಮನೆಗೆ ಅಲಂಕರಿಸಿದ ಟ್ರ್ಯಾಕ್ಟರ್‌ಗಳ ಮೆರವಣಿಗೆಯ ಮೂಲಕ ತರಲಾಗಿದೆ. ಇದನ್ನೆಲ್ಲಾ ನೋಡಿದ ಗ್ರಾಮಸ್ಥರು ಆಶ್ಚರ್ಯಚಕಿತರಾದರು. ವಧುಗೆ ಇಷ್ಟೊಂದು ಉಡುಗೊರೆಗಳನ್ನು ನೀಡುವ ಆಲೋಚನೆ ಏಕೆ ಬಂತು ಎಂದು ವರನ ಕೇಳಿದರೆ, “ನಾನು ಏನು ಮಾಡಿದರೂ, ಅದು ವಿಶೇಷವಾಗಿರಲು ಬಯಸುತ್ತೇನೆ ಮತ್ತು ನಾನು ಇವೆಂಟ್ ಆಯೋಜಕ ಮತ್ತು ಮದುವೆಯ ಯೋಜಕನಾಗಿದ್ದೇನೆ. ಆದ್ದರಿಂದ ನಾವು ಸಾಮಾನ್ಯವಾಗಿ ಜನರನ್ನು ಆಕರ್ಷಿಸಲು ಯೋಚಿಸುತ್ತೇವೆ ಮತ್ತು ನಾವು ವಧುವನ್ನು ಅಚ್ಚರಿಗೊಳಿಸಲು ಬಯಸುತ್ತೇವೆ. ನಮ್ಮ ಕುಟುಂಬವು ಈವೆಂಟ್ ಮ್ಯಾನೇಜ್ಮೆಂಟ್ ವ್ಯವಹಾರದಲ್ಲಿದೆ . ಹಾಗಾಗಿ ಈ ನಿರ್ಧಾರ ಕೈಗೊಂಡೆವು ಎಂದು ತಿಳಿಸಿದ್ದಾರೆ.

suddiyaana