ತಂಗಿ ಮದುವೆಗೆ ಬಂದ ಗೆಸ್ಟ್‌ಗಳಿಗೆ 24 ಕ್ಯಾರೆಟ್ ಗೋಲ್ಡ್‌ ಬಿಸ್ಕತ್ತುಗಳನ್ನೇ ಗಿಫ್ಟ್‌ ಕೊಟ್ಟ ಅಣ್ಣ!

ತಂಗಿ ಮದುವೆಗೆ ಬಂದ ಗೆಸ್ಟ್‌ಗಳಿಗೆ 24 ಕ್ಯಾರೆಟ್ ಗೋಲ್ಡ್‌ ಬಿಸ್ಕತ್ತುಗಳನ್ನೇ ಗಿಫ್ಟ್‌ ಕೊಟ್ಟ ಅಣ್ಣ!

ಈಗೀಗ ಮದುವೆ ಸಮಾರಂಭಗಳನ್ನು ಗ್ರ್ಯಾಂಡ್‌ ಆಗಿ ಆಯೋಜನೆ ಮಾಡಲಾಗುತ್ತೆ. ಮದುವೆಗೆ ಬಂದ ಅತಿಥಿಗಳಿಗೂ ದುಬಾರಿ ಗಿಫ್ಟ್‌ ನೀಡಲಾಗುತ್ತೆ. ಆದ್ರೀಗ ಇಲ್ಲೊಂದು ಕಡೆ ತಂಗಿ ಮದುವೆಗೆ ಬಂದ ಅತಿಥಿಗಳಿಗೆ ಅಣ್ಣ ಚಿನ್ನದ ಬಿಸ್ಕತ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾನೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಹೆಂಡತಿಗೆ ಗರ್ಭಪಾತ ಆಗಿದ್ದಕ್ಕೆ ಪಕ್ಕದ ಮನೆಯವರನ್ನು ದೇವರಿಗೆ ಬಲಿ ಕೊಟ್ಟ ವ್ಯಕ್ತಿ!

ಸೌದಿ ಅರೇಬಿಯಾದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದು ಅಚ್ಚರಿ ಮೂಡಿಸಿದೆ. ವಧುವಿನ ಸಹೋದರ ಮದುವೆಗೆ ಬಂದ ಅತಿಥಿಗಳಿಗೆ  24 ಕ್ಯಾರೆಟ್ ಚಿನ್ನದ ಬಿಸ್ಕತ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾನೆ. ಚಿನ್ನದ ಬಿಸ್ಕತ್ತುಗಳನ್ನು ನೀಡುತ್ತಿರುವ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ವೈರಲ್‌ ಆದ ವಿಡಿಯೋದಲ್ಲಿ, ಸಾಂಪ್ರದಾಯಿಕ ಅರಬ್ ಉಡುಗೆಯಲ್ಲಿ ಅತಿಥಿಗಳು ಸಾಲಾಗಿ ಕುಳಿತಿರುವುದನ್ನು ಕಾಣಬಹುದು. ಈ ವೇಳೆ ವಧುವಿನ ಅಣ್ಣನು ಹೊಳೆಯುವ ಹಳದಿ ಬಣ್ಣದ ಬಿಸ್ಕತ್ತುಗಳನ್ನು ಒಬ್ಬೊಬ್ಬರಿಗೇ ಕೊಡುತ್ತಾ ಹೋಗುತ್ತಾನೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಇವು ನಿಜವಾದ 24 ಕ್ಯಾರೆಟ್ ಚಿನ್ನದ ಬಿಸ್ಕತ್ತುಗಳಲ್ಲ, ಅವು ಐಷಾರಾಮಿ ಚಾಕೊಲೇಟ್‌ಗಳು, ಚಿನ್ನದ ಬಾರ್‌ಗಳಂತೆ ಕಾಣುವಂತೆ ಚಿನ್ನದ ಹಾಳೆಯಲ್ಲಿ ಸುತ್ತಿಡಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಬ್ಬರು ಇದು ಚಾಕೊಲೇಟ್ ಅಲ್ಲ, ಇದು ಚಿನ್ನದ ಬಾರ್. ಸೌದಿ ಅರೇಬಿಯಾದಲ್ಲಿ ನಾವು ಮದುವೆಯಲ್ಲಿ ಇದನ್ನು ಮಾಡುತ್ತೇವೆ ಎಂದಿದ್ದಾರೆ. ಸೌದಿ ಅರೇಬಿಯಾದಲ್ಲಿ ಮದುವೆಯ ವೇಳೆ ವಧುವಿಗೆ ‘ಮಹರ್’ ರೂಪದಲ್ಲಿ ಚಿನ್ನ ನೀಡುವುದು ಸಾಮಾನ್ಯ. ಆದರೆ, ಸಾರ್ವಜನಿಕ‌ ವಾಗಿ ಎಲ್ಲರಿಗೂ ಚಿನ್ನದ ಬಿಸ್ಕತ್ತು ಹಂಚುವುದು ಅತಿ ವಿರಳ ಎಂದು ಕೆಲವರು ಚರ್ಚೆ ಮಾಡಿದ್ದಾರೆ.

Shwetha M