ಮದುವೆಗೂ 2 ಗಂಟೆ ಮುಂಚೆ ಲವರ್‌ನ ಭೇಟಿಯಾದ ಮದುಮಗಳು- ಆಮೇಲೆ ಆಗಿದ್ದೇ ಬೇರೆ!

ಮದುವೆಗೂ 2 ಗಂಟೆ ಮುಂಚೆ ಲವರ್‌ನ ಭೇಟಿಯಾದ ಮದುಮಗಳು-  ಆಮೇಲೆ  ಆಗಿದ್ದೇ ಬೇರೆ!

ಪ್ರೀತಿ ಅನ್ನೋದೆ ಹಾಗೇ ಯಾವಾಗ ಹುಟ್ಟುತ್ತೆ? ಎಲ್ಲಿ ಹುಟ್ಟುತ್ತೆ ಅನ್ನೋದ್ದನ್ನ ಹೇಳುವುದ್ದಕ್ಕೆ ಆಗಲ್ಲ.  ಕೆಲವೊಂದಿಷ್ಟು ಜನ ಈ ಪ್ರೀತಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಕೆಲವರು ಮನೆಯವರ ಒತ್ತಾಯಕ್ಕೆ ಬೇರಯವರನ್ನ ಮದುವೆಯಾಗ್ತಾರೆ. ಆದ್ರೂ ಪ್ರೀತಿಸಿದವರನ್ನ ಮರೆಯುವುದು ತುಂಬಾ ಕಷ್ಟ. ಅದರಂತೆ ಮದುವೆಗೆ 2 ಗಂಟೆಯ ಮೊದಲು ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಭೇಟಿಯಾದ   ಘಟನೆ ನಡೆದಿದೆ. ವಿವಾಹ ಸಮಾರಂಭಕ್ಕೆ ಕೇವಲ ಎರಡು ಗಂಟೆಗಳ ಮೊದಲು ವಧು ತನ್ನ ಮಾಜಿ ಪ್ರಿಯಕರನನ್ನು ಭೇಟಿಯಾಗಿದ್ದಾಳೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿಸಖತ್‌  ವೈರಲ್ ಆಗುತ್ತಿದೆ

ಮದುವೆಗೆ 2 ಗಂಟೆಗಳ ಮೊದಲು ಯುವತಿ ತನ್ನ ಪ್ರೇಮಿಯನ್ನು ಭೇಟಿಯಾಗಿರುವ ದೃಶ್ಯ ಕಂಡು ಬಂದಿದೆ. ವೈರಲ್ ಆಗಿರುವ ವಿಡಿಯೊದಲ್ಲಿ, ವಧು ತನ್ನ ಮದುವೆಯ ಆಲಂಕಾರದಲ್ಲಿ ಇರುವಾಗಲೇ ತನ್ನ ಆಪ್ತ ಗೆಳತಿ ಹಾಗೂ ಗೆಳಯನೊಂದಿಗೆ ಕಾರಿನಲ್ಲಿ ಕುಳಿತಿರುತ್ತಾಳೆ. ಕಾರು ನಿಲ್ಲುತ್ತಿದ್ದಂತೆ, ಮಹಿಳೆ ಹೊರಬಂದು ತನ್ನ ಮಾಜಿ ಲವರ್ ನ ಭೇಟಿಯಾಗಿದ್ದಾಳೆ. ದೂರದಿಂದ, ಇಬ್ಬರೂ ಆಳವಾದ ಭಾವನಾತ್ಮಕ ಸಂಭಾಷಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಅವರ ನಡುವಿನ ಮಾತುಗಳು ಯಾರಿಗೂ ಕೇಳಿಸದಿದ್ದರೂ, ಅವರ ಮನಸ್ಸಿನ ನೋವು, ಯಾತನೆ ಸ್ಪಷ್ಟವಾಗಿ ಕಾಣುತಿತ್ತು. ಆಮೇಲೆ  ಒಬ್ಬರನ್ನೊಬ್ಬರು ಅಪ್ಪಿಕೊಳ್ತಾರೆ.

 ಆಮೇಲೆ ಮಾಜಿ ಗೆಳೆಯನ ಭೇಟಿಯಾಗಿ ವಧು ಕಣ್ಣೀರು ಹಾಕುತ್ತಾ ಕಾರಿನಲ್ಲಿ ಕೂರುತ್ತಾಳೆ. ಆಕೆಯ ಸ್ನೇಹಿತೆ ತನ್ನ ನಿರ್ಧಾರವನ್ನು ಬದಲಾಯಿಸಿ ತನ್ನ ಹಿಂದಿನ ಸಂಗಾತಿಯನ್ನು ಮದುವೆಯಾಗಲು ಬಯಸುತ್ತೀಯಾ ಎಂದು ಕೇಳುತ್ತಾಳೆ. ಗೆಳತಿ ಸಲಹೆ ನೀಡಿದಾಗ, ವಧು ಮೌನವಾಗಿ ಕಾರು ಚಲಾಯಿಸಿ ವಿವಾಹ ನಡೆಯುವ ಸ್ಥಳಕ್ಕೆ ಹೋಗುವಂತೆ ಸೂಚಿಸಿ, ತನ್ನ ಮದುವೆ ನಿರ್ಧಾರವನ್ನು ಮುಂದುವರಿಸುತ್ತಾಳೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಹೆಚ್ಚಿನವರು ವಧುವಿನ ನೈತಿಕತೆಯನ್ನು ಪ್ರಶ್ನಿಸಿದ್ದಾರೆ. ಒಬ್ಬರು ಆಕೆ ಮಾಜಿ ಪ್ರಿಯಕರನನ್ನೇ ಮದುವೆ ಆಗಬಹುದಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಈಗಿನ ದಿನಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದೆ. ನಿಜವಾದ ಪ್ರೀತಿಗೆ ಬೆಲೆ ಇಲ್ಲ ಎಂದು ಹೇಳಿದ್ದಾರೆ. ಆದ್ರೆ ಈ ವಿಡಿಯೋದಿಂದ ಈಕೆ ಸಂಸಾರದಲ್ಲಿ ಬಿರುಗಾಳಿ ಎಳದಿರಲಿ ಅನ್ನುತ್ತಿದ್ದಾರೆ ನೆಟ್ಟಿಗರು.

Kishor KV